ರಾಯ್ಪುರ:ನೀವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆ್ಯಕ್ಟಿವ್ ಇರೋರಾದರೆ ನಿಮಗೆ ಆ ಒಬ್ಬ ಬಾಲಕನ ಬಗ್ಗೆ ನಿಮಗೆ ಗೊತ್ತಾಗಿಯೇ ಆಗಿರುತ್ತದೆ. ಜಾನೆ ಮೇರೆ ಜಾನೆ ಮನ್, ಬಚ್ಪನ್ ಕಾ ಪ್ಯಾರ್ ಮೇರಾ ಬೂಲ್ ನಹೀ ಜಾನಾ ರೇ.. ಎಂದು ಮುಗ್ದತೆಯಿಂದ ಹಾಡು ಹೇಳಿರುವ ಆ ಬಾಲಕನ ವಿಡಿಯೋ ನೋಡಿದಾಕ್ಷಣ ನೀವೂ ಲೈಕ್ ಬಟನ್ ಒತ್ತಿರುತ್ತೀರಿ.
ಹೌದು. ಇತ್ತೀಚೆಗೆ ಚತ್ತೀಸಗಢದ ಸಹದೇವ್ ಕುಮಾರ್ ಹೆಸರಿನ ಬಾಲಕನ ವಿಡಿಯೋ ಸಕತ್ ವೈರಲ್ ಆಗಿದೆ. ಸರ್ಕಾರಿ ಶಾಲೆಯ ಸಮವಸ್ತ್ರ ಧರಿಸಿ ಜೋರು ಧ್ವನಿಯಲ್ಲಿ ಹಾಡು ಹೇಳಿರುವ ಆ ಬಾಲಕನ ಮುಗ್ದತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಆ ವಿಡಿಯೋ ಅದೆಷ್ಟರ ಮಟ್ಟಿಗೆ ವೈರಲ್ ಆಗಿದೆಯೆಂದರೆ ಸ್ವತಃ ಆ ಹಾಡಿನ ಗಾಯಕರಾಗಿರುವ ಬಾದ್​ಶಾ ಕೂಡ ಸಹದೇವ್​ಗೆ ಕರೆ ಮಾಡಿ ಮಾತನಾಡಿದ್ದಾರೆ. ಚಂಡೀಗಢಕ್ಕೆ ಬಾ ಎಂದು ಆಮಂತ್ರಣವನ್ನೂ ಕೊಟ್ಟಿದ್ದಾರೆ. ಅವರಿಬ್ಬರು ಸೇರಿ ಮತ್ತೊಂದು ಹಾಡನ್ನು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
बचपन का प्यार….वाह!pic.twitter.com/tWUuWFP71f
— Bhupesh Baghel (@bhupeshbaghel)July 27, 2021

ಅಂದ ಹಾಗೆ ಸಹದೇವ್​ನನ್ನು ಚತ್ತೀಸ್​ಗಢದ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಕೂಡ ಭೇಟಿ ಮಾಡಿ ಮಾತನಾಡಿಸಿದ್ದಾರೆ. ಆತನ ವೈರಲ್ ವಿಡಿಯೋವನ್ನು ನೋಡಿದ್ದ ಅವರು, ಬಾಲಕನ ಹೆಗಲ ಮೇಲೆ ಕೈ ಹಾಕಿ ನಿಂತು, ಆ ಹಾಡನ್ನು ನನಗಾಗಿ ಒಮ್ಮೆ ಹಾಡು ಎಂದು ಹೇಳಿಸಿದ್ದಾರೆ. ಅದರ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)
ರೈತರ ಮಕ್ಕಳಿಗೆ ಶಿಷ್ಯವೇತನ: ನೂತನ ಸಿಎಂ ಬೊಮ್ಮಾಯಿ ಘೋಷಣೆ

ಮೊದಲ ದಿನವೇ ಆಡಳಿತಕ್ಕೆ ಹೊಸ ದಿಕ್ಸೂಚಿ, ಆರ್ಥಿಕ ಶಿಸ್ತಿಗೆ ಮಾರ್ಗಸೂಚಿ ಕೊಟ್ಟ ಬೊಮ್ಮಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
