ಜೈಪುರ:ನೀನು ಮಾಡುವ ಕೆಲಸವನ್ನು ಪ್ರೀತಿಸು ಮತ್ತು ಶ್ರಮ ವಹಿಸು ಪ್ರತಿಫಲ ತಾನಾಗಿಯೇ ನಿನ್ನ ಮುಂದೆ ಬರುತ್ತದೆ ಎಂಬ ಹಿರಿಯರ ಅನುಭವದ ಮಾತಿಗೆ ತಾಜಾ ನಿದರ್ಶನವೊಂದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಬರ್ಮರ್​ ಜಿಲ್ಲೆಯ ಕುಗ್ರಾಮವೊಂದರ ನಿವಾಸಿ ಮಹಿಪಾಲ್​ ಸೆಜು ಎಂಬುವರು ಜಪಾನ್​ನ ಪ್ರತಿಷ್ಠಿತ ಕಂಪನಿಯಲ್ಲಿ ವಾರ್ಷಿಕ 1 ಕೋಟಿ ರೂ. ಸಂಬಳದ ಉದ್ಯೋಗ ಗಿಟ್ಟಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಬರ್ಮರ್​ ಜಿಲ್ಲೆ ಇಂಡೋ-ಪಾಕ್​ ಗಡಿಯಲ್ಲಿ ಬರುತ್ತದೆ. ಬರ್ಮರ್​ನಲ್ಲಿ ಆರಂಭಿಕ ಶಿಕ್ಷಣ ಪಡೆದ ಮಹಿಪಾಲ್​, ದೆಹಲಿಯಲ್ಲಿ ಬಿಟೆಕ್​ ಶಿಕ್ಷಣ ಮುಗಿಸಿ, ಜಪಾನ್​ನ ನಗೋಯಾ ನಗರದಲ್ಲಿ ಆರಂಭದಲ್ಲಿ ವಾರ್ಷಿಕ 30 ಲಕ್ಷ ರೂ. ಸಂಬಳದ ಉದ್ಯೋಗವನ್ನು ಸೇರಿದರು. ಕೆಲಸದ ಮೇಲಿನ ಅವರ ಶ್ರದ್ಧೆ ಹಾಗೂ ಕೌಶಲ ಇಂದು ವೃತ್ತಿ ಜೀವನದ ಯಶಸ್ಸಿನ ಶಿಖರಕ್ಕೇರುವಂತೆ ಮಾಡಿದೆ. ಜಪಾನ್​ ರಾಜಧಾನಿ ಟೋಕಿಯೋದಲ್ಲಿರುವ ಕಂಪನಿಯೊಂದು ಮಹಿಪಾಲ್​ಗೆ ವಾರ್ಷಿಕ 1 ಕೋಟಿ ರೂ. ಸಂಬಳದ ಆಫರ್​ ನೀಡಿ ಅವರನ್ನು ತಮ್ಮ ಕಂಪನಿಗೆ ಸೇರಿಸಿಕೊಂಡಿದೆ.
ಜೋಧ್​ಪುರದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಮಹಿಪಾಲ್​, ಕೋಟಾದಲ್ಲಿ ಐಐಟಿ ತಯಾರಿಯನ್ನು ಮುಂದುವರಿಸಿದರು. ನಂತರ ದೆಹಲಿಯಿಂದ 4 ವರ್ಷಗಳ ಬಿಟೆಕ್ ಪೂರ್ಣಗೊಳಿಸಿದರು. 2019ರಲ್ಲಿ ಜಾಬ್​ ಏಜೆನ್ಸಿ ಮೂಲಕ ನಗೋಯಾ ನಗರದಲ್ಲಿ 30 ಲಕ್ಷ ರೂ. ಸಂಬಳದ ಉದ್ಯೋಗಕ್ಕೆ ಸೇರಿಕೊಂಡರು. ಪ್ರಸ್ತುತ ಟೋಕಿಯೋದಲ್ಲಿ ಮೆಕ್ಯಾನಿಕಲ್ ಕಾರ್ಪೊರೇಷನ್ ಕಂಪನಿಗೆ ಐಟಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಮಹಿಪಾಲ್ ಸೆಜು ಅವರ ತಂದೆ ಗಂಭೀರಂ ಅವರು ಈ ಹಿಂದೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿ ಈಗ ನಿವೃತ್ತರಾಗಿದ್ದಾರೆ. ಅವರ ತಾಯಿ ಮಾತಾ ಕಮಲಾ ದೇವಿ ಅನಕ್ಷರಸ್ಥರು. ಮಹಿಪಾಲ್ ತನ್ನ ನಾಲ್ಕು ಸಹೋದರರಲ್ಲಿ ಕಿರಿಯವರು. ಮಹಿಪಾಲ್ ಅವರ ಈ ಯಶಸ್ಸು ಕುಗ್ರಾಮಗಳಲ್ಲಿ ಜನಿಸಿದ ವ್ಯಕ್ತಿಗಳು ಸಹ ಕಠಿಣ ಪರಿಶ್ರಮ ಮತ್ತು ಕೌಶಲ್ಯದ ಮೂಲಕ ಜಾಗತಿಕ ಮನ್ನಣೆಯನ್ನು ಸಾಧಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.(ಏಜೆನ್ಸೀಸ್​)
ಅಯೋಧ್ಯೆಯ ಲತಾ ಮಂಗೇಶ್ವರ್​ ಚೌಕ್​ನಲ್ಲಿ ಭಾವುಕರಾದ ಮೋದಿ: ಇಲ್ಲಿದ ಬೃಹದಾಕಾರದ ವೀಣೆ

ಪಾಕಿಸ್ತಾನಕ್ಕೆ ಹೋಗು ಎಂದ ಧೋನಿಗೆ ಅಭಿಮಾನಿ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್!

ಪ್ರತಾಪ್​ ಸಿಂಹ ಸಹೋದರ ವಿಕ್ರಂ ಸಿಂಹ ಬಂಧನ: ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + fourteen =
Remember me
