ಮುಂಬೈ:ಮಹಾರಾಷ್ಟ್ರದ ಬದ್ಲಾಪುರದ ಖಾಸಗಿ ಶಾಲೆಯೊಂದರಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯೊಬ್ಬರ ಕುಟುಂಬಸ್ಥರಿಗೆ ಲೈಂಗಿಕ ಕಿರುಕುಳ ನಡೆದಿದೆ ಎಂದಬ ನೀಚ ಕೃತ್ಯದ ಬಗ್ಗೆ ಬಾಲಕಿಯಲ್ಲಾದ ಚಿಕ್ಕಪುಟ್ಟ ಬದಲಾವಣೆಯಿಂದ ತಿಳಿದು ಬಂದಿದೆ.
ಇದನ್ನು ಓದಿ:ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ; ಆಗಸ್ಟ್​​ 24ರಂದು ಮಹಾರಾಷ್ಟ್ರ ಬಂದ್​​ಗೆ ಕರೆ
ಬಾಲಕಿ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದರು. ಈಕೆ ಶಾಲೆಗೆ ಹೋಗಲು ನಿರಾಕರಿಸುತ್ತಿರುವುದು ಏಕೆ ಎಂದು ಆರಂಭದಲ್ಲಿ ಕುಟುಂಬದವರು ಗೊಂದಲಕ್ಕೊಳಗಾಗಿದ್ದರು. ಆಕೆ ಸರಿಯಾಗಿ ನಡೆಯುತ್ತಿರಲಿಲ್ಲ. ಬಳಿಕ ವಾಶ್​ರೂಮಿಗೆ ಹೋಗುವುದನ್ನೆ ತಪ್ಪಿಸಿದಳು. ಮೂತ್ರನಾಳದ ಸೊಂಕು ಇರಬಹುದು ಎಂದು ಭಾವಿಸಿದ್ದೇವು. ಸಂತ್ರಸ್ತೆ ಇನ್ನೂ ಆಘಾತದಲ್ಲಿರುವುದಾಗಿ ಬಾಲಕಿಯ ಹತ್ತಿರದ ಸಂಬಂಧಿಕರೊಬ್ಬರು ತಿಳಿಸಿರುವುದಾಗಿ ಹಿಂದೂಸ್ತಾನ್​ ಟೈಮ್ಸ್​ ವರದಿ ಮಾಡಿದೆ.
ಬಾಲಕಿ ವಾಶ್​ರೂಮಿಗೆ ಹೋಗದಿರುವುದು, ಶಾಲೆಗೆ ಹೋಗಲು ಹಿಂಜರಿಯುವುದನ್ನು ನೋಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದುಬಂತು. ಅಲ್ಲದೆ ಬಾಲಕಿ ಪಾಲಕರು, ದಾದಾ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಗಳು ಹೇಳಿರುವುದಾಗಿ ಅವರ ಸಂಬಂಧಿಕರು ತಿಳಿಸಿದರು.
ಸಂತ್ರಸ್ತೆಯ ಪಾಲಕರು ಆಗಸ್ಟ್​​ 16ರಂದು ದೂರು ದಾಖಲಿಸಿದ್ದಾರೆ. ಆಗಸ್ಟ್​ 13ರಂದು ಶಾಲೆಯ ಶೌಚಗೃಹದಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಎಫ್​ಐಆರ್​ನಲ್ಲಿ ತಿಳಿಸಲಾಗಿದೆ. ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಶಾಲೆಯ ಸ್ವಚ್ಛತಾ ಸಿಬ್ಬಂದಿಯ 23 ವರ್ಷದ ಅಕ್ಷಯ್ ಶಿಂಧೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿರುವ ಮಹಾರಾಷ್ಟ್ರ ಸರ್ಕಾರ ಶೀಘ್ರವಾಗಿ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದೆ. (ಏಜೆನ್ಸೀಸ್​​)
ಫೈಟರ್​ ಜೆಟ್​​ನಿಂದ ಪೋಖ್ರಾನ್ ಬಳಿ ಏರ್​ಸ್ಟೋರ್​ ಬಿಡುಗಡೆ; ಅಪಾಯಕಾರಿ ಘಟನೆಗೆ IAF ಸ್ಪಷ್ಟನೆ ಹೀಗಿದೆ..

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:7 − four =
Remember me
