ನವದೆಹಲಿ:ಸಂಕಷ್ಟಕ್ಕೆ ಸಿಲುಕುವ ಬ್ಯಾಂಕುಗಳ ವಹಿವಾಟಿನ ಮೇಲೆ ನಿರ್ಬಂಧ ಹೇರಿದ 90 ದಿನದ ಒಳಗಾಗಿ ಆ ಬ್ಯಾಂಕಿನ ಠೇವಣಿದಾರರಿಗೆ 5 ಲಕ್ಷ ರೂಪಾಯಿ ತನಕ ವಿಮೆ ಹಣವನ್ನು ಪಡೆಯುವ ಅವಕಾಶವನ್ನು ಖಾತರಿಪಡಿಸುವ ಅಂಶದ ತಿದ್ದುಪಡಿಯೊಂದಿಗೆ ಡಿಐಸಿಜಿಸಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮಹತ್ವದ ತೀರ್ವನಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮತಿ ನೀಡಿದೆ.
ಠೇವಣಿ ವಿಮಾ ಪಾವತಿ ಖಾತರಿ ನಿಗಮ (ಡಿಜಿಸಿಜಿಸಿ) ಕಾಯ್ದೆ 1961ಕ್ಕೆ ತಿದ್ದುಪಡಿ ತರುವ ಹೊಸ ಮಸೂದೆಯನ್ನು ಕೇಂದ್ರ ಸರ್ಕಾರ ಇದೇ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡಿಸಲು ತೀರ್ವನಿಸಿದೆ. ಮಸೂದೆ ತಿದ್ದುಪಡಿ ವಿಚಾರವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮುಂಗಡ ಪತ್ರ ಮಂಡಿಸುವ ವೇಳೆ ಪ್ರಸ್ತಾಪಿಸಿದ್ದರು.
ಪಂಜಾಬ್ ಆಂಡ್ ಮಹಾರಾಷ್ಟ್ರ ಕೋ-ಆಪರೇಟಿವ್ (ಪಿಎಂಸಿ) ಬ್ಯಾಂಕ್, ಯೆಸ್ ಬ್ಯಾಂಕ್, ಲಕ್ಷ್ಮಿ ವಿಲಾಸ ಬ್ಯಾಂಕ್ ಮುಂತಾದ ಬ್ಯಾಂಕುಗಳು ಸಂಕಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ಆ ಬ್ಯಾಂಕುಗಳಲ್ಲಿ ಠೇವಣಿ ಇರಿಸಿದ್ದವರು ಒತ್ತಡಕ್ಕೆ ಒಳಗಾಗಿದ್ದರು. ಕಳೆದ ವರ್ಷ ಇದನ್ನು ಗಮನದಲ್ಲಿ ಇರಿಸಿಕೊಂಡು ಠೇವಣಿ ಮೇಲಿನ ವಿಮಾ ರಕ್ಷಣೆಯನ್ನು 5 ಪಟ್ಟು ಅಂದರೆ 5 ಲಕ್ಷ ರೂ.ಗೆ ಸರ್ಕಾರ ಏರಿಸಿತ್ತು.
ಮುಖ್ಯಾಂಶಗಳು
2. ದೇಶದ ಎಲ್ಲ ವಾಣಿಜ್ಯ ಬ್ಯಾಂಕ್​ಗಳು, ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದೇಶಿ ಬ್ಯಾಂಕ್​ಗಳು, ಪ್ರಸ್ತುತ ಹಣಕಾಸು ವಹಿವಾಟು ನಿರ್ಬಂಧಕ್ಕೆ ಒಳಗಾಗಿರುವ ಬ್ಯಾಂಕ್​ಗಳಿಗೂ ಈ ನಿರ್ಣಯ ಅನ್ವಯಿಸಲಿದೆ
ಎಲ್​ಎಲ್​ಪಿ ಕಾಯ್ದೆ ತಿದ್ದುಪಡಿಗೆ ಅನುಮತಿ:ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆ (ಎಲ್​ಎಲ್​ಪಿ) ಕಾಯ್ದೆ ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮತಿ ನೀಡಿದೆ. ಕಾನೂನಿನ ಚೌಕಟ್ಟಿನಲ್ಲಿ ವಿವಿಧ ನಿಬಂಧನೆಗಳನ್ನು ನ್ಯಾಯಸಮ್ಮತಗೊಳಿಸುವ ಮತ್ತು ದೇಶದಲ್ಲಿ ವ್ಯಾಪಾರ ವ್ಯವಹಾರಗಳನ್ನು ಸರಳಗೊಳಿಸುವ ಉದ್ದೇಶದಿಂದ ಈ ತಿದ್ದುಪಡಿ ಮಾಡಲು ಪ್ರಸ್ತಾವನೆ ಮುಂದಿಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕಾಯ್ದೆಯಲ್ಲಿರುವ ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲರಾದರೆ ಕ್ರಿಮಿನಲ್ ಕ್ರಮವನ್ನು ಎದುರಿಸಬೇಕೆಂಬ ಅಂಶವನ್ನು ರದ್ದುಗೊಳಿಸಲಾಗುತ್ತದೆ. ಇದರ ಪ್ರಯೋಜನ ದೇಶದ 2.30 ಲಕ್ಷ ಎಲ್​ಎಲ್​ಪಿಗಳಿಗೆ ಲಭ್ಯವಾಗಲಿದೆ. ಇಂತಹ ಮಾನದಂಡಗಳ ಸಂಖ್ಯೆಯನ್ನು 22ಕ್ಕೆ ಸೀಮಿತಗೊಳಿಸಲಾಗುತ್ತಿದ್ದು, ಏಳು ಮಾನದಂಡಗಳ ಉಲ್ಲಂಘನೆಯನ್ನಷ್ಟೇ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಕಾರ್ಪೆರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಸಂಪುಟ ಸಹೋದ್ಯೋಗಿಗಳಿಗೆ ವಿವರಿಸಿದ್ದಾರೆ. ಎಲ್​ಎಲ್​ಪಿ ಕಾಯ್ದೆಯಲ್ಲಿ ಒಟ್ಟು 81 ಸೆಕ್ಷನ್​ಗಳು ಮತ್ತು 4 ಷೆಡ್ಯೂಲ್​ಗಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 4 =
Remember me
