ನವದೆಹಲಿ:ಹೆಚ್ಚುತ್ತಿರುವ ಬ್ಯಾಂಕಿಂಗ್​ ವಂಚನೆಗಳನ್ನು ತಡೆಯಲು ಹಾಗೂ ಗ್ರಾಹಕರಿಗೆ ಅಧಿಕ ಸುರಕ್ಷತೆ ಒದಗಿಸುವ ದೃಷ್ಟಿಯಿಂದ ವಂಚನೆ ರಿಜಿಸ್ಟ್ರಿ ರಚಿಸಲು ಆರ್​ಬಿಐ ಚಿಂತನೆ ನಡೆಸಿದೆ. ವಂಚಕ ವೆಬ್​ಸೈಟ್​ಗಳು, ೋನ್​ಗಳು ಮತ್ತು ಡಿಜಿಟಲ್​ ವಂಚನೆ ನಡೆಸಲು ಬಳಸಲಾಗುವ ವಿವಿಧ ವಿಧಾನಗಳ ಡೇಟಾಬೇಸ್​ ಸೃಷ್ಟಿಸುವುದು ಇದರ ಉದ್ದೇಶವಾಗಿದೆ.
ವಂಚಕ ವೆಬ್​ಸೈಟ್​ ಅಥವಾ ೋನ್​ ಸಂಖ್ಯೆಗಳನ್ನು ಕಪ್ಪು ಪಟ್ಟಿಗೆ ಸೇರಿಸುವುದರಿಂದ ಅವುಗಳು ವಂಚನೆಯನ್ನು ಪುನರಾವರ್ತಿಸಲು ಸಾಧ್ಯವಾಗುವುದಿಲ್ಲ ಎಂದು ಆರ್​ಬಿಐ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್​ ಕುಮಾರ್​ ಶರ್ಮಾ ತಿಳಿಸಿದ್ದಾರೆ. ್ರಾಡ್​ ರಿಜಿಸ್ಟ್ರಿ ರಚಿಸಲು ಕಾಲಮಿತಿಯನ್ನು ನಿಗದಿಪಡಿಸಿಲ್ಲ. ಆರ್​ಬಿಐನ ಪಾವತಿ ಮತ್ತು ಇತ್ಯರ್ಥ ಹಾಗೂ ಮೇಲುಸ್ತುವಾರಿ ಇಲಾಖೆಗಳ ಸಹಿತ ಸಂಬಂಧಪಟ್ಟ ವಿವಿಧ ವಿಭಾಗಗಳೊಂದಿಗೆ ಸದ್ಯಕ್ಕೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಶರ್ಮಾ ಸ್ಪಷ್ಟಪಡಿಸಿದ್ದಾರೆ.
ನಿಗಾಕ್ಕೆ ಅನುಕೂಲವಾಗಲು ಪಾವತಿ ವ್ಯವಸ್ಥೆಯ ಭಾಗಿದಾರರು ಈ ರಿಜಿಸ್ಟ್ರಿಗೆ ಪ್ರವೇಶ ಪಡೆಯಬಹುದಾಗಿರುತ್ತದೆ.
ಕ್ರೆಡಿಟ್​ ಇನ್​ಮೇರ್ಶನ್​ ಕಂಪನಿಯ (ಸಿಐಸಿ) ಗ್ರಾಹಕರು 2021ರ ರಿಸರ್ವ್​ ಬ್ಯಾಂಕ್​ -ಸಮಗ್ರ ಒಂಬುಡ್ಸ್​ಮನ್​ ಯೋಜನೆ (ಆರ್​ಬಿ-ಐಒಎಸ್​) ಅಡಿ ಬರಲಿದ್ದಾರೆ ಎಂದೂ ಶರ್ಮಾ ವಿವರಿಸಿದ್ದಾರೆ.
ಬ್ಯಾಂಕಿಂಗ್​, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಡಿಜಿಟಲ್​ ಪಾವತಿ ವ್ಯವಸ್ಥೆಗಳ ಸೇವಾ ನ್ಯೂನತೆ ವಿಚಾರಿಸಲು ಪ್ರಧಾನಿ ನರೇಂದ್ರ ಮೋದಿ 2021ರಲ್ಲಿ ಸಮಗ್ರ ಗ್ರಾಹಕ ದೂರು ಪರಿಹಾರ ವ್ಯವಸ್ಥೆಗೆ ಚಾಲನೆ ನೀಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 1 =
Remember me
