ಬೆಂಗಳೂರು:ಚಿಟಿಕೆ ಹೊಡೆಯುವುದರೊಳಗೆ, ಕಣ್ಣು ಮಿಟುಕಿಸುವಷ್ಟರಲ್ಲಿ ಏನನ್ನಾದರೂ ಪಡೆಯಬಹುದು ಎಂದು ಕೆಲವೊಮ್ಮೆ ಮಾತಿಗೆ ಹೇಳುವುದಿದೆ. ಆದರೆ ಇಲ್ಲೊಬ್ಬರು ಮಹಿಳೆ ಕಣ್ಣು ಮಿಟುಕಿಸಲಾಗದ ಒಂದೇ ಕಾರಣಕ್ಕೆ ಬ್ಯಾಂಕ್ ಖಾತೆಯನ್ನು ಪಡೆಯಲಾಗದ ಪರಿಸ್ಥಿತಿ ಉಂಟಾಗಿದೆ.
ಲೇಖಕಿ, ಮೋಟಿವೇಷನಲ್ ಸ್ಪೀಕರ್, ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಪ್ರಾಗ್ಯಾ ಪ್ರಸುನ್ ಸಿಂಗ್ ಎಂಬಾಕೆ ಬ್ಯಾಂಕ್ ಖಾತೆ ಪಡೆಯಲಾಗದ ತಮ್ಮ ಪರಿಸ್ಥಿತಿ ಬಗ್ಗೆ ತೀವ್ರ ಬೇಸರದಿಂದ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅದೂ ಬರೀ ಕಣ್ಣು ಮಿಟುಕಿಸಲು ಆಗುವುದಿಲ್ಲ ಎಂಬ ಕಾರಣಕ್ಕೇ ಬ್ಯಾಂಕ್ ಅವರಿಗೆ ಖಾತೆ ನೀಡಲಾಗದು ಎಂದು ಹೇಳಿದೆಯಂತೆ.
ಇದನ್ನೂ ಓದಿ:ಡಿಜಿಟಲ್ ಪ್ರಾಬಲ್ಯದಲ್ಲಿ ಕೆನರಾ ಬ್ಯಾಂಕ್ ಸತತ ಎರಡನೇ ವರ್ಷ ನಂಬರ್ ಒನ್!
Being an acid attack survivor shouldn’t prohibit me from living a dignified life. It’s unjust that I was denied a bank a/c because I can’t blink for the KYC process. Requesting@iamsrk@MeerFoundationto help me make this world inclusive for acid attack survivors#Iwontblink
— pragya prasun singh (@pragyaprasun)July 12, 2023

ಆಸಿಡ್ ದಾಳಿಯಿಂದ ಬದುಕುಳಿದವಳಾಗಿರುವ ನಾನು ಗೌರವಯುತ ಜೀವನವನ್ನು ನಡೆಸುವುದನ್ನು ತೊಂದರೆ ಆಗಬಾರದು. ಕೆವೈಸಿ ಪ್ರಕ್ರಿಯೆಗಾಗಿ ನಾನು ಕಣ್ಣು ಮಿಟುಕಿಸಲು ಸಾಧ್ಯವಿಲ್ಲದ ಕಾರಣ ನನಗೆ ಬ್ಯಾಂಕ್ ಖಾತೆಯನ್ನು ನಿರಾಕರಿಸಿರುವುದು ಅನ್ಯಾಯವಾಗಿದೆ ಎಂದು ಹೇಳಿಕೊಂಡಿರುವ ಪ್ರಾಗ್ಯಾ ತಮ್ಮ ಈ ನೋವಿನ ಕುರಿತ ಟ್ವೀಟನ್ನು ನಟ ಶಾರುಖ್ ಖಾನ್ ಅವರ ಟ್ವಿಟರ್​ ಹ್ಯಾಂಡಲ್​ಗೂ ಮೆನ್ಷನ್ ಮಾಡಿದ್ದಾರೆ. ನನಗೆ ಕಣ್ಣು ಮಿಟುಕಿಸಲಾಗದು ನಿಜ, ಆದರೆ ಆ್ಯಸಿಡ್ ದಾಳಿ ಸಂತ್ರಸ್ತರಿಗೂ ಈ ಜಗತ್ತಿನಲ್ಲಿ ಒಳಗೊಳ್ಳುವ ಅವಕಾಶಕ್ಕಾಗಿ ನನಗೆ ಸಹಾಯ ಬೇಕು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.


ಪತಿಯ ಕಣ್ಣಿಗೆ ಕಾರದ ಪುಡಿ ಎರಚಿ, ಪತ್ನಿಯನ್ನು ಹೊತ್ತೊಯ್ದರು: ಪ್ರೇಮವಿವಾಹವಾದ ಒಂದೇ ತಿಂಗಳಲ್ಲಿ ದಂಪತಿಗೆ ಆಪತ್ತು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 5 =
Remember me
