ಬೆಂಗಳೂರು:ಭಾರತದ ಪ್ರತಿಷ್ಠಿತ ಕೆನರಾ ಬ್ಯಾಂಕ್​ಗೆ 2022ನೇ ಸಾಲಿನ ‘ಬ್ಯಾಂಕರ್ಸ್ ಬ್ಯಾಂಕ್ ಆಫ್ ದಿ ಇಯರ್ ಪ್ರಶಸ್ತಿ’ ಒಲಿದಿದೆ.
ಲಂಡನ್​ನಲ್ಲಿ ನ.29ರಿಂದ ಡಿ.1ರ ವರೆಗೆ ಫೈನಾನ್ಷಿಯಲ್ ಟೈಮ್ಸ್ ಆಯೋಜಿಸಿದ್ದ ಗ್ಲೋಬಲ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಬ್ಯಾಂಕರ್ಸ್ ಬ್ಯಾಂಕ್ ಆಫ್ ದಿ ಇಯರ್ ಅವಾರ್ಡ್​ಗೆ ‘ಭಾರತದ ಕೆನರಾ ಬ್ಯಾಂಕ್​’ ಆಯ್ಕೆಯಾಯಿತು. 2022ರ ಡಿಸೆಂಬರ್ 1ರಂದು ಲಂಡನ್​ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು. ಕೆನರಾ ಬ್ಯಾಂಕ್​ನ ಎಂಡಿ, ಸಿಇಒ ಎಲ್.ವಿ. ಪ್ರಭಾಕರ್ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
12 ತಿಂಗಳಲ್ಲಿ ಆಯಾ ಭೌಗೋಳಿಕತೆಯಲ್ಲಿ ಉತ್ಪನ್ನ ಮತ್ತು ಸೇವೆಯಲ್ಲಿ ಬ್ಯಾಂಕ್​ಗಳ ಸಾಮರ್ಥ್ಯವನ್ನ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಆದಾಯ, ತಂತ್ರಗಾರಿಕೆ, ನಾವೀನ್ಯತೆ, ತಂತ್ರಜ್ಞಾನ, ಉತ್ಪನ್ನ ಮತ್ತು ಸೇವೆ… ಈ ಎಲ್ಲ ಅಂಶದಲ್ಲೂ ಕೆನರಾ ಬ್ಯಾಂಕ್​ ಅಭೂತಪೂರ್ವ ಸಾಧನೆ ಮಾಡಿದ್ದು, ಪ್ರಶಸ್ತಿ ಒಲಿದಿದೆ. 2022ನೇ ಸಾಲಿನಲ್ಲಿ ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಸಾರಿದೆ.
ದಿ ಬ್ಯಾಂಕ್ ಆಫ್ ದಿ ಇಯರ್ ಪ್ರಶಸ್ತಿಗಳು ಬ್ಯಾಂಕಿಂಗ್ ಕ್ಷೇತ್ರಕ್ಕೆ ಆಸ್ಕರ್ ಪ್ರಶಸ್ತಿಗಳಿದ್ದಂತೆ. ಕೆನರಾ ಬ್ಯಾಂಕ್ ಭಾರತದ ಅತ್ಯುತ್ತಮ ಬ್ಯಾಂಕ್ ಎಂದು ಗುರುತಿಸಲ್ಪಟ್ಟಿದೆ. ಈ ಪ್ರಶಸ್ತಿಯನ್ನು ಕೆನರಾ ಬ್ಯಾಂಕ್ ತನ್ನ ಎಲ್ಲ ಗ್ರಾಹಕರು, ಹೂಡಿಕೆದಾರರು, ಸಿಬ್ಬಂದಿ ಮತ್ತು ಷೇರುದಾರರಿಗೆ ಅರ್ಪಿಸುವುದಾಗಿ ತಿಳಿಸಿದೆ.
‘ಬ್ಯಾಂಕರ್ಸ್’ ನಿಯತಕಾಲಿಕೆಯು ವಿಶ್ವದ 180ಕ್ಕೂ ಹೆಚ್ಚು ದೇಶಗಳ ಪ್ರಮುಖ ಬ್ಯಾಂಕಿಂಗ್ ಮತ್ತು ಹಣಕಾಸು ಸಂಪನ್ಮೂಲವಾಗಿದೆ. ಜಗತ್ತಿನಾದ್ಯಂತ ಎಲ್ಲ ದೇಶಗಳ ಬ್ಯಾಂಕರ್ಸ್ ನಿಯತಕಾಲಿಕವು ಫೈನಾನ್ಷಿಯಲ್ ಟೈಮ್ಸ್ (FT) ಗ್ರೂಪ್​ಗೆ ಸೇರಿದೆ. ಬ್ರಿಟಿಷ್ ಮೂಲದ ಜಾಗತಿಕ ಹಣಕಾಸು ದಿನಪತ್ರಿಕೆಯಾದ ಫೈನಾನ್ಷಿಯಲ್ ಟೈಮ್ಸ್ 1888ರಲ್ಲಿ ಆರಂಭವಾಯಿತು. ಇದು ಹಣಕಾಸು ಉದ್ಯಮದ ನಂಬರ್​ 1 ದಿನಪತ್ರಿಕೆ.
ರಾಮ-ಕೃಷ್ಣ ಇತಿಹಾಸ ಪುರುಷರಲ್ಲ! ಮತ್ತೊಂದು ವಿವಾದ ಸೃಷ್ಟಿಸಿದ ನಿವೃತ್ತ ನ್ಯಾ. ವಸಂತ ಮುಳಸಾವಳಗಿ

ಯುವಕನಿಗೆ ಮದ್ವೆ ಆಸೆ ಹುಟ್ಟಿಸಿ ಹಾಸನದ ಮಹಿಳೆ ಹೀಗಾ ಮಾಡೋದು? ನನ್ನಾಕೆ ಡಿಸಿ… ಅಂತ ಖುಷಿಯಲ್ಲಿದ್ದವನಿಗೆ ಭಾರೀ ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 4 =
Remember me
