ಪಣಜಿ:ನಾಳೆ ಡಿ. 8ರಂದು ದೇಶಾದ್ಯಂತ ಬಂದ್ ನಡೆಸಲು ರೈತ ಸಂಘಟನೆಗಳು ಕರೆ ನೀಡಿದ್ದು, ಬಹಳಷ್ಟು ಸಂಘಟನೆಗಳು ಬಂದ್​ ಮಾಡಲು ಸಾಕಷ್ಟು ತಯಾರಿ ನಡೆಸಿಕೊಂಡಿವೆ. ಈ ನಡುವೆ ಭಾರತ್ ಬಂದ್ ನಮ್ಮಲ್ಲೇನೂ ಪರಿಣಾಮ ಬೀರದು ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದೊಂದಿಗೆ ಮಾತುಕತೆ ಫಲಪ್ರದವಾಗದ್ದರಿಂದ ಭಾರತ್​ ಬಂದ್​ಗೆ ಕರೆ ನೀಡಿವೆ. ರಾಷ್ಟ್ರವ್ಯಾಪಿ ಬಂದ್ ನಡೆಸಲು ರೈತ ಸಂಘಟನೆಗಳು ನೀಡಿರುವ ಈ ಕರೆ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಯವರು ಇಂಥದ್ದೊಂದು ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರೂ ಕಾಯ್ದೆಗಳು ರೈತರ ಹಿತಾಸಕ್ತಿ ಪರವಾಗಿಯೇ ಇವೆ. ಈ ಕಾನೂನುಗಳಿಂದ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಲಭಿಸಲಿದೆ ಎಂದು ಸಮರ್ಥಿಸಿಕೊಂಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಭಾರತ್ ಬಂದ್ ಗೋವಾದಲ್ಲೇನೂ ಪರಿಣಾಮ ಬೀರದು ಎಂದಿದ್ದಾರೆ. ಮತ್ತೊಂದೆಡೆ ಗೋವಾ ಕಾಂಗ್ರೆಸ್​ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದೆ. (ಏಜೆನ್ಸೀಸ್​)
ಚಳಿಗಾಲದ ಅಧಿವೇಶನ: ಮಧ್ಯೆ ಗ್ಲಾಸು.. ಸದನದಲ್ಲೇ ‘ಗಡಿ ಮೀರಿದ’ ಶಾಸಕರು; ಇಲ್ಲಿವೆ ನೋಡಿ ಫೋಟೋಗಳು!

ಕಾಫಿ ಡೇಗೆ ಮಾಳವಿಕಾ ಹೊಸ ಸಿಇಒ; ಮಾಜಿ ಸಿಎಂ ಪುತ್ರಿ ಕೈಗೆ ಅಧಿಕಾರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
