ನವದೆಹಲಿ:ಮುಂಬರುವ ಜುಲೈ ತಿಂಗಳಲ್ಲಿ ಬ್ಯಾಂಕ್​ ಕೆಲಸಗಳಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳಿ, ಏಕೆಂದರೆ ಬರುವ ತಿಂಗಳು ಬಹುತೇಕ ದಿನ ಬ್ಯಾಂಕ್​ಗಳಿಗೆ ರಜೆ ಇರಲಿದೆ.
ಬ್ಯಾಂಕುಗಳಿಗೆ ಆಯಾ ಪ್ರದೇಶಕ್ಕನುಗುಣವಾಗಿ ರಜೆ ನೀಡಲಾಗುತ್ತಿದೆ. ಒಂದು ರಾಜ್ಯಕ್ಕಿಂತ ಮತ್ತೊಂದು ರಾಜ್ಯದಲ್ಲಿ ಬ್ಯಾಂಕ್​ಗಳ ರಜೆಯಲ್ಲಿ ವ್ಯತ್ಯಾಸ ಕಾಣಬಹುದು. ಭಾರತೀಯ ರಿಸರ್ವ್​ ಬ್ಯಾಂಕ್​ ಮೂರು ವಿಭಾಗಗಳಲ್ಲಿ ಬ್ಯಾಂಕ್​ಗಳಿಗೆ ರಜೆ ನೀಡುತ್ತದೆ. ಹಾಗಾಗಿ ಬರುವ ತಿಂಗಳು ಬರೋಬ್ಬರಿ 14 ದಿನಗಳು ರಜೆ ಇರಲಿದೆ.
ಜುಲೈ ತಿಂಗಳಲ್ಲೇ 5 ಭಾನುವಾರ, ಎರಡನೇ ಹಾಗೂ ಕೊನೇ ಶನಿವಾರ ಮತ್ತು ಜುಲೈ 11 ರಂದು ಈದ್​​ ಇರುವುದರಿಂದ ದೇಶಾದ್ಯಂತ ಬ್ಯಾಂಕ್​ಗಳಿಗೆ ಒಟ್ಟು 8 ದಿನ ರಜೆ ಇರಲಿದೆ. ಈ ನಡುವೆ ಉತ್ತರ ಭಾರತದಲ್ಲಿ ಅಗರ್ತಲ, ಶಿಲ್ಲಾಂಗ್​ ಗ್ಯಾಂಗ್​ಟಕ್​ ಸೇರಿದಂತೆ ಹಲವು ನಗರಗಳಲ್ಲಿ ಇನ್ನೂ ಒಂದು ವಾರಗಳ ಕಾಲ ಪ್ರತ್ಯೇಕ ರಜೆಗಳು ಸೇರಿವೆ.
ಸದ್ಯಕ್ಕೆ ದೇಶಾದ್ಯಂತ ಒಟ್ಟು 8 ದಿನ ಬ್ಯಾಂಕ್​ಗಳಿಗೆ ರಜೆ ಇದ್ದು, ಏನೇ ಕೆಲಸವಿದ್ದರೂ ರಜೆಗೂ ಮುನ್ನ ಮುಗಿಸಿಕೊಳ್ಳುವುದು ಒಳ್ಳೆಯದು.(ಏಜೆನ್ಸೀಸ್​)
VIDEO: ಚಲಿಸುತ್ತಿರುವ ರೈಲಿನಿಂದ ಬಿದ್ದ ಯುವಕ, ಬೆಚ್ಚಿಬೀಳಿಸುವ ವಿಡಿಯೋ ಮೊಬೈಲ್​​ನಲ್ಲಿ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 17 =
Remember me
