ನವದೆಹಲಿ:ಲ್ಯಾಪ್​ಟಾಪ್, ಟ್ಯಾಬ್ಲೆಟ್ ಮತ್ತು ಹಲವು ರೀತಿಯ ಕಂಪ್ಯೂಟರ್​ಗಳ ಆಮದು ಮೇಲೆ ಕೇಂದ್ರ ಸರ್ಕಾರ ಗುರುವಾರ ನಿರ್ಬಂಧ ಹೇರಿದೆ. ಇದು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಜತೆಗೆ ಚೀನಾದಂತಹ ದೇಶಗಳಿಂದ ಸರಕುಗಳ ಆಮದು ಮೊಟಕುಗೊಳಿಸಲಿದೆ. ಇಂಥ ವಸ್ತುಗಳ ಆಮದುದಾರರು ಇನ್ನು ಸರ್ಕಾರದಿಂದ ಅನುಮತಿ ಅಥವಾ ಪರವಾನಗಿ ಪಡೆಯಬೇಕಾಗುತ್ತದೆ.
ಲ್ಯಾಪ್​ಟಾಪ್, ಟ್ಯಾಬ್ಲೆಟ್, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್, ಅಲ್ಟ್ರಾ ಸ್ಮಾಲ್ ಫಾಮ್ರ್ ಫ್ಯಾಕ್ಟರ್ ಕಂಪ್ಯೂಟರ್, ಸರ್ವರ್​ಗಳ ಆಮದು ನಿರ್ಬಂಧಿಸಿ ತಕ್ಷಣದಿಂದಲೇ ಜಾರಿ ಮಾಡಲಾಗಿದೆ. ಮೈಕ್ರೋ ಕಂಪ್ಯೂಟರ್​ಗಳು, ದೊಡ್ಡ ಅಥವಾ ಮೇನ್​ಫ್ರೇಮ್ ಕಂಪ್ಯೂಟರ್​ಗಳು, ಕೆಲವು ಡೇಟಾ ಸಂಸ್ಕರಣಾ ಯಂತ್ರಗಳ ಮೇಲೂ ನಿರ್ಬಂಧಗಳಿವೆ. ಪರವಾನಗಿ ಪಡೆದುಕೊಂಡರೆ ಮಾತ್ರ ಈ ಎಲ್ಲಾ ವಸ್ತು ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮದು ನಿರ್ಬಂಧದಲ್ಲಿ ಕೆಲ ವಿನಾಯಿತಿ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್​ಟಿ) ಅಧಿಸೂಚನೆಯಲ್ಲಿ ತಿಳಿಸಿದೆ. ಹೊಸ ಆವಿಷ್ಕಾರ, ಸಂಶೋಧನೆ, ಮೌಲ್ಯಮಾಪನ, ರಿಪೇರಿ ಮತ್ತು ರಿಟರ್ನ್, ಉತ್ಪನ್ನ ಅಭಿವೃದ್ಧಿ ಉದ್ದೇಶಗಳಿಗಾಗಿ 20 ಸರಕುಗಳವರೆಗೆ ವಿನಾಯಿತಿ ನೀಡಲಾಗುತ್ತದೆ. ಇ-ಕಾಮರ್ಸ್ ಪೋರ್ಟಲ್, ಪೋಸ್ಟ್ ಅಥವಾ ಕೊರಿಯರ್ ಮೂಲಕ ಖರೀದಿಸಲಾಗುವ ಸರಕುಗಳಿಗೂ ಈ ನಿಯಮ ಅನ್ವಯವಾಗಲಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದಲ್ಲೇ ಸರಕುಗಳನ್ನು ಉತ್ಪಾದಿಸಲು ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಉತ್ಪಾದನೆ-ಸಂಯೋಜಿತ ಪೋ›ತ್ಸಾಹ ಯೋಜನೆಯಿಂದ ಎಲೆಕ್ಟ್ರಾನಿಕ್ ಉಪಕರಣ ತಯಾರಿಕೆಗೆ ಉತ್ತೇಜನ ನೀಡಿದೆ. ಕಸ್ಟಮ್ಸ್ ಸುಂಕ ಹೆಚ್ಚಿಸುವಂತಹ ಎಲೆಕ್ಟ್ರಾನಿಕ್ ವಸ್ತುಗಳ ದೇಶೀಯ ಉತ್ಪಾದನೆಗೆ ಅನುಕೂಲ ಕಲ್ಪಿಸಿದೆ. ಈಗ ಈ ನಿರ್ಬಂಧ ಕ್ರಮದಿಂದ ಮತ್ತಷ್ಟು ಅನುಕೂಲ ಆಗಲಿದೆ.
ಚೀನಾದಿಂದ ಭಾರತಕ್ಕೆ ಅಪಾರ ಪ್ರಮಾಣದ ಸರಕು ಆಮದಾಗುತ್ತಿದೆ. ಇದರಲ್ಲಿ ಶೇ. 65 ಸರಕು ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು ಮತ್ತು ರಾಸಾಯನಿಕ ವಿಭಾಗಕ್ಕೆ ಸೇರಿವೆ. ದಿನನಿತ್ಯದ ಬಳಕೆ ಮತ್ತು ಕೈಗಾರಿಕಾ ಉತ್ಪನ್ನಗಳಾದ ಮೊಬೈಲ್ ಫೋನ್, ಲ್ಯಾಪ್​ಟಾಪ್, ಘಟಕಗಳು, ಸೌರ ಕೋಶ ಮಾಡ್ಯೂಲ್​ಗಳಿಗೆ ಭಾರತ ಚೀನಾದ ಮೇಲೆ ಅವಲಂಬಿತವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
