ನವದೆಹಲಿ:ಎರಡು ಬಾರಿ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಪ್ರಥಮ ಭಾರತೀಯ ಮಹಿಳೆಯಾದ ಬ್ಯಾಡ್ಮಿಂಟನ್​ ಚ್ಯಾಂಪಿಯನ್​ ಪಿ.ವಿ.ಸಿಂಧು ಅವರಿಗೆ ಇಂದು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ಪದ್ಮ ಪ್ರಶಸ್ತಿಗಳ ವಿತರಣೆಗೆ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಅವರು ಪ್ರಶಸ್ತಿ ಪ್ರದಾನಿಸಿದರು.
ಇತ್ತೀಚೆಗೆ ಜಪಾನಿನ ಟೋಕಿಯೋದಲ್ಲಿ ನಡೆದ 2020 ಒಲಿಂಪಿಕ್ಸ್​ನಲ್ಲಿ ಚೀನಾದ ಹೆ ಬಿಂಗ್​ಜಿಯಾಒರನ್ನು ಮಣಿಸಿ ಸಿಂಧು ಕಂಚಿನ ಪದಕ ಗೆದ್ದಿದ್ದರು. 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಫೈನಲ್ಸ್​ ತಲುಪಿದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ, ಸ್ಪೇನ್‌ನ ಕ್ಯಾರೊಲಿನಾ ಮರಿನ್‌ ವಿರುದ್ಧ ಸೋತು ಬೆಳ್ಳಿ ಪದಕ ಗೆದ್ದಿದ್ದರು. ಜೊತೆಗೆ, ಹಲವು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.
It is a proud moment. I am thankful to Govt of India. These kind of awards give us a lot of encouragement, support and motivation. I have some upcoming tournaments, I will give my best in them: Olympian badminton player PV Sindhu on receiving Padma Bhushan awardpic.twitter.com/Mthr1NJuyD
— ANI (@ANI)November 8, 2021

ಸಿಂಧು ಈಗಾಗಲೇ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದಾರೆ. ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಜನವರಿ 2020 ರಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಪದ್ಮಭೂಷಣ ಪ್ರಶಸ್ತಿಯನ್ನು ಅವರಿಗೆ ಘೋಷಿಸಲಾಗಿದ್ದು, ಇಂದು ಪ್ರದಾನಿಸಲಾಯಿತು.(ಏಜೆನ್ಸೀಸ್)
ಬಳ್ಳಾರಿಯಲ್ಲಿ ಪುನೀತ್​ ಹೆಸರಲ್ಲಿ ಉಚಿತ ಶಾಲೆ: ಜನಾರ್ಧನ ರೆಡ್ಡಿ

ದಾಖಲೆ ಮೊತ್ತಕ್ಕೆ ಮಾರಾಟವಾದ ಬಂಡೂರು ಟಗರು; ಬೆಲೆ ಎಷ್ಟು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − ten =
Remember me
