ಹೈದರಾಬಾದ್​:ಇಡೀ ಜಗತ್ತನ್ನೇ ಬಾಧಿಸಿರುವ ಮಹಾಮಾರಿ ಕರೊನಾ ವೈರಸ್​ ಪ್ರಕರಣಗಳು ಇಳಿಮುಖ​ವಾಗುತ್ತಿರುವುದು ಸಂತಸದ ವಿಚಾರ. ಇನ್ನೊಂದೆಡೆ ಲಸಿಕೆಗಳು ಸಹ ಹೊರ ಬರುತ್ತಿದ್ದು, ಜನರಲ್ಲಿನ ಭಯದ ವಾತಾವರಣ ದೂರವಾಗುತ್ತಿದೆ.
ಇಂತಹ ಭರವಸೆಯ ಸಮಯದಲ್ಲಿ ಎಸ್​ಬಿಐ ಬ್ಯಾಂಕ್​ ಉದ್ಯೋಗಿಯೋಬ್ಬರು ಕರೊನಾ ಭಯಕ್ಕೆ ಆತ್ಮಹತ್ಯೆಯಂತಹ ಆತುರದ ನಿರ್ಧಾರ ತೆಗೆದುಕೊಂಡಿರುವುದು ತಪ್ಪು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಇದನ್ನೂ ಓದಿ:ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!
ತುಂಬಾ ಆರೋಗ್ಯವಾಗಿಯೇ ಇದ್ದ ಹೈದರಾಬಾದ್​ ಮೂಲದ ಯುವತಿ ರುಬ್ಬಾ ವಾಣಿ ಕರೊನಾ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾಣಿ ಅವರು ಕರೀಮ್​ನಗರದ ಮಂಕಮ್ಮಟೋಟಾ ಶಾಖೆಯಲ್ಲಿ ಎಸ್​ಬಿಐ ಪ್ರಬೋಷನರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ಟಿಆರ್​ಎಸ್​ ನಾಯಕನ ಮನೆಯನ್ನು ಬಾಡಿಗೆ ಪಡೆದು ನೆಲೆಸಿದ್ದರು.
ಕರೊನಾ ವೈರಸ್​ನಿಂದ ಕಳೆದ ತಿಂಗಳಷ್ಟೇ ವಾಣಿ ಅವರ ತಂದೆ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಅವರ ತಾಯಿಗೂ ಕರೊನಾ ಪಾಸಿಟಿವ್​ ವರದಿಯಾಗಿತ್ತು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ವಾಣಿ ತನಗೂ ಕರೊನಾ ತಗುಲಬಹುದೆಂಬ ಭಯದಿಂದ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.
ಇದನ್ನೂ ಓದಿರಿ:ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್​ ನೋಡಿ ಪತ್ನಿಗೆ ಶಾಕ್!​
ಮನೆಯಲ್ಲಿ ಪತ್ತೆಯಾಗಿರುವ ಡೆತ್​ನೋಟ್​ನಲ್ಲಿ ಕರೊನಾ ಭಯದ ಉಲ್ಲೇಖವಾಗಿದೆ. ತಂದೆಯ ಸಾವಿನ ನೋವೇ ಪ್ರಮುಖ ಕಾರಣ ಎನ್ನಲಾಗಿದೆ. ಆದರೆ, ಕರೊನಾ ಮರೆಯಾಗುತ್ತಿರುವ ಸಮಯದಲ್ಲಿ ಒಳ್ಳೆಯ ಉದ್ಯೋಗವನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡ ವಾಣಿ ನಿರ್ಧಾರ ತಪ್ಪು ಎಂಬುದು ಜನರ ಮಾತಾಗಿದೆ.(ಏಜೆನ್ಸೀಸ್​)
ಬಂಧಿತ ಯುವತಿಯರ ಮೊಬೈಲ್​, ಲ್ಯಾಪ್​ಟಾಪ್​ ತುಂಬಾ ಪೋರ್ನ್​ ವಿಡಿಯೋಗಳು: ಎಫ್​ಎಸ್​ಎಲ್​ ಸ್ಫೋಟಕ ವರದಿ!

ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

ಟ್ರಿಲಿಯನ್ ಆಸೆ ತೋರಿಸಿ ವಂಚಿಸಿದ ಚೈನ್‌ಲಿಂಕ್ ಕಂಪನಿ ಮಾಲೀಕ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + eleven =
Remember me
