ಬೆಂಗಳೂರು:ಕರೊನಾ ಸೋಂಕು ನಿಯಂತ್ರಿಸಲು ರಾಜ್ಯರಾಜಧಾನಿ ಮತ್ತು ಬೆಂ. ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು(ಮಂಗಳವಾರ) ರಾತ್ರಿ 8ರಿಂದಲೇ ಲಾಕ್​ಡೌನ್​ ಜಾರಿಯಾಗಿದ್ದು, ಈ ಎರಡೂ ಜಿಲ್ಲೆಗಳು ಒಂದು ವಾರ ಕಂಪ್ಲೀಟ್​ ಲಾಕ್​ ಆಗಲಿದೆ.
ಜು.14ರ ರಾತ್ರಿ 8ರಿಂದ ಜು. 23ರ ಮುಂಜಾನೆ 5ರವರೆಗೆ ಬೆಂಗಳೂರು ಲಾಕ್​ ಎಂಬ ಸುದ್ದಿ ಬರುತ್ತಿದ್ದಂತೆ ಮೂರ್ನಾಲ್ಕು ದಿನಗಳಿಂದ ಬಹುತೇಕರು ಗಂಟುಮೂಟೆ ಕಟ್ಟಿಕೊಂಡು ರಾಜಧಾನಿಯನ್ನು ತೊರೆದ ದೃಶ್ಯ ಸಾಮಾನ್ಯವಾಗಿತ್ತು. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಉಳಿದೆಲ್ಲ ವಾಣಿಜ್ಯ ಚಟುವಟಿಕೆಗಳಿಗೂ ನಿರ್ಬಂಧ ಹೇರಲಾಗಿದೆ. ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರನ್ನು ಹೊರತುಪಡಿಸಿ ಉಳಿದವರು ಅನಾವಶ್ಯಕವಾಗಿ ರಸ್ತೆಗೆ ಬರುವಂತಿಲ್ಲ. ಒಂದು ಬೇಳೆ ಬಂದ್ರೆ ಪೊಲೀಸರು ಕೇಸ್​ ದಾಖಲಿಸ್ತಾರೆ ಜೋಕೆ!
ಇದನ್ನೂ ಓದಿರಿಕಲಾ ವಿಭಾಗದಲ್ಲಿ ರೈತನ ಮಗ ಕರಿಗೌಡ ದಾಸನಗೌಡ್ರ ರಾಜ್ಯಕ್ಕೆ ಟಾಪರ್​
ಒಂದು ವಾರ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕೆಎಸ್​ಆರ್​ಟಿಸಿ ಬಸ್​ ಸೇವೆ ಸ್ಥಗಿತಗೊಳ್ಳಲಿದೆ. ಬಿಎಂಟಿಸಿ ಬಸ್ ಕೂಡ ಸಂಚರಿಸುವುದಿಲ್ಲ. ಆಟೋ, ಆ್ಯಪ್​ ಆಧಾರಿತ ಟ್ಯಾಕ್ಸಿ ಸೇವೆಗಳೂ ಸ್ಥಗಿತಗೊಳ್ಳಲಿವೆ. ವೈದ್ಯಕಿಯ ಸಿಬ್ಬಂದಿ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು, ಆರೋಗ್ಯ ಸಂಬಂಧಿ ಕೆಲಸಕ್ಕೆ ಹೋಗುವವರು ಹಾಗೂ ಹೊರಜಿಲ್ಲೆ ಮತ್ತು ರಾಜ್ಯಗಳಿಂದ ರೈಲಿನ ಮೂಲಕ ಬರುವವರ ಸಂಚಾರಕ್ಕಾಗಿ ಬಿಎಂಟಿಸಿಯಿಂದ 134 ಬಸ್​ ಸೇವೆ ಕಲ್ಪಿಸಲಾಗಿದೆ. ಈ ಬಸ್​ಗಳು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಸಂಚರಿಸಲಿವೆ.
ಏನಿರುತ್ತೆ?:ಅಗತ್ಯ ವಸ್ತು ಮಾರಾಟ ಮತ್ತು ಖರೀದಿಗಷ್ಟೇ ಅನುಮತಿ ನೀಡಲಾಗಿದೆ. ಉಳಿದಂತೆ ಶಾಪಿಂಗ್​ ಮಾಲ್​, ವಾಣಿಜ್ಯ ಮಳಿಗೆಗಳು, ಕಾರ್ಖಾನೆ ಸೇರಿ ಇನ್ನಿತರ ಉದ್ಯಮಗಳು ತೆರೆಯುವಂತಿಲ್ಲ. ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಸಾರಿಗೆ ಸೇವೆ ರದ್ದಾಗಿದೆ. ಮದ್ಯ ಮಾರಾಟ ಮಾಡುವಂತಿಲ್ಲಲಾಕ್​ಡೌನ್​ ಅವಧಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಔಷಧಾಲಯ, ಆಂಬುಲೆನ್ಸ್​, ಹಾಲು, ದಿನಪತ್ರಿಕೆ, ಪೆಟ್ರೋಲ್​ ಬಂಕ್​ ಕಾರ್ಯ ನಿರ್ವಹಿಸಲಿವೆ. ಆಹಾರ ಮಳಿಗೆಗಳು, ತರಕಾರಿ, ಮಾಂಸ, ಹಣ್ಣಿನ ಮಾರುಕಟ್ಟೆಗಳು ತೆರೆದಿರುತ್ತವೆ. ಸರಕು ಸಾಗಣೆಗೆ ಅವಕಾಶ ಇದೆ. ಪೊಲೀಸ್​, ಅಗ್ನಿಶಾಮಕ ಸೇವೆ ನಿರಂತರ. ಬ್ಯಾಂಕ್​, ಎಟಿಎಂಗಳು ತೆರೆದಿರಲಿವೆ. ಹೋಟೆಲ್​ ತೆರೆದಿರುತ್ತವೆಯಾದರೂ ಪಾರ್ಸೆಲ್​ಗಳಿಗಷ್ಟೆ ಅವಕಾಶ. ಆಹಾರ, ಔಷಧಗಳನ್ನು ಮನೆಗೆ ಡೆಲಿವರಿ ಕೊಡಲು ಅವಕಾಶವಿದೆ. ದಿನಪತ್ರಿಕೆ ಲಭ್ಯ ಇರಲಿದೆ.
ಮಂಗಳೂರು, ಶಿವಮೊಗ್ಗ ಸೇರಿ ಇನ್ನಿತರ ಜಿಲ್ಲೆಗಳಲ್ಲೂ ಲಾಕ್​ಡೌನ್​ ಮಾಡಲು ಆಯಾ ಜಿಲ್ಲಾಧಿಕಾರಿಗಳು ನಿರ್ಧರಿಸಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಇಡೀ ದಿನ ಲಾಕ್​ಡೌನ್​ ಮಾಡದೆ ಅರ್ಧ ದಿನ ಲಾಕ್​ಡೌನ್​ ಮಾಡಲಾಗುತ್ತಿದೆ.
ಲೇಡೀಸ್ ಜತೆ ಸೆಕ್ಸ್ ಜಾಬ್​! ಕೆಲಸಕ್ಕೆ ಸೇರಿದ ಟೆಕ್ಕಿ ಕಥೆ ಏನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 19 =
Remember me
