ಅಸ್ಸಾಂ:ಮುಸ್ಲಿಮರಂತೆ ಹಿಂದೂಗಳು ಬದಲಾಗಬೇಕು. ಸಣ್ಣ ವಯಸ್ಸಿನಲ್ಲೇ ಹಿಂದೂಗಳು ಮುಸ್ಲಿಮರಂತೆ ಮದುವೆಯಾಗಲು ಮುಂದಾಗಬೇಕು. ಆಗ ಮಾತ್ರ ಹಿಂದೂಗಳ ಜನಸಂಖ್ಯೆ ಹೆಚ್ಚಾಗಲು ಸಾಧ್ಯ ಎಂದು ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ. ಇವರ ಮಾತುಗಳು ಇದೀಗ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.
ಮುಸ್ಲಿಂಮರ ಜನಸಂಖ್ಯೆ ಹೆಚ್ಚಳದ ವಿಚಾರವಾಗಿ ಮಾತನಾಡುತ್ತಾ, ಹಿಂದೂಗಳು ಹೆತ್ತವರ ಒತ್ತಾಯಕ್ಕೆ 40 ವರ್ಷದ ನಂತರ ವಿವಾಹ ಮಾಡಿಕೊಳ್ಳಲು ಮುಂದಾಗುತ್ತಾರೆ. ಆದರೆ ಮುಸ್ಲಿಮರು ಸಣ್ಣ ವಯಸ್ಸಿನಲ್ಲೇ ಮದುವೆಯಾಗುತ್ತಾರೆ. ಪೋಷಕರು ಒತ್ತಡಕ್ಕೆ ಒಳಗಾಗಿ 40 ವರ್ಷದ ನಂತರ ವಿವಾಹವಾದರೆ, ಅವರು ಮಕ್ಕಳನ್ನು ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಮುಂದುವರಿದು ಮಾತನಾಡುತ್ತಾ, ಫಲವತ್ತಾದ ಭೂಮಿಯಲ್ಲಿ ಬೀಜ ಬಿತ್ತಿದರೆ ಮಾತ್ರ ಉತ್ತಮ ಫಸಲು ಪಡೆಯಲು ಸಾಧ್ಯ ಎಂದು ಹೇಳಿದ್ದಾರೆ.
#WATCH| Hindus should follow the Muslim formula of getting their girls married at 18-20 years, says AIUDF President & MP, Badruddin Ajmal.pic.twitter.com/QXIMrFu7g8— ANI (@ANI)December 2, 2022
#WATCH| Hindus should follow the Muslim formula of getting their girls married at 18-20 years, says AIUDF President & MP, Badruddin Ajmal.pic.twitter.com/QXIMrFu7g8
ಮುಸ್ಲಿಂ ಹುಡುಗರು 20-22ನೇ ವಯಸ್ಸು ಮತ್ತು ಹುಡುಗಿಯರು 18ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಆದರೆ ಹಿಂದೂ ಯುವಕರು ಮಾತ್ರ ತಡವಾಗಿ ಮದುವೆಯಾಗುತ್ತಾರೆ. ಹಿಂದೂಗಳು ಮದುವೆಗೂ ಮೊದಲು ಮೂರು, ನಾಲ್ಕು ಜನ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರೂ, ಮಕ್ಕಳಿಗೆ ಜನ್ಮ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದೀಗ ಬದ್ರುದ್ದೀನ್ ಅಜ್ಮಲ್ ಮಾತಿಗೆ ಎಲ್ಲಡೆ ಖಂಡನೆ ವ್ಯಕ್ತವಾಗುತ್ತಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
