ರಾಘವ ಶರ್ಮ ನಿಡ್ಲೆ, ಅಯೋಧ್ಯೆಅಯೋಧ್ಯೆ ಶ್ರೀರಾಮಮಂದಿರದಲ್ಲಿ ಜ.22ರ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಬುಧವಾರ ಮಂದಿರಕ್ಕೆ ತಂದಿರಿಸಲಾಗಿದ್ದ ಬಾಲರಾಮನ ಮೂರ್ತಿಗೆ ಟ್ರಸ್ಟ್ ಸದಸ್ಯರ ಮೇಲುಸ್ತುವಾರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಗುರುವಾರ ಬೆಳಗ್ಗೆ ಪ್ರತಿಮೆ ತಳಭಾಗದಲ್ಲಿ ಕೂರ್ಮಪೀಠ, ನವಧಾನ್ಯ, ನವರತ್ನಗಳ ನಿಕ್ಷೇಪ, ಗಜಶಾಲೆ, ಗೋಶಾಲೆ, ಅಶ್ವಶಾಲೆಯ ಮೃತ್ತಿಕೆ ಸೇರಿ ಹಲವು ಪವಿತ್ರ ಮೃತ್ತಿಕೆಗಳ ನಿಕ್ಷೇಪ, ಸಪ್ತಧಾತುಗಳ ನಿಕ್ಷೇಪಗಳನ್ನು ಇಟ್ಟು ಪೂಜೆ ನಡೆಸಲಾಯಿತು. ನಂತರ, ರಾಮ ನಾಮ ಇರುವ ಯಂತ್ರದ ಸ್ಥಾಪನೆಯಾಗಿ, ಅಲ್ಲಿ ಅರ್ಚನೆ ನೆರವೇರಿಸಲಾಯಿತು ಬಳಿಕ, ಬಾಲರಾಮ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು.
ಮೂರ್ತಿ ಸ್ಥಾಪನೆ ಪೂರ್ಣಗೊಂಡಿ ರುವುದರಿಂದ ಪ್ರಾಣಪ್ರತಿಷ್ಠೆಯ ಪ್ರಕ್ರಿಯೆಗಳಾಗಿರುವ ಪುಣ್ಯಾಹ ವಾಚನ, ಋತ್ವಿಕ್ ವರಣ; ಅಂದರೆ ಧಾರ್ವಿುಕ ವಿಧಿಗಳನ್ನು ನೆರವೇರಿಸಲು ಬಂದಿರುವ ವೈದಿಕರಿಗೆ ಜವಾಬ್ದಾರಿಗಳನ್ನು ನೀಡುವ ಪ್ರಕ್ರಿಯೆ, ನಾಂದಿ ದೇವತೆಗಳ ಪೂಜೆಗಳು ಕೂಡ ನಡೆದಿವೆ. ಮೂರ್ತಿ ಸ್ಥಾಪನೆ ವೇಳೆ ಪ್ರಾಣಪ್ರತಿಷ್ಠೆಗೆ ಮುಹೂರ್ತ ನಿಗದಿ ಮಾಡಿದ ಕಾಶಿಯ ಗಣೇಶ್ವರ ಶಾಸ್ತ್ರಿಗಳು, ಅರುಣ್ ದೀಕ್ಷಿತರು, ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ಈ ಕಾರ್ಯಗಳು ನಡೆದಿವೆ ಎಂದು ಟ್ರಸ್ಟ್ ಸದಸ್ಯ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
22ರ ಪ್ರಾಣಪ್ರತಿಷ್ಠೆ ಬಳಿಕವೂ ಮಂದಿರದಲ್ಲಿ ವಿವಿಧ ಹೋಮ-ಹವನಗಳು ನಡೆಯಲಿದ್ದು, ಮುಂದಿನ 2 ತಿಂಗಳ ಕಾಲ ವಿಶ್ವಪ್ರಸನ್ನ ತೀರ್ಥರು ಅಯೋಧ್ಯೆಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಅವರ ಮುಂದಾಳತ್ವದಲ್ಲೇ ವಿವಿಧ ಮಂಡಲೋತ್ಸವಗಳು ನಡೆಯಲಿವೆ. ಗುರುವಾರದಿಂದ ರಾಮಮಂದಿರಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, 23ರಿಂದ ಹೊಸ ರಾಮಮಂದಿರದಲ್ಲಿ ದೇವರ ದರ್ಶನಕ್ಕೆ ಮತ್ತೆ ಅವಕಾಶವಿರಲಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಎಲ್ಲ ಧಾರ್ವಿುಕ ವಿಧಿವಿಧಾನಗಳ ಬಗ್ಗೆ ಅರಿವಿದ್ದ ಕಾಶಿಯ ಪುರೋಹಿತರೇ ಪ್ರಾಣಪ್ರತಿಷ್ಠೆಯ ಮುಹೂರ್ತ ನಿಗದಿ ಮಾಡಿದ್ದು. ಪ್ರಾಣಪ್ರತಿಷ್ಠೆ ಮಾಡು ವುದು ಗರ್ಭಗುಡಿಯಲ್ಲಿ. ಗರ್ಭಗುಡಿ ಕೆಲಸ ಪೂರ್ಣಗೊಂಡಿದೆ. ಅನ್ಯಥಾ ವಿರೋಧವೇಕೆ? ಭಿನ್ನಾಭಿಪ್ರಾಯ ಸಹಜ. ಬಹುಸಂಖ್ಯಾತರ ಅಭಿಪ್ರಾಯಗಳಿಗೆ ಮಾನ್ಯತೆ ನೀಡುವ ಮನಸ್ಸೂ ಇರಬೇಕು.
| ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠಾಧೀಶ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 19 =
Remember me
