ಭೋಪಾಲ್‌:10 ವರ್ಷದ ಬಾಲಕನೊಬ್ಬ ಬ್ಯಾಂಕ್‌ ಒಂದಕ್ಕೆ ನುಗ್ಗಿ 20 ಸೆಕೆಂಡುಗಳಲ್ಲಿಯೇ 10 ಲಕ್ಷ ರೂಪಾಯಿ ಲಪಟಾಯಿಸಿರುವ ಘಟನೆ ಮಧ್ಯ ಪ್ರದೇಶದ ಭೋಪಾಲ‌ನಲ್ಲಿ ನಡೆದಿದೆ.
ಬ್ಯಾಂಕ್‌ ಬೆಳಗಿನ ಜಾಗ ಕೆಲಸ ನಿರ್ವಹಿಸುತ್ತಿದ್ದ ಸಮಯದಲ್ಲಿ 10 ವರ್ಷದ ಬಾಲಕನೊಬ್ಬ ಬ್ಯಾಂಕ್‌ ಒಳಕ್ಕೆ ಬಂದಿದ್ದಾನೆ. ಬಿಜಿ ಇರುವ ಎಲ್ಲರೂ ಆತನನ್ನು ಅಷ್ಟಾಗಿ ಗಮನಿಸಲಿಲ್ಲ. ಹಿರಿಯರ ಜತೆ ಬಂದಿರಬಹುದು ಎಂದು ಆತನ ಬಳಿ ಯಾರೂ ಗಮನವನ್ನೂ ಕೊಟ್ಟಿಲ್ಲ.
ಎಲ್ಲರೂ ಬಿಜಿಯಾಗಿರುವುದನ್ನು ನೋಡಿರುವ ಬಾಲಕ ಮೆಲ್ಲಗೇ ಕ್ಯಾಷಿಯರ್‌ನ ಕ್ಯಾಬಿನ್‌ಗೆ ಹೋಗಿದ್ದಾನೆ. ಕೆಳಗಡೆಯಿಂದ ತೂರಿಕೊಂಡಿರುವ ಆತ ಅದ್ಯಾವ ಮಾಯೆಯಿಂದಲೋ ಅಲ್ಲಿರುವ ಹಣವನ್ನು ತನ್ನ ಚೀಲಕ್ಕೆ ಇಳಿಸಿಕೊಂಡಿದ್ದಾನೆ. ಕ್ಯಾಷಿಯರ್‌ ಜಾಗದಲ್ಲಿ ಯಾರೂ ಇಲ್ಲದ್ದರಿಂದ ತನ್ನ ಚಿಕ್ಕ ದೇಹವನ್ನೇ ಬಂಡವಾಳ ಮಾಡಿಕೊಂಡು ನೋಟಿನ ಕಂತೆಕಂತೆಗಳನ್ನು ಚೀಲದೊಳಕ್ಕೆ ತುಂಬಿಸಿಕೊಂಡು, ಅದೇ ಮಾಯೆಯಿಂದ ಹೊರಕ್ಕೆ ಹೋಗಿದ್ದಾನೆ!
ಇದನ್ನೂ ಓದಿ:ಕ್ವಾರ್ಟರ್‌, ಲಾರ್ಜ್‌, ನೈಂಟಿಗೆ ‘ಬ್ರಹ್ಮ’ ಏಕೆ? ಶುರುವಾಗಿದೆ ಪ್ರತಿಭಟನೆ
ಇಷ್ಟಾದರೂ ಯಾರೂ ನೋಡಲೇ ಇಲ್ಲ. ಹೀಗೆ ಅಲ್ಲಿಂದ ಬರೋಬ್ಬರಿ 10 ಲಕ್ಷ ರೂಪಾಯಿ ಎಗರಿಸಿದ್ದಾನೆ. ಅದೂ 20 ಸೆಕೆಂಡ್‌ಗಿಂತಲೂ ಕಡಿಮೆ ಅವಧಿಯಲ್ಲಿ. ಹೊರಗೆ ಹೋಗುವ ಸಮಯದಲ್ಲಿ ಕ್ಯಾಷಿಯರ್‌ ಗಮನಿಸಿ ಜೋರಾಗಿ ಕೂಗಿಕೊಂಡಿದ್ದಾರೆ. ಅದಾಗಲೇ ಬಾಲಕ ಓಡಿಹೋಗಿದ್ದಾನೆ.
ಸಿಸಿಟಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಮೊದಲೇ ಒಬ್ಬಾತ ಒಳಗಡೆ ಬಂದಿದ್ದಾನೆ. ಕ್ಯಾಷಿಯರ್‌ ಜಾಗ ಬಿಟ್ಟು ಹೋಗುವುದನ್ನೇ ಕಾಯುತ್ತಿದ್ದ ಆತ, ಹೊರಗಡೆ ನಿಂತಿದ್ದ ಬಾಲಕನಿಗೆ ಸನ್ನೆ ಮಾಡಿ ಕರೆದಿದ್ದಾನೆ. ಬಾಲಕ ಕೆಲಸ ಮುಗಿಸಿ ಹೋಗಿದ್ದಾನೆ.
ಈ ಬಗ್ಗೆ ಹೆಚ್ಚಿನ ತನಿಖೆಗೆ ಮುಂದಾಗಿರುವ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಇಂತಹದೊಂದು ಗ್ಯಾಂಗ್‌ ಸಕ್ರಿಯವಾಗಿದ್ದು, ಮಕ್ಕಳನ್ನು ಬಳಸಿ ಕಳ್ಳತನ ಮಾಡಲಾಗುತ್ತಿದೆ. ಈ ಗ್ಯಾಂಗ್‌ನಲ್ಲಿ ಒಂದು ಬಾಲಕಿ ಕೂಡ ಇದ್ದಾಳೆ ಎಂದು ತಿಳಿದುಬಂದಿದೆ.
ಬಿಜೆಪಿ ಮುಖಂಡನ ಕೊಲೆ ಬೆನ್ನಲ್ಲೇ ಮತ್ತೊಬ್ಬ ಮುಖಂಡನ ಕಿಡ್ನಾಪ್‌!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 7 =
Remember me
