ದೆಹಲಿ:ಕೆಲವು ತಿಂಗಳುಗಳ ಹಿಂದೆ ಹೈಸ್ಕೂಲ್​ ಹುಡುಗರಿಂದ ಹಿಡಿದು ವಯಸ್ಸಾದವರಿಗೂ ಹುಚ್ಚು ಹಿಡಿಸಿದ್ದ ಪಬ್​ಜಿ ಎಂಬ ಹೆಸರಿನ ಗೇಮ್​ ವಿಶ್ವದಾದ್ಯಂತ ಕಾಲಿಟ್ಟು, ಗೇಮಿಂಗ್​​ ಜಗತ್ತಿನಲ್ಲಿ ತನ್ನದೇಯಾದ ಟ್ರೇಂಡ್​ ಸೃಷ್ಟಿ ಮಾಡಿತ್ತು. ಸದ್ಯ, ಕೆಲವು ತಿಂಗಳುಗಳ ಹಿಂದೆ ಹೈಸ್ಕೂಲ್​ ಹುಡುಗರಿಂದ ಹಿಡಿದು ವಯಸ್ಸಾದವರಿಗೂ ಹುಚ್ಚು ಹಿಡಿಸಿದ್ದ ಪಬ್​ಜಿ ಮತ್ತೆ ಭಾರತಕ್ಕೆ ಕಾಲಿಡಲಿವೆ ಎನ್ನಲಾಗಿದೆ.
ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ(BGMI) ಗೇಮ್ ಅಪ್ಲಿಕೇಶನ್‌ನ ತಯಾರಕರಾದ ಕ್ರಾಫ್ಟಾನ್ ತನ್ನ ಜನಪ್ರಿಯ ಆಟವಾದ BGMI ಮತ್ತೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಭಾರತೀಯ ಅಧಿಕಾರಿಗಳಿಂದ ಅನುಮೋದನೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ:ಸಿಇಟಿ ಪರೀಕ್ಷೆ ದಿನವೇ ನೂತನ ಮುಖ್ಯಮಂತ್ರಿಯ ಪ್ರಮಾಣವಚನ; ರೂಟ್​ ಮ್ಯಾಪ್ ಕೇಳಿರುವ ಕೆಇಎ
ಭಾರತದಲ್ಲಿ BGMI ಪುನರಾರಂಭಿಸಲು ನಮಗೆ ಅವಕಾಶ ಮಾಡಿಕೊಟ್ಟ ಭಾರತೀಯ ಅಧಿಕಾರಿಗಳಿಗೆ ನಾವು ಹೆಚ್ಚು ಕೃತಜ್ಞರಾಗಿರುತ್ತೇವೆ. BGMI ಶೀಘ್ರದಲ್ಲೇ ಡೌನ್‌ಲೋಡ್‌ಗೆ ಲಭ್ಯವಾಗಲಿದ್ದು, ಭಾರತೀಯ ಗೇಮಿಂಗ್ ಸಮುದಾಯದಕ್ಕೆ ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇವೆ ಎಂದು ಕ್ರಾಫ್ಟನ್ ಇಂಕ್ ಇಂಡಿಯಾದ ಸಿಇಒ ತಿಳಿಸಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಸರ್ಕಾರದ ಆದೇಶದ ನಂತರ BGMI ಅಪ್ಲಿಕೇಶನ್​ನ್ನು ಗೂಗಲ್ ಪ್ಲೇ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ತೆಗೆದು ಹಾಕಲಾಗಿತ್ತು. ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಸರ್ಕಾರವು 300ಕ್ಕೂ ಅಪ್ಲಿಕೇಶನ್​ಗಳನ್ನು ಬ್ಯಾನ್​ ಮಾಡಿತ್ತು. ಈ ಪೈಕಿ BGMI ಭಾರತಕ್ಕೆ ಪುನರಾಗಮನ ಮಾಡುವ ಮೊದಲ ಅಪ್ಲಿಕೇಶನ್ ಆಗಲಿದೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 + four =
Remember me
