ನವದೆಹಲಿ:ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್​ಸಿ ) ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ (ಕ್ಯುಎಸ್​ಡಬ್ಲ್ಯು ಯುಆರ್) ನಡೆಸಿದ ಜಾಗತಿಕ ರ‍್ಯಾಂಕಿಂಗ್ ಪಟ್ಟಿಯಲ್ಲಿ 155ನೇ ಸ್ಥಾನ ಗಳಿಸುವ ಮೂಲಕ ಭಾರತದ ಟಾಪ್ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಐಟಿಗಳನ್ನು ಹಿಂದಿಕ್ಕಿ ಈ ಸಾಧನೆ ಮಾಡಿರುವ ಐಐಎಸ್​ಸಿ, 31 ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ದಕ್ಷಿಣ ಏಷ್ಯಾದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಶಿಕ್ಷಣ ಸಂಸ್ಥೆಯಾಗಿದೆ.
ಐಐಟಿ -ಬಾಂಬೆ (ಐಐಟಿ-ಬಿ), ಐಐಟಿ -ದಿಲ್ಲಿ (ಐಐಟಿ-ಡಿ) ಕ್ರಮವಾಗಿ 172 ಮತ್ತು 174ನೇ ಸ್ಥಾನ ಗಳಿಸಿವೆ. ಜಾಗತಿಕ ಟಾಪ್ 200 ಪಟ್ಟಿಯಲ್ಲಿ ಇವೆರಡು ಐಐಟಿಗಳು ಮತ್ತು ಐಐಎಸ್​ಸಿ ಮಾತ್ರ ಸ್ಥಾನ ಪಡೆದಿವೆ. 2017ರಿಂದೀಚೆಗೆ ಜಾಗತಿಕ ಟಾಪ್ 1,000 ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಶಿಕ್ಷಣ ಸಂಸ್ಥೆಗಳ ಸಂಖ್ಯೆ 22ರಿಂದ 27ಕ್ಕೆ ಏರಿಕೆ ಆಗಿದೆ. ‘ರ್ಯಾಂಕಿಂಗ್ ಸಿದ್ಧಪಡಿಸಲು ಒಟ್ಟು 8 ಮಾನದಂಡಗಳನ್ನು ಸಿದ್ಧಪಡಿಸಲಾಗಿತ್ತು. ಅದರಲ್ಲಿ ನಾಲ್ಕು ಮಾನದಂಡಗಳನ್ನು ಐಐಎಸ್​ಸಿ ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ ಪ್ರಮುಖ 8 ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ’ ಎಂದು ಕ್ಯುಎಸ್ ವಕ್ತಾರ ವಿಲಿಯಮ್ ಬಾರ್ಬಿಯೆರಿ ತಿಳಿಸಿದ್ದಾರೆ.
1000 ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಐಐಟಿಗಳು:ಐಐಟಿ ಮದ್ರಾಸ್ (250), ಐಐಟಿ ಕಾನ್ಪುರ (264), ಐಐಟಿ ಖರಗ್​ಪುರ (270), ಐಐಟಿ ರೂರ್ಕಿ (369), ಐಐಟಿ ಗುವಾಹಟಿ (384), ಐಐಟಿ ಇಂದೋರ್ (396) ಸ್ಥಾನ ಪಡೆದಿವೆ. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಮತ್ತು ಬಿರ್ಲಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್ ಒಂದೇ ಶ್ರೇಣಿಯನ್ನು ಕಾಯ್ದುಕೊಂಡಿವೆ.
ಟಾಪ್ ರ‌್ಯಾಂಕರ್​​ಗಳು:ಮ್ಯಾಸಚೂಸೆಟ್ಸ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, (ಅಮೆರಿಕ) ಪ್ರಥಮ ರ‌್ಯಾಂಕ್, ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್ , ಬ್ರಿಟನ್( 2), ಸ್ಟಾ್ಯನ್​ಫೋರ್ಡ್ ಯೂನಿವರ್ಸಿಟಿ, ಅಮೆರಿಕ (3), ಯೂನಿವರ್ಸಿಟಿ ಆಫ್ ಆಕ್ಸ್​ಫಡ್ ರ್ ಬ್ರಿಟನ್ (4), ಹಾರ್ವಡ್ ರ್ ಯೂನಿವರ್ಸಿಟಿ, ಅಮೆರಿಕ (5), ಕ್ಯಾಲಿಫೋರ್ನಿಯಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಅಮೆರಿಕ (6), ಇಂಪೀರಿಯಲ್ ಕಾಲೇಜ್ ಲಂಡನ್, ಯುಕೆ (7), ಯುಸಿಎಲ್, ಯುಕೆ (8), ಇಟಿಎಚ್ ಜೂರಿಚ್ , ಸ್ವಿಟ್ಜರ್​ಲೆಂಡ್ (9), ಯೂನಿವರ್ಸಿಟಿ ಆಫ್ ಷಿಕಾಗೊ (ಅಮೆರಿಕ)10 ಸ್ಥಾನ ಪಡೆದಿವೆ.
ಹೋಮ್​ವರ್ಕ್ ಮಾಡದ 5 ವರ್ಷದ ಮಗಳಿಗೆ ಅಮ್ಮನಿಂದಲೇ ಇದೆಂಥ ಶಿಕ್ಷೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 19 =
Remember me
