ಗುವಾಹಟಿ:ಅಸ್ಸಾಂನ ತೀನ್​ಸುಕಿಯಾ ಜಿಲ್ಲೆಯ ಬಾಗ್​ಜಾನ್​ನಲ್ಲಿರುವ ಸರ್ಕಾರಿ ಸ್ವಾಮ್ಯದ ಆಯಿಲ್​ ಇಂಡಿಯಾ ಕಂಪನಿ ಒಡೆತನದ ಅನಿಲ ಬಾವಿಗೆ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಭಾರತೀಯ ವಾಯು ಸೇನಾ ಪಡೆಯ ನೆರವು ಪಡೆಯಲಾಗಿದೆ.
ಮೇ 27ರಿಂದಲೇ ಅನಿಲ ಬಾವಿಯಲ್ಲಿ ಸೋರಿಕೆ ಉಂಟಾಗುತ್ತಿತ್ತು. ಅದನ್ನು ಸರಿಪಡಿಸಲು ಅಧಿಕಾರಿಗಳು ಹರಸಾಹಸ ನಡೆಸಿದ್ದರು. ನಿಯಂತ್ರಣಕ್ಕೆ ಬಾರದೇ ಮಂಗಳವಾರ (ಜೂ.9) ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿಯನ್ನು ತಹಬಂದಿಗೆ ತರಲು ಹರಸಾಹಸ ನಡೆಸಲಾಗುತ್ತಿದೆ. ಇದಕ್ಕಾಗಿ ವಾಯು ಸೇನಾಪಡೆಯ ಮೂರು ವಿಶೇಷ ಅಗ್ನಿಶಾಮಕಗಳ ಬಳಕೆ ಮಾಡಲಾಗುತ್ತಿದೆ. ಇದಲ್ಲದೇ, ಸಿಂಗಾಪುರದಿಂದ ವಿಶೇಷ ತಜ್ಞರ ತಂಡವು ಸ್ಥಳಕ್ಕಾಗಮಿಸಿದ್ದು, ಪರಿಹಾರ ಕಾರ್ಯಾಚರಣೆ ಆರಂಭಿಸಿದೆ. ಕೇಂದ್ರದಿಂದ ನೆರವು ನೀಡುವಂತೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರನ್ನು ಸಿಎಂ ಸರ್ಬಾನಂದ ಸೋನೋವಾಲ್​ ಮನವಿ ಮಾಡಿದ್ದರು.
ಇದನ್ನೂ ಓದಿ;ಹತ್ತು ವರ್ಷ 3.5 ಲಕ್ಷ ಜನ ಆ ನಿಧಿಗಾಗಿ ಹುಡುಕಿದ್ದರು; ಅಷ್ಟಕ್ಕೂ ಎಲ್ಲಿತ್ತು? ಎಷ್ಟಿತ್ತು?
ಬೆಂಕಿಯನ್ನು ನಂದಿಸಲು ಕನಿಷ್ಠ ನಾಲ್ಕು ವಾರಗಳಾದರೂ ಬೇಕು ಎಂದು ಅಂದಾಜಿಸಲಾಗಿದೆ. ಆದರೆ, ಎಲ್ಲ ಪ್ರಯತ್ನಗಳನ್ನು ನಡೆಸಿದ್ದು, ನಿಗದಿತ ಅವಧಿಗೂ ಮುನ್ನವೇ ಪರಿಸ್ಥಿತಿ ನಿಯಂತ್ರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ, ತೈಲ ಘಟಕವಿರುವ ಬಾಗಜಾನ್​ನಲ್ಲಿ ನೆಲೆಸಿದ್ದ 3,500 ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಅನಿಲ ಮಿಶ್ರಿತ ನೀರಿನ ಸಂಪರ್ಕಕ್ಕೆ ಬಂದ ಪರಿಣಾಮ ಒಂದು ಡಾಲ್ಫಿನ್​ ಹಾಗೂ ಮೀನುಗಳು ಮೃತಪಟ್ಟಿವೆ. ಇದರ ಹೊರತಾಗಿ ಬೇರಾವುದೇ ಸಾವುನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ;ಕರೊನಾದಿಂದ ಕಾಪಾಡುತ್ತಿರುವ ಔಷಧಗಳಿವು; ಬೆಲೆ ಕೇಳಿದರೆ ತಲೆ ತಿರುಗುತ್ತೆ…!
ಬಾಗಜಾನ್​ನಲ್ಲಿ 2006ರಲ್ಲಿ ಆಯಿಲ್​ ಇಂಡಿಯಾ ಲಿಮಿಟೆಡ್​ ಈ ಘಟಕ ಆರಂಭಿಸಿದ್ದು, ಒಟ್ಟು ಐದು ತೈಲ ಬಾವಿಗಳಿವೆ. ಇವುಗಳಿಂದ ನಿತ್ಯ ಅಂದಾಜು 80 ಸಾವಿರ ಕ್ಯೂಬಿಕ್​ ಮೀಟರ್​ನಷ್ಟು ಅನಿಲವನ್ನು 3,870 ಮೀಟರ್​ ಆಳದಿಂದ ತೆಗೆದು ಸಂಸ್ಕರಿಸಲಾಗುತ್ತಿತ್ತು.
ಪತ್ನಿಯ ಯೋಗಾಭ್ಯಾಸ ವಿಡಿಯೋದಲ್ಲಿ ‘ಬೆತ್ತಲಾದ’ ನ್ಯೂಸ್​ ಆ್ಯಂಕರ್​…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 11 =
Remember me
