ಬೆಂಗಳೂರು :ಭಾರತದಲ್ಲಿ ತುರ್ತು ಬಳಕೆ ಅನುಮತಿಗಾಗಿ ಕಾಯುತ್ತಿರುವ ರಷ್ಯಾದ ಸ್ಪುಟ್ನಿಕ್ ವಿ ಕರೊನಾ ಲಸಿಕೆಯ 200 ಮಿಲಿಯನ್ ಡೋಸ್‌ಗಳನ್ನು ತಯಾರಿಸಲು ಬೆಂಗಳೂರಿನ ಸ್ಟೆಲಿಸ್ ಬಯೋಫಾರ್ಮಾ ಮುಂದಾಗಿದೆ. ಈ ರಷಿಯನ್ ಲಸಿಕೆಯ ತಯಾರಿಕೆಗೆ ಒಪ್ಪಂದ ಮಾಡಿಕೊಳ್ಳುತ್ತಿರುವ ನಾಲ್ಕನೇ ಭಾರತೀಯ ಕಂಪೆನಿ ಇದಾಗಿದೆ.
ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿರುವ ಸ್ಟ್ರೈಡ್ಸ್ ಫಾರ್ಮಾ ಸೈನ್ಸ್‌ನ ಬಯೋಫಾರ್ಮಾಸ್ಯುಟಿಕಲ್ ವಿಭಾಗವಾದ ಸ್ಟೆಲಿಸ್, ರಷಿಯನ್ ಡೈರೆಕ್ಟ್ ಇನ್ವೆಸ್ಟ್​ಮೆಂಟ್ ಫಂಡ್(ಆರ್​​ಡಿಐಎಫ್)​ನೊಂದಿಗೆ ಈ ಕುರಿತು ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಭಾರತ ಈ ಲಸಿಕೆಯನ್ನು ವರ್ಷಕ್ಕೆ ಸುಮಾರು 550 ಮಿಲಿಯನ್ ಡೋಸ್​ಗಳನ್ನು ಉತ್ಪಾದಿಸುವ ಸಾಮರ್ಥ್ಯ ಪಡೆಯಲಿದೆ.
ಇದನ್ನೂ ಓದಿ:ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !
2021 ರ ಜುಲೈನಿಂದ ಸೆಪ್ಟೆಂಬರ್​​ವರೆಗಿನ ಮೂರು ತಿಂಗಳ ಅವಧಿಯಲ್ಲಿ ಸ್ಪುಟ್ನಿಕ್ ವಿ ಉತ್ಪಾದನೆ ಮತ್ತು ಸರಬರಾಜನ್ನು ಪ್ರಾರಂಭಿಸಲು ಸ್ಟೆಲಿಸ್ ಕಂಪನಿ ಉದ್ದೇಶಿಸಿದೆ. ಆರಂಭಿಕವಾಗಿ 200 ಮಿಲಿಯನ್ ಡೋಸ್​ಗಳನ್ನು ತಯಾರಿಸುವ ಒಪ್ಪಂದವಾಗಿದ್ದು, ಹೆಚ್ಚಿನ ಉತ್ಪಾದನೆಯ ಅವಕಾಶವೂ ತೆರೆದಿದೆ. ಏಕೆಂದರೆ “ಆರಂಭಿಕ ಒಪ್ಪಂದವನ್ನು ಮೀರಿ ಹೆಚ್ಚುವರಿ ಪೂರೈಕೆ ಮಾಡಲು ಸ್ಟೆಲಿಸ್ ಆರ್​​ಡಿಐಎಫ್ ಜೊತೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ” ಎಂದು ಆರ್​​ಡಿಐಎಫ್ ಹೇಳಿಕೆ ನೀಡಿದೆ.
ಈ ಮುನ್ನ ಹೈದರಾಬಾದ್​ನ ಗ್ಲಾಂಡ್ ಫಾರ್ಮ ಮತ್ತು ಹೆಟೆರೋ ಬಯೋಫಾರ್ಮಗಳು ಕ್ರಮವಾಗಿ 252 ಮಿಲಿಯನ್ ಡೋಸ್​ಗಳ ಮತ್ತು 100 ಮಿಲಿಯನ್ ಡೋಸ್​ಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿವೆ. ಅದಲ್ಲದೆ, ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಕಂಪೆನಿ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಎಫಿಕೆಸಿ ಅಧ್ಯಯನವನ್ನು ಮುಂದುವರೆಸಿ, ತುರ್ತು ಬಳಕೆ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿದೆ. ಅನುಮೋದನೆ ಸಿಕ್ಕಲ್ಲಿ ರೆಡ್ಡೀಸ್ ಕೂಡ 200 ಮಿಲಿಯನ್ ಡೋಸ್​ಗಳ ಉತ್ಪಾದನೆ ಮಾಡಲಿದೆ ಎನ್ನಲಾಗಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮೇಲೆ ನಿರ್ಬಂಧ… ಸಿಎಂ ಯಡಿಯೂರಪ್ಪ ಹೇಳಿದ್ದೇನು?
ಈ ಮುದ್ದು ಮಗು ಮುಂದೆ ಬಿಗ್ ಬಾಸ್ ಖ್ಯಾತಿ ಗಳಿಸಿದಾಕೆ… ಯಾರೆಂದು ಊಹಿಸಬಲ್ಲಿರಾ?!
ಎರಡು ಮಕ್ಕಳ ತಂದೆಯನ್ನು ಮದುವೆಯಾದಳು, ತನ್ನದೇ ಮಗು ಹುಟ್ಟಿದಾಗ ಮೆಟರ್ನಿಟಿ ಲೀವ್ ಕೇಳಿದಳು… ಹೈಕೋರ್ಟ್ ಏನು ಹೇಳಿತು ನೋಡಿ…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + one =
Remember me
