ಲಖನೌ:ನಿಗದಿತ ಸ್ಥಳದಲ್ಲಿ ಮಾತ್ರ ನಮಾಜ್ ನಡೆಸಬೇಕು. ರಸ್ತೆಗಳನ್ನು ಬಂದ್​ ಮಾಡಿ ಪ್ರಾರ್ಥನೆ ಮಾಡಬಾರದು. ನಂಬಿಕೆಯನ್ನು ಗೌರವಿಸಿ ಆದರೆ ಯಾವುದೇ ಹೊಸ ಸಂಪ್ರದಾಯವನ್ನು ಪ್ರೋತ್ಸಾಹಿಸಬೇಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ:ಯಾರೂ ಬಲವಂತ ಮಾಡಲ್ಲ ಎಲ್ಲವೂ ಒಪ್ಪಿಗೆಯಿಂದಲೇ ನಡೆಯುತ್ತೆ! ಕಾಸ್ಟಿಂಗ್​ ಕೌಚ್​ ಬಗ್ಗೆ ಲಕ್ಷ್ಮೀ ರೈ ಸ್ಪೋಟಕ ಹೇಳಿಕೆ
ಮುಂದಿನ ಕೆಲವು ದಿನಗಳಲ್ಲಿ ಬರುವ ಹಬ್ಬಗಳ ಹಿನ್ನೆಲೆಯಲ್ಲಿ ಯಾವುದೇ ಅವ್ಯವಸ್ಥೆ ಆಗದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.
ಜೂನ್ 16 ರಂದು ಗಂಗಾ ದಸರಾ, ಜೂ.17 ರಂದು ಬಕ್ರೀದ್, ಜೂ.18 ರಂದು ಜ್ಯೇಷ್ಠ ಮಾಸದ ಮಂಗಲೋತ್ಸವ ಮತ್ತು ಜೂ. 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಯೋಜಿಸಲಾಗುವುದು. ಜುಲೈ ತಿಂಗಳಿನಲ್ಲಿ ಮೊಹರಂ ಮತ್ತು ಕನ್ವರ್ ಯಾತ್ರೆಯಂತಹ ಕಾರ್ಯಕ್ರಮಗಳಿವೆ. ಈ ಎಲ್ಲಾ ಹಬ್ಬಗಳ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಿದೆ. ಅಧಿಕಾರಿಗಳು 24×7 ಸಕ್ರಿಯ ಮೋಡ್‌ನಲ್ಲಿರಬೇಕು ಎಂದು ಸಿಎಂ ಆದಿತ್ಯನಾಥ್ ಹೇಳಿದರು.
ಬಕ್ರೀದ್ ದಿನದಂದು ಬಲಿ ನೀಡುವ ಸ್ಥಳವನ್ನು ಮೊದಲೇ ಗುರುತಿಸಬೇಕು. ಇದನ್ನು ಬಿಟ್ಟರೆ ಬೇರೆಲ್ಲೂ ಬಲಿಯಾಗಬಾರದು. ವಿವಾದಿತ/ಸೂಕ್ಷ್ಮ ಸ್ಥಳಗಳಲ್ಲಿ ಬಲಿಯಾಗಬಾರದು. ಪ್ರತಿಯೊಂದು ಸಂದರ್ಭದಲ್ಲೂ, ಯಾವುದೇ ನಿಷೇಧಿತ ಪ್ರಾಣಿಯನ್ನು ಎಲ್ಲಿಯೂ ಬಲಿ ನೀಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ರತಿ ಜಿಲ್ಲೆಯಲ್ಲಿ ಬಲಿ ನಂತರ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥಿತ ಕ್ರಿಯಾ ಯೋಜನೆ ಆಗಬೇಕು ಎಂದು ಸಿಎಂ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲ, ನಿಗದಿತ ಸ್ಥಳದಲ್ಲಿ ಮಾತ್ರ ನಮಾಜ್ ನಡೆಸಬೇಕು. ರಸ್ತೆಗಳನ್ನು ತಡೆದು ನಮಾಜ್ ನಡೆಸಬಾರದು. ಯಾರಾದರೂ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
100 ಕೋಟಿ ಆಟವಾಡಿದ್ದಾರೆ.. ಮಾಜಿ ಸಚಿವೆ ರೋಜಾ ವಿರುದ್ಧ ಸಿಐಡಿಗೆ ದೂರು!

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:13 + 3 =
Remember me
