ನವದೆಹಲಿ:ಸೋಶಿಯಲ್​ ಮೀಡಿಯಾದಲ್ಲಿ ಭಾವನಾತ್ಮಕ ಹಾಗೂ ಕೆಲವು ಹಾಸ್ಯಾಸ್ಪದ ವಿಡಿಯೋಗಳು ವೈರಲ್​​​ ಆಗುತ್ತವೆ. ಆದರೆ ಇತ್ತೀಚೆಗೆ ವೈರಲ್​ ಆಗಿರುವ ಅಮ್ಮ- ಮಗನ ಬಾಂಧವ್ಯದ ವಿಡಿಯೋವೊಂದು ಹೃದಯಸ್ಪರ್ಶಿಯಾಗಿದೆ. ಇಂದು ನಾವು ನಿಮಗೆ ಅಂತಹ ಒಂದು ವಿಡಿಯೋವನ್ನು ತೋರಿಸಲಿದ್ದೇವೆ ಅದು ನಿಮ್ಮ ಹೃದಯವನ್ನು ಸ್ಪರ್ಶಿಸಲಿದೆ.
ಗುಡ್ ನ್ಯೂಸ್ ಮೂವ್‌ಮೆಂಟ್‌ನಿಂದ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕ್ಲಿಪ್, ಕ್ಷೌರಿಕನೊಬ್ಬ ಮಹಿಳೆಯ ತಲೆ ಬೋಳಿಸಿಕೊಂಡಿರುವುದನ್ನು ತೋರಿಸುತ್ತದೆ. ತಾಯಿ-ಮಗನ ಬಾಂಧವ್ಯವನ್ನು ನೆಟ್ಟಿಗರು ಮೆಚ್ಚಿದ್ದಾರೆ.
ಇದನ್ನೂ ಓದಿ:VIDEO| ಮೆಟ್ರೋದಲ್ಲಿ ಪ್ರಣಯ ಪ್ರಸಂಗ; ಕೆರಳಿದ ನೆಟ್ಟಿಗರು
ವಿಡಿಯೋದಲ್ಲಿ ಏನಿದೆ?:ಸಲೂನಿನಲ್ಲಿ ಕೆಲಸ ಮಾಡುವ ಯುವಕನ ತಾಯಿಗೆ ಕ್ಯಾನ್ಸರ್ ಆಗಿದೆ. ಕಿಮೋಥೆರಪಿಗೆ ಮೊದಲು ಮಗನೇ ಅಮ್ಮನ ತಲೆಯನ್ನು ಬೋಳಿಸಿದ್ದಾನೆ. ಸಲೂನಿನ ಸಿಬ್ಬಂದಿಯೂ ಈ ತಾಯಿಗೆ ಸಾಥ್​ ಕೊಡುತ್ತಾರೆ. ಒಬ್ಬೊಬ್ಬರಾಗಿ ಇನ್ನು ಕೆಲವರು ತಲೆ ಬೋಳಿಸಿಕೊಳ್ಳುತ್ತಾರೆ. ಇದೆಲ್ಲವನ್ನು ನೋಡಿದ ಆಕೆಯ ಕಣ್ಣೀರು ಹಾಕಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಭಾವನಾತ್ಮಕವಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.
NO ONE FIGHTS ALONEThis barber shaves his heads in solidarity with his mother who is fighting cancer. If that wasn't emotional enough, his friends and work colleagues join in and suprise her as well. 😭😭😭 (🎥:guido.magalhaes)pic.twitter.com/GA2i2BzRRm
— GoodNewsMovement (@GoodNewsMVT)May 9, 2023

ಯಾರೂ ಏಕಾಂಗಿಯಾಗಿ ಹೋರಾಡುವುದಿಲ್ಲ. ಈ ಕ್ಷೌರಿಕ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ತಾಯಿಯೊಂದಿಗೆ ಮಗ ತಲೆ ಬೋಳಿಸಿಕೊಳ್ಳುತ್ತಾನೆ. ಅದು ಸಾಕಷ್ಟು ಭಾವನಾತ್ಮಕವಾಗಿದೆ. ಅವನ ಸ್ನೇಹಿತರು ಮತ್ತು ಕೆಲಸದ ಸಹೋದ್ಯೋಗಿಗಳು ಸೇರಿಕೊಂಡು ಅವಳನ್ನು ಆಶ್ಚರ್ಯಗೊಳಿಸುತ್ತಾರೆ ಎನ್ನುವ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಶೇರ್​​ ಮಾಡಲಾಗಿದೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ವಾನ; 31ನೇ ವರ್ಷಕ್ಕೆ ಕಾಲಿಟ್ಟ ಬೋಬಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 11 =
Remember me
