ದೆಹಲಿ:ಗ್ರಾಹಕರ ಹಿತದೃಷ್ಟಿಯಿಂದ ಪ್ರತಿ ಹೊಸ ತಿಂಗಳು ಆರಂಭವಾಗುವ ಮುನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಬ್ಯಾಂಕ್​ಗಳ ರಜಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಜೂನ್​ ತಿಂಗಳು ಮುಕ್ತಾಯವಾಗಲು ಕೆಲವು ದಿನಗಳು ಬಾಕಿಯಿವೆ. ಈ ಹಿನ್ನೆಲೆಯಲ್ಲಿ ಆರ್​ಬಿಐ ಜುಲೈ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಜುಲೈ ತಿಂಗಳ ರಜಾ ಪಟ್ಟಿಯ ಪ್ರಕಾರ ಭಾರತದಲ್ಲಿ ಒಟ್ಟು 15 ದಿವಸ ಬ್ಯಾಂಕ್​ಗೆ ರಜೆ ಇರಲಿದ್ದು. ವಾರದ ರಜೆ, ರಾಜ್ಯಗಳ ಪ್ರಾದೇಶಿಕ ರಜೆ ಹಾಗೂ ಆಯಾ ರಾಜ್ಯಗಳ ಹಬ್ಬಗಳಿಗನುಸಾರವಾಗಿ ಆರ್​ಬಿಐ ಬಿಡುಗಡೆ ಮಾಡಿರುವ ಮುಂದಿನ ತಿಂಗಳ ರಜಾ ದಿನಗಳ ಪಟ್ಟಿ ಇಂತಿದೆ:
2023ರ ಜುಲೈ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ:ಜುಲೈ 2: ಭಾನುವಾರಜುಲೈ 5: ಗುರು ಹರಗೋಬಿಂದ್ ಜಿ ಅವರ ಜನ್ಮದಿನ (ಜಮ್ಮು ಮತ್ತು ಶ್ರೀನಗರ)ಜುಲೈ 6: ಮಿಜೋ ಮಹಿಳಾ ಏಕೀಕರಣ ಕಾರ್ಯಕ್ರಮ ದಿನ (ಮಿಜೋರಾಂ)ಜುಲೈ 8: ಎರಡನೇ ಶನಿವಾರಜುಲೈ 9: ಭಾನುವಾರಜುಲೈ 11: ಕೇರ್ ಪೂಜಾ (ತ್ರಿಪುರ)ಜುಲೈ 13: ಭಾನು ಜಯಂತಿ (ಸಿಕ್ಕಿಂ)ಜುಲೈ 16: ಭಾನುವಾರಜುಲೈ 17: ಯು.ತಿರೋತ್​ ಸಿಂಗ್​ ದಿನ (ಮೇಘಾಲಯ)ಜುಲೈ 21: ದ್ರುಕ್ಪಾ ಶೆ ಜಿ (ಸಿಕ್ಕಿಂ)ಜುಲೈ 22: ನಾಲ್ಕನೇ ಶನಿವಾರಜುಲೈ 23: ಭಾನುವಾರಜುಲೈ 28: ಅಶೂರಾ (ಜಮ್ಮು ಮತ್ತು ಶ್ರೀನಗರ)ಜುಲೈ 29: ಮೊಹರಂ (ತ್ರಿಪುರ, ಮಿಜೋರಾಂ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ನವದೆಹಲಿ, ರಾಜಸ್ಥಾನ, ಹಿಮಾಚಲ ಪ್ರದೇಶ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಾದ್ಯಂತ ಹಲವಾರು ನಗರಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)ಜುಲೈ 30: ಭಾನುವಾರ
ಈ ರಜೆಗಳು ಪ್ರಾದೇಶಿಕಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತವೆ ಎಂಬುದನ್ನು ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 17 =
Remember me
