ನವದೆಹಲಿ:ಉನ್ನತ ಶಿಕ್ಷಣ ಸಂಸ್ಥೆಗಳ 2020ರ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ಎರಡನೇ ಸ್ಥಾನ ಪಡೆದಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಪಟ್ಟಿ ಬಿಡುಗಡೆ ಮಾಡಿದರು. ಐಐಐಟಿ-ಮದ್ರಾಸ್, ಐಐಎಸ್​ಸಿ-ಬೆಂಗಳೂರು ಮತ್ತು ಐಐಟಿ-ದೆಹಲಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ಸಂಸ್ಥೆಗಳ ಕಾರ್ಯ ನಿರ್ವಹಣೆ ಆಧಾರದಲ್ಲಿ ವಿವಿಧ ವಿಭಾಗಗಳಲ್ಲಿ ಐದು ವಿಭಿನ್ನ ಮಾನದಂಡಗಳ ಆಧಾರದಲ್ಲಿ ರ್ಯಾಂಕ್ ನೀಡಲಾಗಿದೆ. ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಚೌಕಟ್ಟು (ಎನ್​ಐಆರ್​ಎಫ್-ನಿರ್ಫ್) ಎಂದು ಈ ರ್ಯಾಂಕಿಂಗನ್ನು ಕರೆಯಲಾಗುತ್ತದೆ.
ವಾರ್ಷಿಕ ರ‍್ಯಾಂಕಿಂಗ್ ಪ್ರಕಾರ, ಐಐಎಸ್​ಸಿ ಬೆಂಗಳೂರು, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್​ಯುು) ಮತ್ತು ಬನಾರಸ್ ಹಿಂದು ವಿಶ್ವವಿದ್ಯಾಲಯ ಮೊದಲ ಮೂರು ಉನ್ನತ ವಿಶ್ವವಿದ್ಯಾಲಯಗಳಾಗಿವೆ. ಐಐಎಂ ಅಹಮದಾಬಾದ್ ಅತ್ಯುನ್ನತ ಬಿಜಿನೆಸ್ ಸ್ಕೂಲ್ ಎಂದು ಮಾನ್ಯವಾಗಿದ್ದು ನಂತರದ ಎರಡು ಸ್ಥಾನಗಳು ಐಐಎಂ ಬೆಂಗಳೂರು ಹಾಗೂ ಕೋಲ್ಕತಾ ಪಾಲಾಗಿವೆ. ಕಾಲೇಜುಗಳ ಪೈಕಿ ಮಿರಾಂಡಾ ಕಾಲೇಜ್, ಲೇಡಿ ಶ್ರೀರಾಮ್ ಮಹಿಳಾ ಕಾಲೇಜು ಮತ್ತು ಸೇಂಟ್ ಸ್ಟೀಫನ್ಸ್ ಕಾಲೇಜ್ ಮೊದಲ ಮೂರು ಸ್ಥಾನ ಗಳಿಸಿವೆ. ಎಂಜಿನಿಯರಿಂಗ್ ಶಿಕ್ಷಣ ವಿಭಾಗದಲ್ಲಿ ಮೊದಲ ಮೂರು ರ್ಯಾಂಕ್ ಐಐಟಿ-ಮದ್ರಾಸ್, ದೆಹಲಿ ಮತ್ತು ಮುಂಬೈ ಪಾಲಾಗಿವೆ. ಫಾರ್ಮಸಿ ಶಿಕ್ಷಣ ವಿಭಾಗದ ಮೊದಲ ಮೂರು ಸ್ಥಾನಗಳನ್ನು ದೆಹಲಿಯ ಹಮದರ್ದ್, ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯ ಹಾಗೂ ಮೊಹಾಲಿ ರಾಷ್ಟ್ರೀಯ ಫಾರ್ವಸ್ಯುಟಿಕಲ್ ಸಂಶೋಧನಾ ಸಂಸ್ಥೆ ಪಡೆದಿವೆ.
ಚಿನ್ನದಲ್ಲಿ ಮೂಡಿದೆ ತಾಜ್​ಮಹಲ್! 17 ಗ್ರಾಂ ತೂಕದ ಕಲಾಕೃತಿಯನ್ನು ಕಣ್ತುಂಬಿಕೊಳ್ಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
