ಮುಂಬೈ:ರಿಲಯನ್ಸ್​ ಹೋಮ್​ ಫೈನಾನ್ಸ್​ (ಆರ್​ಎಚ್​ಎಫ್​ಎಲ್​)ನಿಂದ ಹಣವನ್ನು ದುರುಪಯೋಗ ಮಾಡಿಕೊಂಡ ಕಾರಣ ಬಂಡವಾಳ ಮಾರುಕಟ್ಟೆಯಲ್ಲಿ ವಹಿವಾಟು ನಡೆಸದಂತೆ ಅನಿಲ್​ ಅಂಬಾನಿ ಮತ್ತು ಇತರೆ ಮೂವರ ಮೇಲೆ ಸೆಕ್ಯುರಿಟೀಸ್​ ಆ್ಯಂಡ್​ ಎಕ್ಸ್​ಚೇಂಜ್​ ಬೋರ್ಡ್​ ಆ್​ ಇಂಡಿಯಾ (ಸೆಬಿ) ನಿಷೇಧ ಹೇರಿದೆ. ಷೇರುಪೇಟೆಯ ಯಾವುದೇ ಲಿಸ್ಟೆಡ್​ ಕಂಪನಿಯ ಜತೆಗೆ ವ್ಯವಹಾರ ನಡೆಸದಂತೆ ಈ ನಾಲ್ವರಿಗೆ ಸೆಬಿ ತಾಕೀತು ಮಾಡಿದೆ. ಮುಂದಿನ ಆದೇಶದ ತನಕ ಈ ನಿಷೇಧ ಚಾಲ್ತಿಯಲ್ಲಿ ಇರಲಿದೆ ಎಂದು ಸೆಬಿ ಮೂಲಗಳು ತಿಳಿಸಿವೆ.|ಆರ್​ಎಚ್​ಎ್​ಎಲ್​ ಸಾಲ ಪಡೆದ ಹಣವನ್ನು ಕಂಪನಿಯ ಚೇರ್​ಮನ್​ ಎಂಬ ನೆಲೆಯಲ್ಲಿ ಥರ್ಡ್​ಪಾಟಿರ್ ಸಾಲಗಾರರಿಗೆ ಪ್ರೊಮೋಟರ್​ ಗ್ರೂಪ್​ನ ಸಂಸ್ಥೆಗಳ ಮೂಲಕ ವರ್ಗಾವಣೆ ಮಾಡುವ ಮೂಲಕ ಅಧಿಕಾರ ಮತ್ತು ಹಣವನ್ನು ದುರುಪಯೋಗ ಮಾಡಿದ್ದಾರೆ ಎಂಬ ಆರೋಪ ಅನಿಲ್​ ಅಂಬಾನಿ ಮತ್ತು ಇತರರ ಮೇಲೆ ಇದೆ. ಆರ್​ಎಚ್​ಎ್​ಎಲ್​ ನಷ್ಟದಲ್ಲಿರುವ ಕಂಪನಿಯಾಗಿದ್ದು, 2018ರಲ್ಲಿ 900 ಕೋಟಿ ರೂ. ಇದ್ದ ಸಾಲ 2019ರ ಮಾರ್ಚ್​ ಕೊನೆಗೆ 7,900 ಕೋಟಿ ರೂಪಾಯಿ ಆಗಿತ್ತು ಎಂಬುದನ್ನು ಪಿಡಬ್ಲುಸಿ ಲೆಕ್ಕಪರಿಶೋಧನಾ ವರದಿ ತಿಳಿಸಿದೆ.
ಬ್ಯಾಂಕ್​ ಆಫ್​ ಬರೋಡಾ ಕನ್ಸೋಟಿರ್ಯಂನಿಂದ ಆರ್​ಎಚ್​ಎ್​ಎಲ್​ ಸಾಲ ಪಡೆದಿದ್ದು, ಫಾರೆನ್ಸಿಕ್​ ಆಡಿಟ್​ ಮೂಲಕ ಹಲವು ಅಂಶಗಳು ಬಹಿರಂಗವಾಗಿವೆ. ಆರ್​ಎಚ್​ಎಫ್​ಎಲ್​ 14,577 ಕೋಟಿ ರೂಪಾಯಿಯನ್ನು ಹಲವು ಸಂಸ್ಥೆಗಳಿಗೆ ವರ್ಗಾವಣೆ ಸಾಲದ ರೂಪದಲ್ಲಿ ವರ್ಗಾವಣೆ ಮಾಡಿದೆ. ಆರ್​ಎಚ್​ಎಫ್ಎಲ್​ ಲೆಕ್ಕಪತ್ರ ಪ್ರಕಾರ ಇನ್ನೂ 8,884 ಕೋಟಿ ರೂಪಾಯಿ ವಸೂಲಿಗೆ ಬಾಕಿ ಇದೆ.
ನೇಮಕ ಅಕ್ರಮ ಎನ್​ಎಸ್​ಇಗೆ ದಂಡ: ಉನ್ನತಾಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮವೆಸಗಿದ ಕಾರಣ ನ್ಯಾಷನಲ್​ ಸ್ಟಾಕ್​ ಎಕ್ಸ್​ಚೇಂಜ್​ (ಎನ್​ಎಸ್​ಇ) ಮತ್ತು ಇಬ್ಬರು ಮಾಜಿ ಮುಖ್ಯಸ್ಥರ ವಿರುದ್ಧ ಸೆಬಿ ಕ್ರಮ ಜರುಗಿಸಿದೆ. ಎನ್​ಎಸ್​ಇಯ ಮಾಜಿ ಸಿಇಒಗಳಾದ ಚಿತ್ರಾ ರಾಮಕೃಷ್ಣ ಮತ್ತು ರವಿ ನಾರಾಯಣ್​ ಹಾಗೂ ಇಬ್ಬರು ಇತರೆ ಅಧಿಕಾರಿಗಳ ವಿರುದ್ಧ ನೇಮಕ ಅಕ್ರಮ ಎಸಗಿದ್ದಕ್ಕಾಗಿ ಸೆಬಿ ಶಿಸ್ತು ಕ್ರಮ ತೆಗೆದುಕೊಂಡಿದೆ.ಎನ್​ಎಸ್​ಇ ಇನ್ನು ಮುಂದಿನ ಆರು ತಿಂಗಳ ಅವಧಿಗೆ ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವಂತೆ ಇಲ್ಲ. ಚಿತ್ರಾ ರಾಮಕೃಷ್ಣಗೆ 3 ಕೋಟಿ ರೂ., ಎನ್​ಎಸ್​ಇ, ರವಿ ನಾರಾಯಣ್​, ಸುಬ್ರಮಣಿಯನ್​ಗೆ ತಲಾ 2 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಇನ್ನೊಬ್ಬ ಅಧಿಕಾರಿ ಅಂದು ಚೀ್​ ರೆಗ್ಯುಲೇಟರಿ ಆಫೀಸರ್​ ಆಗಿದ್ದ ವಿ.ಆರ್​. ನರಸಿಂಹನ್​ಗೆ 6 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. 45 ದಿನಗಳ ಒಳಗೆ ಈ ದಂಡವನ್ನು ಅವರು ಪಾವತಿಸಬೇಕಾಗಿದೆ.
ನೇಮಕ ಅಕ್ರಮಆನಂದ ಸುಬ್ರಮಣಿಯನ್​ ಎಂಬುವವರ ನೇಮಕದಲ್ಲಿ ಅಕ್ರಮ ನಡೆದಿತ್ತು. ಅವರಿಗೆ ವಾಷಿರ್ಕ 4 ಕೋಟಿ ರೂಪಾಯಿಗೂ ಹೆಚ್ಚು ವೇತನ ನೀಡಲಾಗಿದೆ. ಇದು ಇತರೆ ಹಿರಿಯರಿಗಿಂತ ಹೆಚ್ಚಿನ ವೇತನವಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − five =
Remember me
