ನವದೆಹಲಿ:ಆರ್​ಬಿಐ ರೆಪೋ ದರ 35 ಮೂಲಾಂಶದಷ್ಟು ಏರಿಸಿರುವ ಹಿನ್ನೆಲೆಯಲ್ಲಿ ಹಲವು ಬ್ಯಾಂಕ್​ಗಳು ಗೃಹ ಸಾಲಗಳ ಬಡ್ಡಿ ದರಗಳನ್ನು ಏರಿಸಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್​ಬಿ) ಮತ್ತು ಕೆನರಾ ಬ್ಯಾಂಕ್ ಬಡ್ಡಿ ದರ ಏರಿಸಿವೆ. ಪಿಎನ್​ಬಿ ಗೃಹ ಸಾಲ ಬಡ್ಡಿ ದರಗಳನ್ನು 35 ಬಿಪಿಎಸ್​ನಷ್ಟು ಹೆಚ್ಚು ಮಾಡಿದೆ. ಆರ್​ಎಲ್​ಎಲ್​ಆರ್​ಅನ್ನು ಹಾಲಿ ಶೇಕಡ 8.40ರಿಂದ ಶೇ. 8.75ಕ್ಕೆ ಬದಲಾಯಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಡಿಸೆಂಬರ್ 8ರಿಂದಲೇ ಇದು ಅನ್ವಯಿಸುತ್ತದೆೆ. ಮನೆ ಸಾಲದ ಬಡ್ಡಿ ಶೇ. 9 ಆಗಲಿದೆ. ಇದಕ್ಕೂ ಮುನ್ನ ಅದು ಶೇ. 8.65 ಆಗಿತ್ತು. ಬಡ್ಡಿ ಪರಿಷ್ಕರಣೆಯಿಂದಾಗಿ ವಾರ್ಷಿಕ ಬಡ್ಡಿ ದರ ಶೇಕಡ 8.55ರಿಂದ ಶೇಕಡ 10.80 ವರೆಗೆ ಆಗಲಿದೆ ಎಂದು ಕೆನರಾ ಬ್ಯಾಂಕ್ ತಿಳಿಸಿದೆ. ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್​ಸೀಸ್ ಬ್ಯಾಂಕ್ ಸಹಿತ ಹಲವು ಬ್ಯಾಂಕ್​ಗಳು ಈಗಾಗಲೇ ಬಡ್ಡಿ ದರ ಏರಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
