ಬಾಂಗ್ಲಾದೇಶ:ಗಡಿಯಾಚೆಗಿನ ವನ್ಯಜೀವಿ ಕಳ್ಳಸಾಗಣೆ ಯತ್ನವನ್ನು ಪತ್ತೆಹಚ್ಚಿದ ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಅಕ್ರಮ ಕಳ್ಳಸಾಗಣೆಯಲ್ಲಿ ತೊಡಗಿದ್ದ ಓರ್ವ ಬಾಂಗ್ಲಾದೇಶ ಪ್ರಜೆಯನ್ನು ಬಂಧಿಸಿ, ಆತನ ಬಳಿಯಿದ್ದ 296 ಭಾರತೀಯ ನಕ್ಷತ್ರ ಆಮೆಗಳನ್ನು ರಕ್ಷಣೆ ಮಾಡಿದೆ.
ಇದನ್ನೂ ಓದಿ:12ರಂದು ಹೈಟೆನ್ಷನ್ ಬಿಜೆಎಲ್ಪಿ ಮೀಟಿಂಗ್: ಹೊಸ ನೇಮಕ, ವರಿಷ್ಠರ ಸಂದೇಶ ರವಾನೆ, ಗೊಂದಲಗಳಿಗೆ ತೆರೆ ನಿರೀಕ್ಷೆ
ಆರೋಪಿಯನ್ನು 36 ವರ್ಷದ ಬಾಂಗ್ಲಾದೇಶಿ ಪ್ರಜೆಯ ರಫಿಕುಲ್ ಶೇಖ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಭದ್ರತಾ ಪಡೆ ಉತ್ತರ 24 ಪರಗಣ ಜಿಲ್ಲೆಯಲ್ಲಿ ಬಂಧಿಸಿದೆ. ವನ್ಯಜೀವಿ ಕಳ್ಳಸಾಗಣೆ ಸಾಧ್ಯತೆಯ ಬಗ್ಗೆ ಗುಪ್ತಚರ ವರದಿಯನ್ನು ಪಡೆದ ಬೆನ್ನಲ್ಲೇ ಬಿಎಸ್‌ಎಫ್ ಪಡೆಗಳು ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ರು ಕೂಡ ಭದ್ರತಾ ಪಡೆ ಆತನನ್ನು ಪತ್ತೆಹಚ್ಚಿ 296 ಆಮೆಗಳಿದ್ದ ಮೂರು ಚೀಲಗಳನ್ನು ವಶಪಡಿಸಿಕೊಂಡಿದೆ. ವಿಚಾರಣೆ ವೇಳೆ ಶೇಖ್ ತನ್ನ ಬಾಂಗ್ಲಾದೇಶದ ರಾಷ್ಟ್ರೀಯ ಸಹವರ್ತಿ ಜಾಕೀರ್ ಹುಸೇನ್ ನಿರ್ದೇಶನದ ಮೇರೆಗೆ ಡಿಸೆಂಬರ್ 6 ರಂದು ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ದಾಟಿದ್ದಾಗಿ ಬಹಿರಂಗಪಡಿಸಿದ್ದಾನೆ. ನಂತರ ಭಾರತೀಯ ವ್ಯಾಪಾರಿಗಳಿಂದ ಆಮೆಗಳನ್ನು ಸಂಗ್ರಹಿಸಿದ್ದು, ಅಲ್ಲಿಂದ ಅದನ್ನು ಹುಸೇನ್​ಗೆ ತಲುಪಿಸಲು ಮಾರ್ಗದಲ್ಲಿದ್ದ ಎಂದು ತಿಳಿಸಿದ್ದಾನೆ.
ಇದನ್ನೂ ಓದಿ:ಬಿಜೆಪಿ ಪಟ್ಟು ಸರ್ಕಾರಕ್ಕೆ ಇಕ್ಕಟ್ಟು: 11 ಸಾವಿರ ಕೋಟಿ ರೂ. ಎಸ್ಸಿಎಸ್ಟಿ ಕಲ್ಯಾಣಕ್ಕೇ ಬಳಸಲು ಆಗ್ರಹ
ಸದ್ಯ ಆರೋಪಿಯನ್ನು ಪಶ್ಚಿಮ ಬಂಗಾಳ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ವಶಪಡಿಸಿಕೊಂಡ ಆಮೆಗಳನ್ನು ಬಂಗೋನ್‌ನಲ್ಲಿರುವ ಅರಣ್ಯ ಕಚೇರಿಗೆ ಸುರಕ್ಷಿತವಾಗಿ ತಲುಪಿಸಲಾಗಿದೆ,(ಏಜೆನ್ಸೀಸ್).
ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆಕಸ್ಮಿಕ ಧನ ಲಾಭ, ತೆರೆಯಲಿದೆ ಅದೃಷ್ಟದ ಬಾಗಿಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − seven =
Remember me
