ನವದೆಹಲಿ:ಎಲೆಕ್ಟ್ರಾನಿಕ್​ ಅಥವಾ ಡಿಜಿಟಲ್​ ಮಾಧ್ಯಮದಲ್ಲಿ ಪಾವತಿಗೆ ಬ್ಯಾಂಕುಗಳು ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ನೇರ ತೆರಿಗೆಯ ಕೇಂದ್ರೀಯ ಮಂಡಳಿ ( ಸಿಬಿಡಿಟಿ- ಸೆಂಟ್ರಲ್​ ಬೋರ್ಡ್​ ಫಾರ್​ ಡೈರೆಕ್ಟ್​​ ಟ್ಯಾಕ್ಸ್​ ) ಸ್ಪಷ್ಟಪಡಿಸಿದೆ.
ಪೇಮೆಂಟ್​ ಆ್ಯಂಡ್​ ಸೆಟಲ್​ಮೆಂಟ್​ ಸಿಸ್ಟಮ್ಸ್​ ಆ್ಯಕ್ಟ್​ 2007ರ ಅನ್ವಯ 2020ರ ಜನವರಿ 1ರ ನಂತರ ಡಿಜಿಟಲ್​ ಪಾವತಿಗಳ ಮೇಲೆ ಯಾವುದೇ ಶುಲ್ಕ ವಿಧಿಸಲು ಅವಕಾಶವಿಲ್ಲ ಎಂದು ಸಿಬಿಡಿಟಿ ಹೇಳಿದೆ.
ಇದನ್ನೂ ಓದಿ;ಎನ್​ಪಿಆರ್​, ಜನಗಣತಿ ನಡೆಯುತ್ತಾ? ಕರೊನಾ ಸಂಕಷ್ಟ ಮುಗಿದ ಬಳಿಕ ಶುರುವಾಗುತ್ತಾ ಲೆಕ್ಕಾಚಾರ?
ಡಿಜಿಟಲ್​ ಪಾವತಿಗಳಾದ ರೂಪೇ ಆಧಾರಿತ ಡೆಬಿಟ್​ ಕಾರ್ಡ್​, ಯುನಿಫೈಡ್​ ಪೇಮೆಂಟ್​ ಇಂಟರ್​ಫೇಸ್​(ಯುಪಿಐ), ಕ್ಯೂಆರ್​ ಕೋಡ್​, ಭೀಮ್​ ಯುಪಿಐ, ಕ್ಯೂಆರ್​ ಕೋಡ್​ ಮೊದಲಾದವುಗಳ ಮೂಲಕ ಮಾಡಲಾದ ಯಾವುದೇ ಪಾವತಿ ಅಥವಾ ಗ್ರಾಹಕರು ಪಡೆದ ಹಣದ ಮೇಲೆ ಶುಲ್ಕ ಪಡೆಯುವಂತಿಲ್ಲ ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಆದರೆ, ಕೆಲ ಬ್ಯಾಂಕುಗಳು ಅಥವಾ ಸರ್ವೀಸ್​ ಪ್ರೊವೈಡರ್​ಗಳು ಕೆಲ ಮಟ್ಟಿಗಿನ ವಹಿವಾಟಿನ ಮೇಲಷ್ಟೇ ವಿನಾಯ್ತಿ ನೀಡಿ ನಂತರ ಶುಲ್ಕ ವಿಧಿಸುತ್ತಿವೆ. ಇದು ಕೂಡ ಆದಾಯ ತೆರಿಗೆ ಕಾಯ್ದೆ ಅನ್ವಯವೂ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸಿಬಿಡಿಟಿ ಹೇಳಿದೆ.
ಇದನ್ನೂ ಓದಿ;ಗಾಳಿಯಲ್ಲಿರುವ ಕರೊನಾ ವೈರಸ್​ ಪತ್ತೆಹಚ್ಚುವ ಸಾಧನ ಆವಿಷ್ಕಾರ; 10-15 ಸೆಕೆಂಡ್​ಗಳಲ್ಲಿ ಫಲಿತಾಂಶ
ಈ ಕಾರಣಕ್ಕಾಗಿ ಜನವರಿ ನಂತರ ಇಂಥ ವಹಿವಾಟುಗಳ ಮೇಲೆ ಶುಲ್ಕ ವಿಧಿಸಿದ್ದೇ ಆದಲ್ಲಿ ಅದನ್ನು ಮರಳಿಸುವ ಸಲಹೆ ನೀಡಲಾಗಿದೆ ಎಂದು ಮಂಡಳಿ ತಿಳಿಸಿದೆ.ಜುಲೈನಲ್ಲಿ 1.49 ಶತಕೋಟಿ ವಹಿವಾಟುಗಳನ್ನು ಡಿಜಿಟಲ್​ ಮಾಧ್ಯಮದ ಮೂಲಕ ನಡೆಸಲಾಗಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ ಮಾಹಿತಿ ಬಿಡುಗಡೆ ಮಾಡಿದೆ. ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಡಿಜಿಟಲ್​ ಪಾವತಿ ವಿಧಾನ ಅನಿವಾರ್ಯವೂ ಆಗಿದೆ.
9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 15 =
Remember me
