ಬೆಂಗಳೂರು :ಎರಡು ದಶಕಗಳ ನಂತರ ಒಲಂಪಿಕ್ಸ್​ನಲ್ಲಿ ಭಾರತವನ್ನು ಇಖ್ವೆಸ್ಟ್ರಿಯನ್ ಈವೆಂಟ್​(ಕುದುರೆ ಸವಾರಿ)ನಲ್ಲಿ ಪ್ರತಿನಿಧಿಸುತ್ತಿರುವ ಕ್ರೀಡಾಪಟು, ಬೆಂಗಳೂರಿನ ಫೌಆದ್ ಮಿರ್ಜ. ಚಿಕ್ಕಂದಿನಿಂದ ಕುದುರೆ ಸವಾರಿ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಮಿರ್ಜ, 2018 ರ ಏಷಿಯನ್ ಗೇಮ್ಸ್​ನಲ್ಲಿ ವೈಯಕ್ತಿಕ ಮತ್ತು ತಂಡದ ಆಟಗಳೆರಡರಲ್ಲೂ ದೇಶಕ್ಕೆ ಎರಡು ಬೆಳ್ಳಿ ಪದಕ ತಂದಿರುವ ಕೀರ್ತಿ ಹೊಂದಿದ್ದಾರೆ.
ಅರ್ಜುನ್​ ಪ್ರಶಸ್ತಿ ವಿಜೇತರಾಗಿರುವ 29 ವರ್ಷದ ಮಿರ್ಜ, 1992 ರ ಮಾರ್ಚ್​ 6 ರಂದು ಬೆಂಗಳೂರಿನಲ್ಲಿ ಜನಿಸಿದರು. ಕುದುರೆ ಸವಾರರ ಇತಿಹಾಸವಿರುವ ಕುಟುಂಬಕ್ಕೆ ಸೇರಿದ ಅವರು, ಆರು ತಿಂಗಳ ಮಗುವಿದ್ದಾಗ ಮೊದಲ ಬಾರಿ ತಂದೆಯೊಂದಿಗೆ ಕುದುರೆಯ ಬೆನ್ನೇರಿದರು. ಹಾಲಿ, ತಮ್ಮ ಕ್ರೀಡೆಯ ಅಭ್ಯಾಸದೊಂದಿಗೆ ಕುದುರೆಗಳ ಆರೈಕೆ ಮಾಡುತ್ತಾ, ದಿನದ 12 ಗಂಟೆಗಳನ್ನು ಕುದುರೆಗಳೊಂದಿಗೇ ಕಳೆಯುತ್ತಾರೆ ಎನ್ನಲಾಗಿದೆ.
.@FouaadMirza, the first Indian in 20 years to qualify for an equestrian event at the Olympics, is determined to give his best at#Tokyo2020
Celebrate his journey with#Cheer4India@PMOIndia@ianuragthakur@NisithPramanik@WeAreTeamIndia@YASMinistry@ddsportschannelpic.twitter.com/jI795z9WRe
— Khelo India (@kheloindia)July 19, 2021

ಕುದುರೆ ಸವಾರಿ ಮಾಡುತ್ತಾ ಹರ್ಡಲ್​ಗಳನ್ನು ದಾಟುವ ವಿಶಿಷ್ಟ ಕ್ರೀಡೆಯಾದ ಈಖ್ವೆಸ್ಟ್ರಿಯನ್ ಈವೆಂಟ್​ನಲ್ಲಿ ಭಾರತದಿಂದ ಒಲಂಪಿಕ್ಸ್​ಗೆ ಆಯ್ಕೆಯಾದವರಲ್ಲಿ ಮಿರ್ಜ ಮೂರನೆಯವರು. ಪೋಲೆಂಡ್​ನಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಕನಿಷ್ಠ ಅರ್ಹತೆಯ ಮಟ್ಟವನ್ನು ಪೂರೈಸಿ ಉತ್ತಮ ಪ್ರದರ್ಶನ ನೀಡಿ, ಟೋಕಿಯೋ ಒಲಂಪಿಕ್ಸ್​ಗೆ ಅವರು ಆಯ್ಕೆಯಾಗಿದ್ದಾರೆ.
ಎಚ್​​ಡಿಕೆ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ : ಸಚಿವ ಈಶ್ವರಪ್ಪ

ಕಾರಿನಲ್ಲಿ ಹಣವಿಟ್ಟು ಚಾಲಕನಿಗೆ ಹೇಳಿ ಹೋದರು… ವಾಪಸ್​ ಬಂದಾಗ ಕಾದಿತ್ತು ಶಾಕ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + ten =
Remember me
