ಪಟನಾ:ಕರೊನಾ ಲಾಕ್​ಡೌನ್​​ನಿಂದಾಗಿ ಮನೆ, ಉದ್ಯೋಗ ಕಳೆದುಕೊಂಡು ಹೊಟ್ಟೆಗಿಲ್ಲದೆ ತೀವ್ರ ಸಂಕಷ್ಟಕ್ಕೀಡಾದವರು ವಲಸೆ ಕಾರ್ಮಿಕರು.
ಪರ ಊರಿನಲ್ಲಿ ಇರಲು ಆಗದೆ ಹೋಚಿಕ್ಕಚಿಕ್ಕ ಮಕ್ಕಳನ್ನು ಎತ್ತಿಕೊಂಡು ನೂರಾರು ಕಿಲೋಮೀಟರ್​ ನಡೆದವರು, ದಾರಿ ಮಧ್ಯೆಯೇ ಜೀವ ಕಳೆದುಕೊಂಡವರು ಹಲವಾರು ಮಂದಿ. ಈ ಕರೊನಾ ಶುರುವಾದಾಗಿನಿಂದ ಅದೆಷ್ಟೋ ಮನಕಲಕುವ ಘಟನೆಗಳು ನಡೆದುಹೋಗಿವೆ.
ಈಗ ವಲಸೆ ಕಾರ್ಮಿಕರಿಗೆ ಸಂಬಂಧಪಟ್ಟ ಇನ್ನೊಂದು ಕರುಣಾಜನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ವೈರಲ್​ ಆಗಿದೆ.
ಬಿಹಾರದ ಮುಜಾಫರ್​ಪುರದ ರೈಲ್ವೆ ಸ್ಟೇಶನ್​​ನಲ್ಲಿ ಪುಟ್ಟ ಮಗುವೊಂದು ತನ್ನ ಅಮ್ಮನ ಶವಕ್ಕೆ ಹೊದೆಸಲಾದ ಬಟ್ಟೆಯೊಂದಿಗೆ ಆಟವಾಡುವ ಮನಕಲಕುವ ದೃಶ್ಯ ಇದು. ಆ ಮಗುವಿಗೆ ಗೊತ್ತೇ ಇಲ್ಲ, ತನ್ನಮ್ಮಂಗೆ ಜೀವ ಇಲ್ಲ. ಅವಳು ಇನ್ನು ಏಳಲಾರಳು ಎಂಬುದು…
ಇದನ್ನೂ ಓದಿ:ಅರ್ಧದಿನದಲ್ಲಿ 122 ಹೊಸ ಕರೊನಾ ಕೇಸ್​​ಗಳು: ಇವತ್ತು ಈ ಜಿಲ್ಲೆಗೆ ಬಿಗ್​ ಶಾಕ್​…
ಆ ಮಹಿಳೆ ರೈಲ್ವೆ ಸ್ಟೇಶನ್​ನ ನೆಲದ ಮೇಲೆ ಜೀವವಿಲ್ಲದೆ ಮಲಗಿದ್ದಾಳೆ. ಆಕೆಯ ಮೈಮೇಲೆ ಒಂದು ಚಾದರಂತಹ ಬಟ್ಟೆ ಹೊದೆಸಲಾಗಿದೆ. ಆಕೆಯ ಪುಟ್ಟ ಮಗು, ಆ ಬಟ್ಟೆಯನ್ನು ಅಮ್ಮನ ಮೈಮೇಲಿಂದ ತೆಗೆಯುತ್ತದೆ. ಅದನ್ನು ತನ್ನ ಮೇಲೆ ಹಾಕಿಕೊಂಡು ಮುಚ್ಚಿಕೊಳ್ಳುತ್ತದೆ. ಮತ್ತದನ್ನು ತೆಗೆದು ಅಲ್ಲಿಯೇ ಇಡುತ್ತದೆ. ಹಾಗೇ ಅಲ್ಲೇ ಸುತ್ತಮುತ್ತ ಓಡಾಡುತ್ತ ಆಟವಾಡುತ್ತದೆ. ಅಮ್ಮನನ್ನು ಎಬ್ಬಿಸುವ ಪ್ರಯತ್ನ ಮಾಡುತ್ತದೆ. ಮಹಿಳೆ ಪಕ್ಕದಲ್ಲಿ ದೊಡ್ಡ ದೊಡ್ಡ ಬ್ಯಾಗ್​ಗಳಿವೆ. ಇನ್ನೊಬ್ಬ ಬಾಲಕನನ್ನೂ ವಿಡಿಯೋದಲ್ಲಿ ನೋಡಬಹುದು.
ಗುಜರಾತ್​​ನಿಂದ ಬಂದ ಶ್ರಮಿಕ್​ ರೈಲಿನಲ್ಲಿ ಬಿಹಾರದ ಮುಜಾಫರ್​ಪುರ ರೈಲ್ವೆ ಸ್ಟೇಶನ್​​ಗೆ ಬಂದಿಳಿದ ಈ ಮಹಿಳೆ ಡಿಹೈಡ್ರೇಶನ್​ನಿಂದ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಆಕೆಗೆ ಹಸಿವಾಗಿತ್ತು. ಸಿಕ್ಕಾಪಟೆ ಉಷ್ಣ ವಾತಾವರಣ ಇರುವ ಕಾರಣ ಆಕೆಯ ಜೀವ ಹೋಗಿದೆ ಎನ್ನಲಾಗಿದೆ. ಆದರೆ ಪುಟ್ಟ ಕಂದಮ್ಮನಿಗೆ ಅದೆಲ್ಲ ಏನು ಗೊತ್ತು? ಅದು ತನ್ನ ಪಾಡಿಗೆ ಅಮ್ಮನ ಶವಕ್ಕೆ ಹೊದಿಸಿದ ಬಟ್ಟೆಯೊಂದಿಗೆ ಆಟವಾಡುತ್ತ, ತನ್ನದೇ ಲೋಕದಲ್ಲಿ ಇದೆ.
ಇದನ್ನೂ ಓದಿ:ಕ್ವಾರಂಟೈನ್​ ಕೇಂದ್ರದಲ್ಲಿದ್ದವರಿಗೆ ಕೊಟ್ಟ ಅನ್ನದಲ್ಲಿ ಹುಳ: ಬಿಪಿ ಮಾತ್ರೆ ಕೇಳಿದ್ರೂ ಕೊಡ್ತಿಲ್ಲ…
ಮಹಿಳೆಯ ಕುಟುಂಬದವರು ಹೇಳುವಂತೆ ಆಕೆ ರೈಲಿನಲ್ಲಿಯೇ ಅಸ್ವಸ್ಥಳಾಗಿದ್ದಳು. ಸರಿಯಾಗಿ ನೀರೂ ಸಿಕ್ಕಿರಲಿಲ್ಲ. ಗುಜರಾತ್​ನಿಂದ ಹೊರಟಿದ್ದ ರೈಲು ಸೋಮವಾರ ಮುಜಾಫರ್​ಪುರವನ್ನು ತಲುಪಿತ್ತು.
ಆಕೆಯ ಶವವನ್ನು ರೈಲ್ವೆ ಸ್ಟೇಶನ್​ನಿಂದ ಹೊರಗೆ ಸಾಗಿಸುವಾಗಲೂ ಈ ಪುಟ್ಟ ಮಗು ಅಮ್ಮನ ಹಿಂದೆಯೇ ಹೆಜ್ಜೆ ಹಾಕುತ್ತ ಹೋಗಿದೆ. ಬಳಿಕ ಮತ್ತೋರ್ವ ಬಾಲಕ, ಅಂದರೆ ಮಹಿಳೆಯ ಹಿರಿಯ ಮಗ ಮಗುವನ್ನು ತನ್ನತ್ತ ಎಳೆದುಕೊಂಡು ತಡೆದಿದ್ದಾನೆ ಎಂದು ಸ್ಥಳದಲ್ಲಿ ಇದ್ದವರು ಹೇಳಿದ್ದಾರೆ. (ಏಜೆನ್ಸೀಸ್​)
ಅಮ್ಮಂಗೆ ಜೀವ ಇಲ್ಲ..ಅವಳ ಕಂದನಿಗೆ ಆಟ ಮುಗೀತಿಲ್ಲ…: ಬಿಹಾರದ ರೈಲ್ವೆ ಸ್ಟೇಶನ್​ನಲ್ಲಿ ಕಂಡುಬಂದ ಮನಕಲಕುವ ದೃಶ್ಯ…https://t.co/zLd2ph0moGpic.twitter.com/n5jvV0WHHW
— Vijayavani (@VVani4U)May 27, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − one =
Remember me
