ಬಾಂಗ್ಲಾದೇಶ:ಟಾಪ್ ಕ್ಲಾಸ್​ ಚೆಸ್ ಗ್ರ್ಯಾಂಡ್‌ಮಾಸ್ಟರ್ ಜಿಯಾವುರ್ ರೆಹಮಾನ್ ಅವರು ಚದುರಂಗ ಪಂದ್ಯದಲ್ಲಿ ತೊಡಗಿದ್ದಾಗ ದಿಢೀರ್​ ಕುಸಿದುಬಿದ್ದು, ಇಹಲೋಕ ತ್ಯಜಿಸಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಶಿಪ್ ಪಂದ್ಯದ ವೇಳೆ ಅವರು ಕುಸಿದುಬಿದ್ದು ನಿಧನರಾದರು ಎಂದು ಸ್ಥಳೀಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಯಶಸ್ವಿ ವಿಕ್ಟರಿ ಪರೇಡ್​; ಮುಂಬೈ ಪೊಲೀಸರಿಗೆ ಕೊಹ್ಲಿ, ಜಡೇಜಾ ಸಲಾಂ
ಬಾಂಗ್ಲಾದೇಶ ಚೆಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿಯಾದ ಶಹಾಬ್ ಉದ್ದೀನ್ ಶಮಿಮ್ ಕೊಟ್ಟ ಮಾಹಿತಿ ಪ್ರಕಾರ, ಚಾಂಪಿಯನ್​ಶಿಪ್ ಪಂದ್ಯದಲ್ಲಿ ಜಿಯಾವುರ್ 12ನೇ ಸುತ್ತಿನ ಪಂದ್ಯದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಎದುರಾಳಿ ಇನಾಮುಲ್ ಹೊಸೈನ್ ವಿರುದ್ಧ ಪಂದ್ಯವಾಡುತ್ತಿದ್ದಾಗ ದಿಢೀರ್​​ ಕುಸಿದುಬಿದ್ದರು. ತಕ್ಷಣವೇ ಅವರನ್ನು ಢಾಕಾದ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ, ಅಷ್ಟರೊಳಗೆ ಅವರು ಸಾವನ್ನಪ್ಪಿದ್ದರು ಎಂಬುದನ್ನು ವೈದ್ಯರು ಧೃಡಪಡಿಸಿದರು ಎಂದು ಹೇಳಿದ್ದಾರೆ.
ಆಟದ ಮಧ್ಯೆ ಅವರು ಆಯಾಸಗೊಂಡಿರುವುದು ಅಥವಾ ಕಷ್ಟಪಡುತ್ತಿದ್ದಾರೆ ಎಂಬ ಯಾವುದೇ ಸೂಚನೆಗಳು ನನಗೆ ಕಂಡುಬರಲಿಲ್ಲ. ಆದ್ರೆ, ಎದುರಿಗೆ ಕುಳಿತ್ತಿದ್ದ ರೆಹಮಾನ್​, ತಕ್ಷಣವೇ ಕುಸಿದುಬಿದ್ದರು ಎಂದು ಜಿಯಾವುರ್​ ಅವರ ಪ್ರತಿಸ್ಪರ್ಧಿ ಇನಾಮುಲ್​ ತಿಳಿಸಿದರು,(ಏಜೆನ್ಸೀಸ್).
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
