ನವದೆಹಲಿ:ಮರಿ ಘೇಂಡಾಮೃಗವೊಂದು ಮೇಕೆಯನ್ನು ಅಣಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಸ್ನೇಹಕ್ಕೆ ಯಾವುದೇ ಯಾವುದೇ ಜಾತಿ, ಧರ್ಮ ಅಥವಾ ಭಾಷೆಯ ಅಡೆತಡೆಗಳಿಲ್ಲ ಎಂಬುದನ್ನು ಈ ವಿಡಿಯೋ ನಿರೂಪಿಸಿದೆ.
14 ಸೆಕೆಂಡ್​ ಉದ್ದದ ವಿಡಿಯೋ ತುಣಕನ್ನು ಫ್ಯಾಸಿನೇಟಿಂಗ್​ (Fascinating) ಹೆಸರಿನ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದೆ. ಮೇಕೆ ಜಿಗಿಯುವುದನ್ನು ನೋಡಿದ ಘೇಂಡಾಮೃಗದ ಮರಿ ಅದರಂತೆ ತಾನೂ ಜಿಗಿಯಲು ಯತ್ನಿಸುತ್ತದೆ. ಆದರೆ, ಮೇಕೆಗಿಂತ ಘೇಂಡಾಮೃಗ ಗಾತ್ರದಲ್ಲಿ ದಪ್ಪವಾಗಿರುವುದಿಂದ ಮೇಕೆಯಂತೆ ಮಾಡುವುದ ತುಸು ಕಷ್ಟವಾಯಿತು.
ಅಂದಹಾಗೆ ಮೇಕೆ ಮತ್ತು ಘೇಂಡಾಮೃಗದ ಮರಿ ಸ್ನೇಹಿತರು. ಈ ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಈವೆರೆಗೂ 2.3 ಮಿಲಿಯನ್​ಗೂ ಅಧಿಕ ವೀಕ್ಷಣೆಯನ್ನು ವಿಡಿಯೋ ಪಡೆದುಕೊಂಡಿದೆ. 1 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್​ ಮಾಡಿದ್ದು, 400 ಕ್ಕೂ ಹೆಚ್ಚು ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ. ಈ ವಿಡಿಯೋ ನೋಡಿ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.(ಏಜೆನ್ಸೀಸ್​)
A baby rhino imitates his goat friend.pic.twitter.com/IpzEKlcga1
— Fascinating (@fasc1nate)November 4, 2022

ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ಸಾನಿಯಾ-ಶೋಯೆಬ್​ ದಾಂಪತ್ಯದಲ್ಲಿ ಬಿರುಕು? ಅನುಮಾನಕ್ಕೆ ಕಾರಣವಾದ ಇನ್​ಸ್ಟಾಗ್ರಾಂ ಪೋಸ್ಟ್!​

18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಹಣದ ವ್ಯವಹಾರ ಕಂಡು ದಂಗಾದ ಇಡಿ ಅಧಿಕಾರಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
