ಬೆಂಗಳೂರು:ಬಾಸ್ಮತಿ ಅಕ್ಕಿಯ ಪರಿಮಳ ಮತ್ತು ರುಚಿಯ ಬಗ್ಗೆ ಇಡೀ ಜಗತ್ತಿಗೆ ಗೊತ್ತು. ಇದೀಗ ಇದು ಫುಡ್ ಆಂಡ್ ಟ್ರಾವೆಲ್ ಗೈಡ್ ಟೇಸ್ಟ್ ಅಟ್ಲಾಸ್ ಬಿಡುಗಡೆ ಮಾಡಿದ ಇತ್ತೀಚಿನ ವರದಿಯಿಂದ ಸಾಬೀತಾಗಿದೆ.
ಫುಡ್ ಆಂಡ್ ಟ್ರಾವೆಲ್ ಗೈಡ್ ಟೇಸ್ಟ್ ಅಟ್ಲಾಸ್ 2023-24 ನೇ ಸಾಲಿನ ವಿಶ್ವದ ಅತ್ಯುತ್ತಮ ಅಕ್ಕಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಾಸ್ಮತಿ ಅಕ್ಕಿಯನ್ನು ವಿಶ್ವದ ಅತ್ಯುತ್ತಮ ಅಕ್ಕಿ ಎಂದು ಆಯ್ಕೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಇಟಲಿಯ ಅರ್ಬೊರಿಯೊ ಎರಡನೇ ಸ್ಥಾನದಲ್ಲಿದ್ದು, ಪೋರ್ಚುಗಲ್‌ನ ಕ್ಯಾರೊಲಿನಾ ರೈಸ್ ಮೂರನೇ ಸ್ಥಾನದಲ್ಲಿದೆ.
ಪುಲಾವ್‌ನಿಂದ ಬಿರಿಯಾನಿಯವರೆಗೆ, ಬಾಸ್ಮತಿ ಅಕ್ಕಿ ಭಾರತದ ಪ್ರತಿಯೊಬ್ಬ ವ್ಯಕ್ತಿಯ ಮೊದಲ ಆಯ್ಕೆಯಾಗಿದೆ. ಭಾರತವಲ್ಲದೆ, ಇದನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿಯೂ ಬೆಳೆಯಲಾಗುತ್ತದೆ. ಆದರೆ ಬಾಸ್ಮತಿ ಅಕ್ಕಿಯ ಅತಿದೊಡ್ಡ ರಫ್ತುದಾರ ಭಾರತವಾಗಿದೆ. ಇದು ಪ್ರತಿ ವರ್ಷ 6.8 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಮಾಡುತ್ತದೆ. ಪಾಕಿಸ್ತಾನವು ಇದರಿಂದ 2.2 ಬಿಲಿಯನ್ ಡಾಲರ್ ಗಳಿಸುತ್ತದೆ.
ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, 6.61 ಮಿಮೀ ಉದ್ದ ಮತ್ತು 2 ಮಿಮೀ ದಪ್ಪವಿರುವ ಅಕ್ಕಿಯನ್ನು ಬಾಸ್ಮತಿ ಎಂದು ವರ್ಗೀಕರಿಸಲಾಗಿದೆ.
ಸ್ವಾರಸ್ಯಕರ ಸಂಗತಿಯೆಂದರೆ ಭಾರತದ ರಾಜ್ಯಗಳ ಆಧಾರದಲ್ಲಿಯೂ ಬಾಸ್ಮತಿಯನ್ನು ಹೆಸರಿಸಲಾಗಿದೆ. ಉದಾಹರಣೆಗೆ, ಡೆಹ್ರಾಡೂನ್‌ನಲ್ಲಿ ಬೆಳೆಯುವ ಈ ವಿಶೇಷ ಅಕ್ಕಿಯನ್ನು ಡೆಹ್ರಾಡೂನ್ ಬಾಸ್ಮತ್ ಎಂದು ಕರೆಯಲಾಗುತ್ತದೆ.
ಸತತ ಎರಡನೇ ವರ್ಷ ಚೀನಾ ಜನಸಂಖ್ಯೆ ಕುಸಿತ: ಇದರ ಹಿಂದಿನ ಕಾರಣ?

ನೇಪಾಳಕ್ಕೆ 57 ವರ್ಷಗಳ ಹಿಂದೆಯೇ ರಾಮಮಂದಿರ ಪ್ರಾಣ ಪ್ರತಿಷ್ಠೆಯ ದಿನಾಂಕ ಗೊತ್ತಿತ್ತೇ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
