ಚೆನ್ನೈ:ಸೂಕ್ತವಾದ ವೀಸಾ ಇಲ್ಲದೆ ತಮಿಳುನಾಡಿನ ಮಿಂಜರ್​ ನಗರದಲ್ಲಿ ವಾಸವಿದ್ದ ಬಾಂಗ್ಲಾದೇಶ ಮೂಲದ 22 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತಳನ್ನು ಪಾಪಿಯಾ ಘೋಷ್​ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ಶಶಿ ಶೇಕ್​ ಎಂಬಾತನೊಂದಿಗೆ ಪಾಪಿಯಾಗೆ ಫೇಸ್​ಬುಕ್​ ಮೂಲಕ ಪರಿಚಯವಾಗಿ, ಪ್ರೀತಿಗೆ ತಿರುಗಿತ್ತು. ತನ್ನ ಪ್ರಿಯಕರನನ್ನು ಭೇಟಿ ಮಾಡಲು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಳು.
ಬಳಿಕ ಇಬ್ಬರು ತಮಿಳುನಾಡಿನ ತಿರ್ಪೂರ್​ಗೆ ಆಗಮಿಸಿ ಮದುವೆಯಾಗಿ ಅಲ್ಲಿಯೇ ವಾಸವಿದ್ದರು. ಕೆಲವೇ ದಿನಗಳಲ್ಲಿ ಕಂಟೈನರ್​ ಯಾರ್ಡ್​ ಕೆಲಸ ಸಿಕ್ಕಿದ್ದರಿಂದ ತಿರ್ಪೂರ್​ ಬಿಟ್ಟು ಮಿಂಜುರ್​ಗೆ ಬಂದು ನೆಲೆಸಿದ್ದರು. ಇಬ್ಬರು ಮಿಂಜುರ್​ಗೆ ಬರುವ ಮುನ್ನ ಫೆಬ್ರವರಿಯಲ್ಲೇ ಪೊಲ್ಲಾಚಿಯಲ್ಲಿ ರಿಜಿಸ್ಟರ್​ ಮದುವೆ ಆಗಿದ್ದರು.
ಇದನ್ನೂ ಓದಿ:ಅಣ್ಣ-ಅತ್ತಿಗೆ ಅಮ್ಮನ ಸರಿಯಾಗಿ ನೋಡಿಕೊಳ್ತಿಲ್ಲ… ಪ್ಲೀಸ್​ ಕಾನೂನಿನಡಿ ಪರಿಹಾರ ಹೇಳಿ…
ಇದರ ನಡುವೆ ಪಾಪಿಯಾ ಪಾಲಕರು ಬಾಂಗ್ಲಾದೇಶದಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಹೀಗಿರುವಾಗ ತಮಿಳುನಾಡಿನ ಕಾಂಚಿಪುರಂ ಅಪರಾಧ ವಿಭಾಗಕಕ್ಕೆ ಮಹಿಳೆ ಕುರಿತು ಮಾಹಿತಿ ಸಿಗುತ್ತದೆ. ತಕ್ಷಣ ಮಿಂಜುರ್​ಗೆ ತೆರಳಿ ಪಾಪಿಯಾಳನ್ನು ವಿಚಾರಣೆ ನಡೆಸುತ್ತಾರೆ. ದಾಖಲೆಗಳನ್ನು ಪರಿಶೀಲಿಸಿದಾಗ ಆಕೆಯ ಬಳಿ ಯಾವುದೇ ಮಾನ್ಯ ಪಡೆದ ವೀಸಾ ಇರದಿರುವುದು ತಿಳಿದು ಇದೀಗ ಆಕೆಯನ್ನು ಬಂಧಿಸಿದ್ದಾರೆ.
ಸದ್ಯ ಬಂಧಿಯಾಗಿರುವ ಪೊಪಿಯಾಳನ್ನು ತವರಿಗೆ ಕಳುಹಿಸಬೇಕಾ? ಬೇಡ್ವಾ? ಎಂಬುದರ ಬಗ್ಗೆ ವಲಸೆ ಇಲಾಖೆ ಅಧಿಕಾರಿಗಳು ನಿರ್ಧರಿಸುತ್ತಾರೆಂದು ತಿರುವಳ್ಳೂರ್​ ಪೊಲೀಸ್​ ವರಿಷ್ಠಾಧಿಕಾರಿ ಪಿ. ಅರವಿಂದನ್​ ತಿಳಿಸಿದ್ದಾರೆ.(ಏಜೆನ್ಸೀಸ್​)
ಮೂರು ಮಕ್ಕಳನ್ನು ಕಾಲುವೆಗೆ ತಳ್ಳಿ ಕೊಂದ ತಂದೆ- ಇದಕ್ಕೆ ಕಾರಣ ಹೆಂಡ್ತಿಯಂತೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 + twenty =
Remember me
