ಬೆಳಗಾವಿ:ದೇಶದಾದ್ಯಂತ ಪ್ರಯಾಣಿಕ ರೈಲುಗಳ ಸೇವೆಯನ್ನು ಮೊದಲ ಹಂತವಾಗಿ 15 ಮಾರ್ಗಗಳಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ಬೆನ್ನಿಗೇ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಯಾವಾಗ ಶುರುವಾಗುತ್ತದೆ ಎಂಬ ಯೋಚನೆ ಜನರ ಮನಸ್ಸಿನಲ್ಲಿ ಸುಳಿದಾಡತೊಡಗಿದೆ.
ಈ ಕುರಿತು ಬೆಳಗಾವಿಯಲ್ಲಿ ಸೋಮವಾರ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ಸುದ್ದಿಗಾರರು ಪ್ರಶ್ನಿಸಿದರು.
‘‘ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಆರಂಭಿಸುವ ಕುರಿತು ರಾಜ್ಯ ಸರ್ಕಾರವೇ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಿದೆ’’ ಎಂದು ಅವರು ಉತ್ತರಿಸಿದರು.
ಇದನ್ನೂ ಓದಿಮುಂಬೈನಿಂದ ಬಂದು ಸುತ್ತ ಹತ್ತೂರು ಓಡಾಡಿದವನಿಗೆ ಕರೊನಾ ಸೋಂಕು; ಜಿಲ್ಲಾಡಳಿತಕ್ಕೆ ತಲೆನೋವು..
‘‘ಸದ್ಯ 15 ಪ್ರಯಾಣಿಕ ರೈಲುಗಳ ಸಂಚಾರವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಸ್ಥಳೀಯ ಮಟ್ಟದಲ್ಲಿ ರೈಲು ಸೇವೆ ಆರಂಭಿಸುವ ಕುರಿತು ಆಯಾ ರಾಜ್ಯ ಸರ್ಕಾರಗಳೇ ತೀರ್ಮಾನಿಸಲಿವೆ’’ ಎಂದು ಸಚಿವ ಅಂಗಡಿ ತಿಳಿಸಿದರು.
‘ನಮ್ಮ ಮೆಟ್ರೋ’ ಸೇವೆ ಪುನರಾರಂಭಿಸುವ ಕುರಿತು ಬಿಎಂಆರ್‌ಸಿಎಲ್ ಕೂಡ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೆ ರಾಜ್ಯ ಸರ್ಕಾರವು ಬಿಎಂಟಿಸಿ ಮತ್ತು ಇತರ ನಗರಗಳಲ್ಲಿ ಬಸ್ ಸಂಚಾರ ಆರಂಭಿಸಿದ ತಕ್ಷಣವೇ ಮೆಟ್ರೋ ರೈಲು ಸೇವೆ ಕೂಡ ಆರಂಭವಾಗುವ ಸಾಧ್ಯತೆ ಇದೆ.
ಒಂದು ಮೂಲದ ಪ್ರಕಾರ, ಮೇ 20ರೊಳಗೆ ಕೆಲವು ಷರತ್ತುಗಳೊಂದಿಗೆ ನಗರದಲ್ಲಿ ಬಸ್ ಸಂಚಾರ ಮತ್ತು ಮೆಟ್ರೋ ರೈಲು ಸೇವೆ ಪುನರಾರಂಭವಾಗುವ ನಿರೀಕ್ಷೆ ಇದೆ.
VIDEO |ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ ಅವರನ್ನು ಪ್ರಭಾವಗೊಳಿಸಿದ ಈ ವಿಡಿಯೋ ಯಾವುದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 5 =
Remember me
