ನವದೆಹಲಿ:ಬಾಳೆ ಬೆಳೆ ಪಾಲಿಗೆ ಇದು ಅಕ್ಷರಶಃ ಕರೊನಾ…! ಜಗತ್ತಿನ ಹಲವು ರಾಷ್ಟ್ರಗಳನ್ನು ದಾಟಿ ಈಗ ಭಾರತಕ್ಕೂ ಕಾಲಿಟ್ಟಿದೆ. ಅಲ್ಲದೇ, ಈ ಕಾಯಿಲೆಗೆ ಇನ್ನೂ ಔಷಧವನ್ನೇ ಕಂಡುಹಿಡಿಯಲಾಗಿಲ್ಲ. ಹೀಗಾಗಿ ಇದನ್ನು ಬಾಳೆ ಬೆಳೆಯ ಕೋವಿಡ್​ ಕಾಯಿಲೆ ಎಂದೇ ಕರೆಯಲಾಗುತ್ತಿದೆ.
ಟ್ರಾಪಿಕಲ್​ ರೇಸ್​​ 4 (ಟಿಆರ್​4) ಎಂದು ಗುರುತಿಸಲಾಗಿರುವ ಈ ಫಂಗಸ್​ ಮೊದಲು ತೈವಾನ್​ನಲ್ಲಿ ಕಂಡುಬಂತು. ಬಳಿಕ ಏಷ್ಯಾ, ಮಧ್ಯಪ್ರಾಚ್ಯ ರಾಷ್ಟ್ರಗಳು, ಆಫ್ರಿಕಾ ನಂತರ ಲ್ಯಾಟಿನ್​ ಅಮೆರಿಕಾ ಬಾಳೆ ತೋಟಗಳಿಗೂ ದಾಂಗುಡಿ ಇಟ್ಟಿದೆ.
ಬಾಳೆ ಬೆಳೆ ಮೇಲೆ ದಾಳಿ ನಡೆಸುವ ಈ ಫಂಗಸ್​ ಮೊದಲು ಎಲೆಗಳನ್ನು ಆಕ್ರಮಿಸುತ್ತದೆ. ಅವುಗಳ ಅಂಚನ್ನು ಹಳದಿಯಾಗಿಸಿ ಒಣಗಿಸುತ್ತದೆ. ನಂತರ ಇಡೀ ಗಿಡವನ್ನೇ ಮುದುಡುವಂತೆ ಮಾಡುತ್ತದೆ. ಈವರೆಗೆ ಇದಕ್ಕೆ ಸೂಕ್ತ ಔಷಧ ಕಂಡುಹಿಡಿಯಲಾಗಿಲ್ಲ.
ಇದನ್ನೂ ಓದಿ;ಲಾಕ್​​ಡೌನ್​ ಇಲ್ಲ… ಸಂಚಾರ ನಿರ್ಬಂಧಿಸಿಲ್ಲ…. ಆದರೂ ಜಪಾನ್​ ಕರೊನಾ ಮಣಿಸಿದ್ದೇಗೆ?
ಅತಿ ಹೆಚ್ಚು ಬಾಳೆ ಬೆಳೆಯುವ ದೇಶವಾದ ಭಾರತದಲ್ಲಿ 8-9 ತಿಂಗಳ ಹಿಂದೆಯೇ ಕಾಣಿಸಿಕೊಂಡಿದ್ದು, ವೇಗವಾಗಿ ಹರಡುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬಿಹಾರ್​ ಹಾಗೂ ಉತ್ತರಪ್ರದೇಶ ಇದರ ಹಾಟ್​ಸ್ಪಾಟ್​ಗಳು ಎಂದು ಗುರುತಿಸಲಾಗಿದೆ. ಇದರ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ ಎಂದು ಬಾಳೆ ಬೆಳೆಯ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಎಸ್​. ಉಮಾ ಹೇಳಿದ್ದಾರೆ.
ತೋಟಗಾರಿಕೆ ಬೆಳೆಯ ಅತ್ಯಂತ ವಿನಾಶಕಾರಿ ಕಾಯಿಲೆ ಇದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದಕ್ಕೆ ಔಷಧ ಇನ್ನೂ ಕಂಡುಹಿಡಿಯದ ಕಾರಣ “ಫಾರಂ​ ಕ್ವಾರಂಟೈನ್​” ಮೊದಲಾದ ಜೈವಿಕ ವಿಧಾನಗಳ ಮೂಲಕವೇ ಇದನ್ನು ನಿಯಂತ್ರಿಸಬೇಕಾಗಿದೆ ಎಂದು ತಿಳಿಸಿದೆ. ಇಂಥದ್ದೇ ಕಾಯಿಲೆ 1950ರ ದಶಕದಲ್ಲಿ ಒಂದಿಡೀ ತಳಿಯನ್ನೇ ನಾಮಾವಶೇಷಗೊಳಿಸಿತ್ತು ಎಂದು ತಜ್ಞರು ಹೇಳುತ್ತಾರೆ. ಸದ್ಯ ಇದರ ತಡೆಗೆ ನಿರಂತರ ಪ್ರಯತ್ನಗಳು ನಡೆದಿವೆ. ಬಾಳೆ ಬೆಳೆಯನ್ನು ಕತ್ತರಿಸಿ ಆ ಪ್ರದೇಶದಲ್ಲಿ ಒಂದೆರಡು ವರ್ಷ ಭತ್ತ ಅಥವಾ ಬೇರೆ ಬೆಳೆಯನ್ನು ಬೆಳೆಯುವುದೇ ಇದಕ್ಕೆ ಸದ್ಯಕ್ಕಿರುವ ಪರಿಹಾರ ಎಂದು ಕೃಷಿ ಪಂಡಿತರು ಹೇಳುತ್ತಿದ್ದಾರೆ.
ಇದನ್ನೂ ಓದಿ;ಮಾನವರ ಮೇಲೆ ಮೂರನೇ ಹಂತದ ಪ್ರಯೋಗದಲ್ಲಿ ದೇಶೀಯ ಕಂಪನಿಯ ಕರೊನಾ ಲಸಿಕೆ
ಬಾಳೆಹಣ್ಣನ್ನು ಜಾಗತಿಕವಾಗಿ ಅತಿ ಹೆಚ್ಚು ರಫ್ತು ಮಾಡಲಾಗುತ್ತದೆ. ಈ ಕಾಯಿಲೆಯನ್ನು ತಡೆಗಟ್ಟದಿದ್ದರೆ ಬಾಳೆಯ 1.96 ಲಕ್ಷ ಕೋಟಿ ರೂ.ಗಳ ಅಂತಾರಾಷ್ಟ್ರೀಯ ವಹಿವಾಟು ಧ್ವಂಸವಾಗಲಿದೆ ಎಂದು ಎಚ್ಚರಿಸಿದೆ. ಭಾರತ ಪ್ರತಿ ವರ್ಷ 270 ಲಕ್ಷ ಟನ್​ ಬಾಳೆ ಬೆಳೆಯನ್ನು ಉತ್ಪಾದಿಸುತ್ತದೆ. ಅಂದಾಜು ನೂರು ವಿಧದ ತಳಿಗಳು ಇಲ್ಲಿವೆ. ದೇಶದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ತಳಿಗೆ ಟಿಆರ್​4 ಅಂಟಿಕೊಂಡಿದೆ. ಭಾರತದಲ್ಲಿ ಬಾಳೆ ಬೆಳೆ ಹೆಚ್ಚಾಗಿ ದೇಶಿಯವಾಗಿಯೇ ಬಳಕೆಯಾಗುತ್ತದೆ.
ಹೊಸ ಮದುವೆ, ಹೊಸ ಅಪಾರ್ಟ್​ಮೆಂಟ್​, ಹೊಸ ಬದುಕು… ಆದರೆ, ಮುಗಿಯುತ್ತಲೇ ಇಲ್ಲ ಹನಿಮೂನ್​..!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two + 1 =
Remember me
