ಚಂಡೀಗಢ:ಏಕಾಂಗಿಯಾಗಿ ವಾಸಿಸುತ್ತಿದ್ದ ಬ್ಯಾಂಕ್ ಮ್ಯಾನೇಜರ್​ ಒಬ್ಬರು ಶವವಾಗಿ ಪತ್ತೆಯಾಗಿದ್ದು, ಅವರ ಮೈಮೇಲೆ ಮಹಿಳೆಯ ಒಳ ಉಡುಪು ಇರುವುದು ಪ್ರಕರಣದ ಕುರಿತಂತೆ ಕುತೂಹಲ ಮೂಡಿಸಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದೆನಿಸಿದರೂ ಪೊಲೀಸರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಪಂಜಾಬ್​ನ ಲುಧಿಯಾನದಲ್ಲಿ ಏಕಾಂಗಿಯಾಗಿ ವಾಸವಿದ್ದ ವಿನೋದ್​ಕುಮಾರ್​ ಶವವಾಗಿ ಪತ್ತೆಯಾಗಿರುವ ಬ್ಯಾಂಕ್ ಮ್ಯಾನೇಜರ್​. ಇಲ್ಲಿನ ಅಮರಾಪುರದಲ್ಲಿ ವಾಸವಿದ್ದ ವಿನೋದ್​ ಕುಮಾರ್​ ಶವ ಶುಕ್ರವಾರ ನೇತಾಡುವ ಸ್ಥಿತಿಯಲ್ಲಿ ಕಂಡುಬಂದಿತ್ತು. ಬೆಳಗ್ಗೆ ಕೆಲಸದವಳು ಮನೆಗೆ ಬಂದು ಬಾಗಿಲು ತಟ್ಟಿದಾಗ ತೆರೆದಿರಲಿಲ್ಲ. ಹೀಗಾಗಿ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ:ಮಾಲೀಕನನ್ನು ಚಿರತೆ ದಾಳಿಯಿಂದ ಕಾಪಾಡಿದ ಹಸು!; ತೋಟದಲ್ಲಿ ದನ ಮೇಯಿಸುತ್ತಿದ್ದಾಗ ನಡೆದ ಘಟನೆ
ಬ್ಯಾಂಕ್ ಮ್ಯಾನೇಜರ್​ ಪತ್ನಿ ಮತ್ತು ಮಕ್ಕಳು ಫಿರೋಜ್​ಪುರದಲ್ಲಿ ನೆಲೆಸಿದ್ದು, ಮ್ಯಾನೇಜರ್ ಮಾತ್ರ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಶವದ ಮೇಲೆ ಮಹಿಳೆಯ ಒಳ ಉಡುಪು ಇದ್ದಿದ್ದಲ್ಲದೆ, ಕೋಣೆಯಲ್ಲೂ ಮಹಿಳೆಯ ಉಡುಪುಗಳು ಪತ್ತೆಯಾಗಿವೆ.
ಇದನ್ನೂ ಓದಿ:ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!
ಬ್ಯಾಂಕ್ ಮ್ಯಾನೇಜರ್ ತನ್ನ ಪತ್ನಿ ಮಕ್ಕಳನ್ನು ನೋಡಲು ಫಿರೋಜ್​ಪುರಕ್ಕೆ ಹೋಗಿದ್ದು, ಗುರುವಾರ ರಾತ್ರಿ ಲುಧಿಯಾನಕ್ಕೆ ಮರಳಿದ್ದರು. ಆದರೆ ಶುಕ್ರವಾರ ಬೆಳಗ್ಗೆ ಅವರ ಶವ ನೇತಾಡುತ್ತಿತ್ತು. ಮ್ಯಾನೇಜರ್​ ಫೋನ್​ ಸೈಬರ್​ ಸೆಲ್​ಗೆ ನೀಡಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದ್ದು. ಸಾಮಾನ್ಯವಾಗಿ ಆತ್ಮಹತ್ಯೆ ಈ ರೀತಿ ನಡೆಯುವುದು ಅಸಹಜ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಕುತೂಹಲ ಕೆರಳಿಸಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಂಗತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಕಾಲೇಜು ಬಸ್ ಚಾಲಕನಿಂದಲೇ ವಿದ್ಯಾರ್ಥಿನಿಯ ಅಪಹರಣ?; ಮಗಳನ್ನು ಹುಡುಕಿಕೊಡಿ ಎಂದು ತಂದೆಯಿಂದ ದೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
