ಇಂದೋರ್​:ಲಾಕ್​​ಡೌನ್​ ಮುಗಿದಿದೆ. ಎಲ್ಲ ರೀತಿಯ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೈಗರಿಕೋದ್ಯಮಿಗಳು ಎರಡು ತಿಂಗಳು ಬಳಿಕ ಉತ್ಪಾದನೆ ಆರಂಭಿಸಿದ್ದಾರೆ. ಆದರೆ, ಮಧ್ಯಪ್ರದೇಶ ಇಂದೋರ್​ ಹೊರವಲಯದಲ್ಲಿರುವ ಪಾಲದಾ ಕೈಗಾರಿಕಾ ಪ್ರದೇಶದಲ್ಲಿ ನಡೆದ ಘಟನೆಯ ಬೇರೆ…
ಪಾಲದಾ ಕೈಗಾರಿಕೆ ಪ್ರದೇಶದಲ್ಲಿ ಕಾರ್ಖಾನೆ ಆರಂಭಿಸಿರುವ ಉದ್ಯಮಿಗಳು ಬೆಂಜ್​, ಬಿಎಂಡಬ್ಲ್ಯು, ಆಡಿ ಮೊದಲಾದ ಐಷಾರಾಮಿ ಕಾರುಗಳ ಬದಲಾಗಿ ಎತ್ತಿನಗಾಡಿಗಳಲ್ಲಿ ಬರುತ್ತಿದ್ದಾರೆ. ಇದೇನು ಮಿತವ್ಯಯ ಮಂತ್ರವೇ ಎಂದು ಕಲ್ಪಿಸಿಕೊಳ್ಳಬೇಕಿಲ್ಲ. ಸರ್ಕಾರದ ಗಮನವನ್ನು ಸೆಳೆಯಲು ಅವರು ಮಾಡಿದ ತಂತ್ರವಾಗಿತ್ತು.
ಇದನ್ನೂ ಓದಿ;‘ಪಾಳೇಗಾರ’ ಚೀನಾ ಪಳಗಿಸಲು ಒಂದಾದ ಎಂಟು ಪ್ರಜಾಪ್ರಭುತ್ವ ರಾಷ್ಟ್ರಗಳು
ಮನೆಗಳಿಂದ ಐಷಾರಾಮಿ ಕಾರುಗಳಲ್ಲಿಯೇ ಹೊರಟ ಅವರು, ಕೈಗಾರಿಕಾ ಪ್ರದೇಶ ಬರುತ್ತಿದ್ದಂತೆ ಕಾರುಗಳನ್ನು ಅಲ್ಲಿಯೇ ನಿಲ್ಲಿಸಿ ಚಕ್ಕಡಿ ಏರಿದರು. ಕಾರುಗಳಿರಲಿ, ಯಾವುದೇ ವಾಹನ ಕೂಡ ಸಂಚರಿಸದಷ್ಟು ಅಲ್ಲಿನ ರಸ್ತೆಗಳು ಹದಗೆಟ್ಟಿವೆ. ಒಮ್ಮೆ ಮಳೆ ಬಂದರೆ ಕೆಸರು, ಗುಂಡಿಮಯ ರಸ್ತೆಯಾಗುತ್ತವೆ ಎಂಬುದು ಅವರ ಆಕ್ರೋಶ. ಹೀಗಾಗಿ ಚಕ್ಕಡಿಯಲ್ಲಿ ಸಾಗುತ್ತಿದ್ದೇವೆ ಎನ್ನುತ್ತಿದ್ದಾರೆ.
ಇದನ್ನೂ ಓದಿ;ಬೆಂಗಳೂರಿನಲ್ಲಿ ಚಿಕ್ಕಪ್ಪ ಸೇರಿ ಮೂವರಿಂದ ಅತ್ಯಾಚಾರಕ್ಕೊಳಗಾದ ಬಾಲಕಿಗೆ ಹೊಸ ಬದುಕು ಕಟ್ಟಿಕೊಳ್ಳುವಾಸೆ…
ರಾಜ್ಯದಲ್ಲಿರುವ ರಸ್ತೆಗಳ ಸ್ಥಿತಿ ಇದು ಎಂದು ಈ ಚಿತ್ರ ಎಲ್ಲೆಡೆ ವೈರಲ್​ ಆಗಿದೆ. ಲಾಕ್​​ಡೌನ್​ ನಂತರದ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಉದ್ಯಮಿಗಳ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಮೊದಲು ಅವರಿಗೆ ಮೂಲಸೌಕರ್ಯ ಕಲ್ಪಿಸುವ ಕೆಲಸವಾಗಲಿ ಎಂಬುದು ಉದ್ಯಮಿಗಳ ಅಳಲಾಗಿದೆ.
ಕರೊನಾ ಪ್ರಕರಣಗಳಿಗೆ ಅಂತ್ಯ ಹಾಡಿದ ನ್ಯೂಜಿಲೆಂಡ್; ಸಾರ್ವಜನಿಕ ಸಭೆ, ಸಮಾರಂಭಗಳಿಗೂ ಇಲ್ಲ ನಿರ್ಬಂಧ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:15 + eleven =
Remember me
