ಬೆಂಗಳೂರು:ಕರೊನಾ ಹಾವಳಿ ಆರಂಭಗೊಂಡ ಮೇಲೆ ಜನರ ಜೀವನಶೈಲಿಯಲ್ಲಿ ಮಾತ್ರವಲ್ಲ, ವಿವಿಧ ಸಂಸ್ಥೆಗಳ ಕಾರ್ಯವೈಖರಿಯಲ್ಲೂ ಭಾರಿ ಬದಲಾವಣೆಗಳು ಆಗಿವೆ. ಅಂಥ ಒಂದು ಬದಲಾವಣೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಆಗುತ್ತಿದ್ದು, ಎಲ್ಲವೂ ಅಂದುಕೊಂಡಂತೆಯೇ ನಡೆದರೆ ದೇಶದ ಪ್ರಮುಖ ಬ್ಯಾಂಕ್​ವೊಂದರ ಉದ್ಯೋಗಿಗಳು ಪರ್ಮನೆಂಟ್ ಆಗಿ ಮನೆಯಲ್ಲೇ ಉಳಿಯಲಿದ್ದಾರೆ.
ಹೌದು.. ಬ್ಯಾಂಕ್​ ಆಫ್​ ಬರೋಡ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದ್ದು, ಆ ಕುರಿತ ಸಾಧಕ-ಬಾಧಕಗಳನ್ನು ಚರ್ಚೆ ಮಾಡಲಾರಂಭಿಸಿದೆ. ಸಾಧಕಗಳೇ ಹೆಚ್ಚು ಹಾಗೂ ಸೂಕ್ತ ಎಂಬುದು ಖಚಿತವಾದಲ್ಲಿ ಬ್ಯಾಂಕ್ ಆಫ್ ಬರೋಡ ತಾನಂದುಕೊಂಡಂಥ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ. ಅರ್ಥಾತ್, ತನ್ನ ಉದ್ಯೋಗಿಗಳಲ್ಲಿ ಒಂದು ವಿಭಾಗದವರನ್ನು ಶಾಶ್ವತವಾಗಿ ವರ್ಕ್​ ಫ್ರಮ್​ ಹೋಮ್​ಗೆ ಸೀಮಿತಗೊಳಿಸಲಿದೆ.
ಇದನ್ನೂ ಓದಿ:ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…
ಬ್ಯಾಂಕ್​ ಆಫ್ ಬರೋಡ ಮ್ಯಾನೇಜ್​ಮೆಂಟ್​ ಕನ್ಸಲ್ಟೆನ್ಸಿವೊಂದನ್ನು ನೇಮಿಸಿಕೊಂಡಿದೆ. ಮೆಕ್​ಕಿನ್ಸೆ ಆ್ಯಂಡ್ ಕೊ. ಹೆಸರಿನ ಮ್ಯಾನೇಜ್​ಮೆಂಟ್ ಕನ್ಸಲ್ಟೆನ್ಸಿ ಜತೆ ಒಪ್ಪಂದ ಮಾಡಿಕೊಂಡಿರುವ ಬ್ಯಾಂಕ್​ ಆಫ್ ಬರೋಡ ಕರೊನೋತ್ತರವಾಗಿ ಬ್ಯಾಂಕ್ ನಿರ್ವಹಣೆ ಕುರಿತು ಯೋಜನೆಗಳನ್ನು ರೂಪಿಸುತ್ತಿದೆ. ಅದರಲ್ಲಿ ವರ್ಕ್​ ಫ್ರಂ ಹೋಮ್​ ಕೂಡ ಒಂದು.
ನಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿಸಿದರೆ ಹೇಗೆ? ಅಥವಾ ಅವರನ್ನು ವಾರದಲ್ಲಿ ಒಂದೆರಡು ದಿನಗಳಲ್ಲಿ ಮಾತ್ರ ಕಚೇರಿಗೆ ಬರುವಂತೆ ಮಾಡಿದರೆ ಅದನ್ನು ಹೇಗೆ ಅನುಷ್ಠಾನಗೊಳಿಸುವುದು? ಉದ್ಯೋಗಿಗಳಿಂದ ಸುಲಭವಾಗಿ ಹೆಚ್ಚಿನ ಕೆಲಸ ಪಡೆಯುವುದು ಹೇಗೆ ಮತ್ತು ಪೂರ್ಣಾವಧಿಯ ಉದ್ಯೋಗಿಗಳಲ್ಲದೆ ಕೆಲವರನ್ನು ನೇಮಿಸಿಕೊಂಡು ಅವರಿಂದ ತಮಗೆ ಬೇಕಾದ ಕೌಶಲಗಳನ್ನು ಪಡೆಯುವುದು ಹೇಗೆ ಎಂಬೆಲ್ಲದರ ಕುರಿತು ಚಿಂತನೆಗಳು ನಡೆಯುತ್ತಿವೆ ಎಂದು ಬ್ಯಾಂಕ್​ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಛಡ್ಡ ಹೇಳಿಕೊಂಡಿದ್ದಾರೆ. ಒಂದು ವೇಳೆ ಬ್ಯಾಂಕ್​ ವರ್ಕ್​ ಫ್ರಂ ಹೋಮ್​ಗೆ ಮುಂದಾದರೆ ಕಾಯಂ ಆಗಿ ಮನೆಯಿಂದಲೇ ಕೆಲಸ ತೆಗೆದುಕೊಳ್ಳುವ ಪ್ರಥಮ ಬ್ಯಾಂಕ್​ ಆಗಿ ಬ್ಯಾಂಕ್​ ಆಫ್ ಬರೋಡ ಹೊರಹೊಮ್ಮಲಿದೆ ಎನ್ನಲಾಗಿದೆ. (ಏಜೆನ್ಸೀಸ್)
ಹೆಂಡತಿ-ಮಗನಿಗೆ ಗುಂಡಿಕ್ಕಿ, ಆತ್ಮಹತ್ಯೆ ಮಾಡಿಕೊಂಡ ಗಂಡ! ಸುಖ ಸಂಸಾರ ಅಂತ್ಯವಾಗಿದ್ದಕ್ಕೆ ಕಾರಣವೇನು?

ಹಣ ಕೊಡದಿದ್ದರೆ ವಿಡಿಯೋ ವೈರಲ್, ಆನಂದ್ ಗುರೂಜಿಗೆ ಬ್ಲ್ಯಾಕ್‌ಮೇಲ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 9 =
Remember me
