ಲಖನೌ:ಸಿನಿಮಾ ಹಾಡಿನಿಂದ ಪ್ರೇರಿತಗೊಂಡು ಏನೇನು ಮಾಡಬಹುದು ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ!
ಹಲವು ದಶಕಗಳ ಕಾಯುವಿಕೆ ಮುಗಿದಿದೆ. ಕೊನೆಗೂ ಬರೇಲಿ ತನ್ನ ಜುಮಕಿಯಿಂದ ಶೃಂಗಾರಗೊಂಡಿದೆ. ಹೌದು ಬರೇಲಿ ಮತ್ತು ಜುಮಕಿ ಎಂದಾಕ್ಷಣ ನೆನಪಿಗೆ ಬರುವುದು ಜುಮಕಾ ಗಿರಾರೇ, ಬರೇಲಿ ಕಿ ಬಜಾರ್​ ಮೇ… ಜುಮಕಾ ಗಿರಾರೇ ಎಂಬ ಹಿಂದಿ ಹಾಡು.
ಬರೇಲಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ 2 ಕ್ವಿಂಟಾಲ್​ ತೂಗುವ, 20 ಅಡಿ ಎತ್ತರದ ಕಂಬದಲ್ಲಿ ಇರುವ ಹಿತ್ತಾಳೆಯ ಜುಮಕಿಯನ್ನು ಕೇಂದ್ರ ಕಾರ್ಮಿಕ ಸಚಿವ ಸಂತೋಷ್​ ಗಂಗವಾರ್​ ಉದ್ಘಾಟಿಸಿದರು.
ಇದು ಬರೇಲಿ ನಗರಕ್ಕೆ ಆಗಮಿಸುತ್ತಿದ್ದಂತೆ ಕಣ್ಣಿಗೆ ಕಾಣುತ್ತದೆ. ದೆಹಲಿಯಿಂದ ಆಗಮಿಸುವವರಿಗೆ ಎದುರಿಗೆ ಥಟ್ಟನೆ ಕಾಣುತ್ತದೆ ಎಂದು ಬರೇಲಿ ಡೆವಲಪ್​ಮೆಂಟ್​ ಅಥಾರಿಟಿ (ಬಿಡಿಎ) ಹಿರಿಯ ಅಧಿಕಾರಿ ತಿಳಿಸಿದರು.
ಸಾಯಾ ಸಿನಿಮಾದ ಈ ಜನಪ್ರಿಯ ಗೀತೆಯನ್ನು ಹಾಡಿದವರು ಸಾಧನಾ ಅವರು. ಈ ಗೀತೆಯಿಂದ ಪ್ರೇರಿತರಾದ ನಾವು ಈ ತರಹದ ಜುಮಕಿಯನ್ನು ನಿರ್ಮಾಣ ಮಾಡಲು ಯೋಚಿಸಿದೆವು. ಅದು ಈಗ ಉದ್ಘಾಟನೆಯಾಗಿದ್ದು ಎಲ್ಲರಲ್ಲೂ ಸಂತಸ ತಂದಿದೆ ಎಂದರು.
ಹಾಗಾದರೆ ನೀವು ಮುಂದೆ ಬರೇಲಿಗೆ ಹೋದರೆ ಸೆಲ್ಫಿ ತೆಗೆದುಕೊಳ್ಳಲು ಉತ್ತಮ ಸ್ಥಳದ ಪರಿಚಯವಾಯಿತು ಅಲ್ಲವೆ?(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
