ಮಧ್ಯಪ್ರದೇಶ:ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಕೋಳಿ, ಕೋತಿ, ಕಪ್ಪೆಗಳಿಗೆ ಮದುವೆ ಮಾಡಿರುವುದನ್ನು ಈ ಹಿಂದೆ ಅನೇಕ ಬಾರಿ ಕೇಳಿದ್ದೇವೆ. ಇದೀಗ ಇಲ್ಲೊಂದು ಕಡೆ ಗಿಳಿಗಳ ಮದುವೆ ನಡೆದಿದೆ. ಅಚ್ಚರಿಯಾದ್ರು ಸತ್ಯ! ಮಧ್ಯಪ್ರದೇಶದ ಕರೇಲಿಯಲ್ಲಿ ಗಿಳಿಗಳಿಗೆ ಭಾರತೀಯ ಸಾಂಪ್ರದಾಯಿಕ ಪದ್ಧತಿಯೊಂದಿಗೆ ವಿವಾಹ ಕಾರ್ಯಕ್ರಮ ನಡೆದಿದೆ.
ಪಿಪಾರಿಯಾ ನಿವಾಸಿ ರಾಮ ಸ್ವರೂಪ್ ಪರಿಹಾರ್ ಎಂಬುವವರು ಮೈನಾ ಎಂಬ ಹೆಸರಿನ ಗಿಳಿಯನ್ನು ಮುದ್ದಾಗಿ ಸಾಕಿದ್ದರು. ಅಂತೆಯೇ ಬಾದಲ್ ಲಾಲ್ ವಿಶ್ವಕರ್ಮ ಎಂಬುವವರು ಕೂಡ ಗಿಳಿಯೊಂದನ್ನು ಸಾಕಿದ್ದರು. ಗಿಳಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಸಾಕಿದ್ದ ಇವರಿಬ್ಬರು, ಈ ಗಿಳಿಗಳ ವಂಶ ಬೆಳೆಯಬೇಕೆಂಬ ಕಾರಣಕ್ಕೆ ಮದುವೆ ಮಾಡಲು ಮುಂದಾಗಿದ್ದಾರೆ. ಅದರಂತೆ ಎರಡು ಗಿಳಿಗಳ ಜಾತಕ ನೋಡಿ, ವಿವಾಹ ಮಾಡಿದ್ದಾರೆ. ಈ ವಿಶಿಷ್ಟ ಮದುವೆ ಕಾರ್ಯಕ್ರಮಕ್ಕೆ ಕರೇಲಿ ಜಿಲ್ಲೆಯ ಪಿಪಾರಿಯಾ ಗ್ರಾಮದ ಜನರು ಸಾಕ್ಷಿಯಾಗಿದ್ದರು.

ಗಿಳಿಗಳನ್ನು ಮದುವೆ ಮಂಟಪಕ್ಕೆ ದಿಬ್ಬಣದ ಮೂಲಕ ಕರೆತರಲಾಗಿದೆ. ಈ ವೇಳೆ ಎರಡೂ ಗಿಳಿಗಳ ಕಡೆಯವರು ಸಂಭ್ರಮದಿಂದ ಡೋಲಿನ ಶಬ್ದಕ್ಕೆ ಕುಣಿಯುತ್ತಾ ದಿಬ್ಬಣದಲ್ಲಿ ಬಂದಿದ್ದಾರೆ. ಇದೀಗ ಗಿಳಿಗಳ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರು ಕಮೆಂಟ್ ಮಾಡುತ್ತಿದ್ದಾರೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:13 − eight =
Remember me
