ನವದೆಹಲಿ:ಐದು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ವಾರ್ಷಿಕ ಆದಾಯವನ್ನು ಹೊಂದಿರುವ 60 ಪ್ರತಿಶತ ಕುಟುಂಬಗಳು ಭಾರತದ ಶೇಕಡ 20 (ಸುಮಾರು 150 ಜಿಲ್ಲೆಗಳು) ಜಿಲ್ಲೆಗಳಲ್ಲಿ ನೆಲೆಸಿವೆ ಮತ್ತು ಇವು ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಮುಂಚೂಣಿಯಲ್ಲಿವೆ. ಬೆಂಗಳೂರು ನಗರ ಮತ್ತು ಹೈದರಾಬಾದ್ ಜಿಲ್ಲೆಗಳು ಎಲ್ಲ 788 ಜಿಲ್ಲೆಗಳಲ್ಲಿ 2023ರಲ್ಲಿ ಅತ್ಯಧಿಕ ಅಂಕಗಳೊಂದಿಗೆ ಮೂಲಸೌಕರ್ಯ ಬೆಳವಣಿಗೆಯಲ್ಲಿ ಅಗ್ರಸ್ಥಾನದಲ್ಲಿವೆ ಎಂದು ಮ್ಯಾಪ್​ವೆುೖ ಇಂಡಿಯಾ ಬೆಂಬಲಿತ ಡೇಟಾ ಅನಾಲಿಟಿಕ್ಸ್ ಸಂಸ್ಥೆ ಕ್ಲಾರಿಟಿಎಕ್ಸ್ ಸಮೀಕ್ಷಾ ವರದಿ ಹೇಳಿದೆ.
ಆದಾಯ ಹಂಚಿಕೆ, ಆರೋಗ್ಯ ರಕ್ಷಣೆ, ಶಿಕ್ಷಣ ಸೌಲಭ್ಯಗಳು, ಮೂಲಸೌಕರ್ಯ ಲಭ್ಯತೆ, ಬ್ಯಾಂಕಿಂಗ್ ಸೇವೆ ಒಳಗೊಳ್ಳುವಿಕೆಯಂಥ ಸಾಮಾಜಿಕ-ಆರ್ಥಿಕ ಸೂಚ್ಯಾಂಕಗಳನ್ನು ಒಳಗೊಂಡ ಡಿಸ್ಟಿ್ರ್ ಪೊಂಟೇನಶಿಯಲ್ ಇಂಡೆಕ್ಸ್ (ಡಿಪಿಐ) ಅಂಕಗಳ ಆಧಾರದ ಮೇಲೆ 2024ರ ಈ ವರದಿ ತಯಾರಿಸಲಾಗಿದೆ. ಇದು ಬೆಳವಣಿಗೆಯನ್ನು ಅಳೆಯಲು 2019ರ ಡಿಪಿಐ ಸ್ಕೋರ್​ನ್ನು 2023ರೊಂದಿಗೆ ಹೋಲಿಸಿದೆ.
2019ರಲ್ಲಿ 36 ರಾಜ್ಯಗಳಲ್ಲಿದ್ದ ಜಿಲ್ಲೆಗಳ ಸಂಖ್ಯೆ 723ರಿಂದ 2023ರಲ್ಲಿ 788ಕ್ಕೆ ಏರಿದೆ. ಜಾರ್ಖಂಡ್ ಮತ್ತು ತ್ರಿಪುರಾ ಹೆಚ್ಚು ಬೆಳವಣಿಗೆ ಕಾಣುತ್ತಿರುವ ರಾಜ್ಯಗಳಾಗಿ ಹೊರಹೊಮ್ಮಿವೆ. ವೇಗವಾಗಿ ಬೆಳೆವಣಿಗೆ ಕಾಣುತ್ತಿರುವ ರಾಜ್ಯಗಳಲ್ಲಿ ಪಂಜಾಬ್, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ಸ್ಥಾನ ಪಡೆದುಕೊಂಡಿವೆ. ವರದಿಯ ಪ್ರಕಾರ, ಆರೋಗ್ಯ ಮೂಲಸೌಕರ್ಯವು ಗಮನಾರ್ಹವಾದ ಬೆಳವಣಿಗೆಗೆ ಸಾಕ್ಷಿಯಾಗಿದೆ, ಆರೋಗ್ಯ ಮೂಲಸೌಕರ್ಯಗಳ ಸಂಖ್ಯೆಯು 2019ರಲ್ಲಿ ಪ್ರತಿ 1,000 ಜನರಲ್ಲಿ 263 ಇದ್ದದ್ದು 2023ರಲ್ಲಿ 903ಕ್ಕೆ ಏರಿಕೆಯಾಗಿದೆ.
ತೆರಿಗೆ ದರ ಬದಲಾವಣೆ ಬಗ್ಗೆ ಚರ್ಚೆ:ಸೆಪ್ಟೆಂಬರ್ 9ರಂದು ನಡೆಯಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯ 54ನೇ ಸಭೆ ತೆರಿಗೆ ದರಗಳನ್ನು ತರ್ಕಬದ್ಧಗೊಳಿಸುವ ಕುರಿತು ರ್ಚಚಿಸಲಿದೆ. ಆದರೆ ತೆರಿಗೆ ಸ್ಲಾ್ಯಬ್​ಗಳನ್ನು ಬದಲಿಸುವ ಕುರಿತು ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ. ಐಷಾರಾಮಿ ಮತ್ತು ಅಹಿತಕರ/ಹಾನಿಕಾರಕ ಸರಕುಗಳ ಮೇಲಿನ ಪರಿಹಾರ ಸೆಸ್ ಬಗ್ಗೆಯೂ ರ್ಚಚಿಸಲಾಗುವುದು ಎಂದರು. ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ನೇತೃತ್ವದಲ್ಲಿ ತೆರಿಗೆ ದರ ತರ್ಕಬದ್ಧಗೊಳಿಸುವಿಕೆಯ ಕುರಿತು ಸಚಿವರ ತಂಡ ಕಳೆದ ವಾರ ಸಭೆ ನಡೆಸಿದ್ದು, ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ಶೇಕಡ 5, 12, 18 ಮತ್ತು 28ರ ಸ್ಲಾ್ಯಬ್​ಗಳನ್ನು ಹಾಗೇ ಉಳಿಸಿಕೊಳ್ಳುವ ಕುರಿತು ಒಮ್ಮತಕ್ಕೆ ಬಂದಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × 5 =
Remember me
