ಬೆಂಗಳೂರು:ಮಾನವನ ದೇಹದ ಭಾಗಗಳ ಹೋಲುವಂತಹ ಸೆಕ್ಸ್ ಟಾಯ್ಸ್​​ಗಳ ಆಮದಿಗೆ ಭಾರತದಲ್ಲಿ ನಿಷೇಧವಿದ್ದರೂ ಅಕ್ರಮವಾಗಿ ವಿದೇಶದಿಂದ ಆಮದಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಕಳೆದ 3 ವರ್ಷದಿಂದ ಬೆಂಗಳೂರಿಗೆ ಬಂದಿರುವ ಸೆಕ್ಸ್ ಟಾಯ್ಸ್​​ಗಳನ್ನು ಕೆಂಪೇಗೌಡ ಏರ್​ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದು, ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಗೋಡೌನ್ ತುಂಬುತ್ತಿರುವುದರಿಂದ ಅವುಗಳನ್ನು ನಾಶಮಾಡಲು ಅನುಮತಿಗಾಗಿ ಕೋರ್ಟ್ ಮೊರೆಹೋಗಲು ಸಿದ್ಧತೆ ನಡೆಸಿದ್ದಾರೆ.
ಮಹಿಳೆಯರು ಹಾಗೂ ಪುರುಷರ ದೇಹದ ಭಾಗಗಳ ಹೋಲುವಂತಹ ಸೆಕ್ಸ್ ಟಾಯ್ಸ್​​ಗಳನ್ನು ವಿದೇಶದ ಇ ಕಾಮರ್ಸ್ ವೆಬ್​ಸೈಟ್​ಗಳಲ್ಲಿ ಖರೀದಿಸಿ ತರಿಸಿಕೊಂಡಿದ್ದಾರೆ. ಪಾರ್ಸೆಲ್ ರೂಪದಲ್ಲಿ ಸಾಕಷ್ಟು ಸೆಕ್ಸ್ ಟಾಯ್ಗಳು ಆಮದಾಗುತ್ತಿದ್ದು, ಅನುಮಾನದ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸುವಾಗ ಅಸಲಿ ವಿಚಾರ ಬಯಲಾಗುತ್ತಿದೆ.
ಸೆಕ್ಷನ್ 11 ಸಬ್ ಸೆಕ್ಷನ್ 2(ಯು) ಕಸ್ಟಮ್ಸ್ ಕಾಯ್ದೆ-1962ರ ಪ್ರಕಾರ ಸೆಕ್ಸ್ ಟಾಯ್ಸ್​​ಗಳನ್ನು ಆಮದು ಮತ್ತು ರಫ್ತು ಭಾರತದಲ್ಲಿ ಕಾನೂನು ಬಾಹಿರವಾಗಿದೆ. ಕಾನೂನಿನ ಅರಿವಿಲ್ಲದೇ ವಿದೇಶಿ ಪೋರ್ಟಲ್ಸ್ ಹಾಗೂ ಹಲವು ವಿದೇಶಿ ವೆಬ್​ಸೈಟ್​ಗಳಲ್ಲಿ ಬೆಂಗಳೂರಿಗರು ಖರೀದಿಸುತ್ತಿದ್ದಾರೆ. ಇದಕ್ಕೆ ಆನ್​ಲೈನ್​ನಲ್ಲೇ ಹಣ ಪಾವತಿಸಿ ಆಮದು ಮಾಡಿಕೊಳ್ಳುತ್ತಾರೆ. 20 ಡಾಲರ್​ನಿಂದ 700 ಡಾಲರ್ ವರೆಗಿನ ಟಾಯ್ಸ್​​ಗಳನ್ನು ಭಾರತದಲ್ಲಿ ಹೆಚ್ಚಿನ ಬೇಡಿಕೆ ಇದೆ.
ಪಾರ್ಸೆಲ್ ಪರಿಶೀಲನೆ ವೇಳೆ ಬೆಳಕಿಗೆ:ವಿದೇಶಗಳಿಂದ ವಿಮಾನದ ಮೂಲಕ ಬರುವ ಪಾರ್ಸೆಲ್​ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಚಾಮರಾಜಪೇಟೆಯಲ್ಲಿರುವ ಫಾರಿನ್ ಪೋಸ್ಟ್ ಆಫೀಸ್​ಗೆ ಕಳುಹಿಸುತ್ತಾರೆ. ಇಲ್ಲಿ ಪಾರ್ಸೆಲ್​ಗಳನ್ನು ಪರಿಶೀಲಿಸಿ ಸಂಬಂಧಿಸಿದವರಿಗೆ ನೀಡಲಾಗುತ್ತದೆ. ಆದರೆ, ನಿಷೇಧಿತ ವಸ್ತುಗಳಾದ ಡ್ರಗ್ಸ್, ಕೆಲ ಲಿಕ್ಕರ್​ಗಳು, ಸೆಕ್ಸ್ ಟಾಯ್ಸ್​​ನಂತಹ ವಸ್ತುಗಳು ಪಾರ್ಸೆಲ್​ಗಳಲ್ಲಿ ಬಂದಿರುವುದು ಪತ್ತೆಯಾದರೆ ಕಸ್ಟಮ್್ಸ ಸಿಬ್ಬಂದಿ ಅವುಗಳನ್ನು ಜಪ್ತಿ ಮಾಡುತ್ತಾರೆ. ಸೆಕ್ಸ್ ಟಾಯ್ಸ್​​ಗಳ ದೇಶದಲ್ಲಿ ಆಮದು ಮಾಡಿಕೊಳ್ಳಬಾರದು ಎಂಬ ಬಗ್ಗೆ ಬಹುತೇಕ ಜನರಿಗೆ ಮಾಹಿತಿಯೇ ಇಲ್ಲ ಎನ್ನುತ್ತಿದ್ದಾರೆ ಕಸ್ಟಮ್್ಸ ಸಿಬ್ಬಂದಿ.
ವಿದೇಶಿ ವೆಬ್​ಸೈಟ್​ಗಳಲ್ಲೇ ಹೆಚ್ಚಾಗಿ ಖರೀದಿ:ಅಮೆರಿಕಾ, ಲಂಡನ್, ಪೋರ್ಚುಗಲ್, ಫ್ರಾನ್ಸ್ ಸೇರಿ ಯೂರೋಪ್ ಹಾಗೂ ಅಮೆರಿಕಾ ಖಂಡದ ಕೆಲ ದೇಶಗಳ ವೆಬ್​ಸೈಟ್​ಗಳ ಮೂಲಕವೇ ಹೆಚ್ಚಾಗಿ ಸೆಕ್ಸ್ ಟಾಯ್ಸ್​​ಗಳನ್ನು ಖರೀದಿಸುತ್ತಾರೆ. ದೇಶದಲ್ಲೂ ಅಕ್ರಮವಾಗಿ ಇಂತಹ ವಸ್ತುಗಳನ್ನು ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ. ಜತೆಗೆ ಕೆಲ ನಕಲಿ ವೆಬ್​ಸೈಟ್​ಗಳು ಹುಟ್ಟಿಕೊಂಡಿವೆ. ಇಂತಹ ವಸ್ತುಗಳನ್ನು ಖರೀದಿಸಲು ಆನ್​ಲೈನ್​ನಲ್ಲಿ ಹಣ ಹಾಕಿದವರು ವಂಚನೆಗೊಳಗಾದರೂ ಪೊಲೀಸರಿಗೆ ದೂರು ನೀಡುವುದಿಲ್ಲ.
ಕರೊನಾ ನಂತರ ಹೆಚ್ಚಿದ ಬೇಡಿಕೆ:ಕರೊನಾ ಸಮಯದಲ್ಲಿ ಸೆಕ್ಸ್ ಟಾಯ್ಸ್​​ಗಳ ಆಮದು ಪ್ರಮಾಣ ಹೆಚ್ಚಾಗಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ 2020ರಲ್ಲಿ ಕರೊನಾ ನಂತರದ ಸಂದರ್ಭದಲ್ಲಿ ಇದರ ಪ್ರಮಾಣ ಶೇ.60 ರಿಂದ 70 ಹೆಚ್ಚಿದೆ. ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ಪಾರ್ಸೆಲ್ ತೆಗೆದುಕೊಂಡು ಹೋಗುವವರೂ ಇದ್ದಾರೆ. ಸೆಕ್ಸ್ ಟಾಯ್ಸ್​​ಗಳ ಖರೀದಿಸುವವರಲ್ಲಿ ಪುರುಷರು ಹಾಗೂ ಮಹಿಳೆಯರು ಇಬ್ಬರೂ ಇದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೇನಾ ಹೆಲಿಕಾಪ್ಟರ್​ ದುರಂತ: ಸಾವು-ಬದುಕಿನ ನಡುವೆ ಶೌರ್ಯಚಕ್ರ ಪುರಸ್ಕೃತ, ಕ್ಯಾಪ್ಟನ್​​ ವರುಣ್​​​ ಸಿಂಗ್​​​​ ಹೋರಾಟ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
