ದೆಹಲಿ:ಪ್ರತಿ ಹೊಸ ತಿಂಗಳು ಆರಂಭವಾಗುವ ಮುನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕ್​ಗಳ ರಜಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಮೇ ತಿಂಗಳು ಮುಕ್ತಾಯವಾಗಲು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದ್ದು, ಆರ್​ಬಿಐ ಜೂನ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಕೆರಾಡಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಮಾರ್ಕೆಟಿಂಗ್ ಕ್ಷೇತ್ರಕ್ಕೂ ಕಾಲಿಟ್ಟ ರಿಷಬ್ ಶೆಟ್ಟಿ!
ಜೂನ್​ ತಿಂಗಳ ರಜಾ ಪಟ್ಟಿಯ ಪ್ರಕಾರ ಭಾರತದಲ್ಲಿ ಒಟ್ಟು 12 ದಿನಗಳು ಬ್ಯಾಂಕ್​ಗಳು ರಜೆ ಇರಲಿವೆ. ವಾರದ ರಜೆ, ರಾಜ್ಯಗಳ ಪ್ರಾದೇಶಿಕ ರಜೆ ಹಾಗೂ ಹಬ್ಬಗಳಿಗನುಗುಣವಾಗಿ ಆರ್​ಬಿಐ ಬಿಡುಗಡೆ ಮಾಡಿರುವ ಮುಂದಿನ ತಿಂಗಳ ರಜಾ ದಿನಗಳ ಪಟ್ಟಿ ಇಂತಿದೆ:
ಜೂನ್ 4: ಮೊದಲನೇ ಭಾನುವಾರಜೂನ್ 10: ಎರಡನೇ ಶನಿವಾರಜೂನ್ 11: ಎರಡನೇ ಭಾನುವಾರ.ಜೂನ್ 15: YMA ದಿನ/ರಾಜ ಸಂಕ್ರಾಂತಿಯಂದು ಐಜ್ವಾಲ್ ಮತ್ತು ಭುವನೇಶ್ವರ್‌ನಲ್ಲಿರುವ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.ಜೂನ್ 18: ಮೂರನೇ ಭಾನುವಾರಜೂನ್ 20: ರಥ ಯಾತ್ರಾ ಕಾರಣದಿಂದ ಭುವನೇಶ್ವರ ಮತ್ತು ಇಂಫಾಲ್‌ನಲ್ಲಿನ ಬ್ಯಾಂಕ್‌ ಮುಚ್ಚಲ್ಪಡುತ್ತವೆ.ಜೂನ್ 24: ನಾಲ್ಕನೇ ಶನಿವಾರ.ಜೂನ್ 25: ತಿಂಗಳ ನಾಲ್ಕನೇ ಭಾನುವಾರ.ಜೂನ್ 26: ಖಾರ್ಚಿ ಪೂಜೆಯ ನಿಮಿತ್ತ ಅಗರ್ತಲಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.ಜೂನ್ 28: ಬಕ್ರೀದ್ ನಿಮಿತ್ತ ಜಮ್ಮು, ಕೇರಳ, ಮಹಾರಾಷ್ಟ್ರ ಹಾಗೂ ಕಾಶ್ಮೀರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.ಜೂನ್ 29: ಬಕ್ರೀದ್​ ನಿಮಿತ್ತ ದೇಶದ ಹಲವು ರಾಜ್ಯಗಳಲ್ಲಿ ಬ್ಯಾಂಕ್​ಗಳು ಬಂದ್​ ಇರಲಿವೆ.ಜೂನ್ 30: ರೆಮ್ನಾನಿ/ಈದ್-ಉಲ್-ಜುಹಾದ ಹಿನ್ನೆಲೆಯಲ್ಲಿ ಮಿಜೋರಾಂ, ಒಡಿಶಾದಲ್ಲಿ ಬ್ಯಾಂಕ್ ಮುಚ್ಚಲ್ಪಡುತ್ತವೆ.
ಈ ರಜೆಗಳು ಪ್ರಾದೇಶಿಕಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತವೆ ಎಂಬುದನ್ನು ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − seven =
Remember me
