ನವದೆಹಲಿ:ನಿರ್ಭಯಾ ಅಪರಾಧಿಗಳಿಗೆ ಜನವರಿ 22ರಂದು ಗಲ್ಲು ಘೋಷಿಸಿರುವ ಕೋರ್ಟ್​ನ ತೀರ್ಪು ಬಗ್ಗೆ ಸಂತಸವಾಗಿದೆ ಎಂದು ಸಂತ್ರಸ್ಥೆ ತಂದೆ ಬದ್ರಿನಾಥ್​ ಸಿಂಗ್​ ಪ್ರತಿಕ್ರಿಯಿಸಿದ್ದಾರೆ.
ನ್ಯಾಯಾಲಯದ ಈ ತೀರ್ಪಿನಿಂದಾಗಿ ಅಂತಹ ಅಪರಾಧಗಳನ್ನು ಮಾಡುವ ಜನರಲ್ಲಿ ಭಯವನ್ನು ಉಂಟುಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಲ್ವರು ಅಪರಾಧಿಗಳಿಗೂ ಡೆತ್​ ವಾರಂಟ್​ ಜಾರಿ ಮಾಡಿದ ದೆಹಲಿ ಪಟಿಯಾಲಾ ನ್ಯಾಯಾಲಯ, ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲು ಶಿಕ್ಷೆ ನೀಡಲು ಆದೇಶ ಹೊರಡಿಸಿದೆ.
ಡಿ.18ರಂದು ಅಪರಾಧಿಗಳಾದ ಪವನ್​, ವಿನಯ್​, ಅಕ್ಷಯ್​ ಹಾಗೂ ಮುಖೇಶ್​ಗೆ ಗಲ್ಲು ಶಿಕ್ಷೆ ಕಾಯಂ ಎಂದು ತೀರ್ಪು ನೀಡಿತ್ತು. ನಿರ್ಭಯಾ ಪಾಲಕರು, ಕೂಡಲೇ ಡೆತ್ ವಾರಂಟ್​ ಜಾರಿ ಮಾಡುವಂತೆ ದೆಹಲಿ ಪಟಿಯಾಲಾ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 5 =
Remember me
