ನವದೆಹಲಿ:ನಿತೇಶ್ ತಿವಾರಿಯ ಬವಾಲ್ ಸಿನಿಮಾದಿಂದಾಗಿ ಅಂತರಾಷ್ಟ್ರೀಯ ವಿವಾದವೊಂದು ಹುಟ್ಟಿಕೊಂಡಿದ್ದು ಇಸ್ರೇಲ್​ ಕೆಂಗಣ್ಣು ಮಾಡಿಕೊಂಡು ಕುಳಿತಿದೆ. ಸಿನಿಮಾ ಬಿಡುಗಡೆಯಾದ ಒಂದು ದಿನದ ನಂತರ ಭಾರತದ ಇಸ್ರೇಲಿ ರಾಯಭಾರ ಕಚೇರಿ ಈ ವಿಚಾರವಾಗಿ ಸ್ಪಂದಿಸಿದ್ದು “ಎರಡನೆಯ ಮಹಾಯುದ್ಧದಲ್ಲಿ ಅರವತ್ತು ಲಕ್ಷ ಯಹೂದಿಗಳ ನರಮೇಧವನ್ನು ಬವಾಲ್​ ಸಿನಿಮಾದಲ್ಲಿ “ಕ್ಷುಲ್ಲಕ” ಎನ್ನುವಂತೆ ತೋರಿಸಲಾಗಿದ್ದು, ಇದರಿಂದಾಗಿ ನಾವು ಆಘಾತಕ್ಕೆ ಒಳಗಾಗಿದ್ದೇವೆ” ಎಂದಿದೆ. ಭಾರತದ ಇಸ್ರೇಲ್​ನಲ್ಲಿನ ರಾಯಭಾರಿ ನೋರ್ ಗಿಲೋನ್ ಕೂಡ ಇದೇ ರೀತಿಯ ದೃಷ್ಟಿಕೋನವನ್ನು ಪ್ರತಿಧ್ವನಿಸಿದರು.
ನೋರ್​ ಗಿಲೋನ್​, ತಮ್ಮ ಟ್ವೀಟ್​ನಲ್ಲಿ “ನಾನು ಬವಾಲ್ ಚಿತ್ರವನ್ನು ಇನ್ನೂ ನೋಡಿಲ್ಲ, ಹಾಗೂ ಮುಂದೆಯೂ ವೀಕ್ಷಿಸುವುದಿಲ್ಲ. ಆದರೆ ನಾನು ಓದಿದ ವಿಷಯದಿಂದ ತಿಳಿದುಕೊಂಡಿರುವುದು ಏನೆಂದರೆ, ಸಿನಿಮಾದಲ್ಲಿ ಬಳಕೆಯಾದ ಪರಿಭಾಷೆ ಮತ್ತು ಸಾಂಕೇತಿಕತೆಯ ಕಳಪೆಯಾಗಿದೆ. ಹತ್ಯಾಕಾಂಡವನ್ನು ಕ್ಷುಲ್ಲಕವಾಗಿ ತೋರಿಸಿರುವುದು ಎಲ್ಲರಿಗೂ ಚಿಂತಾಜನಕವಾಗಿರಬೇಕು. ಹತ್ಯಾಕಾಂಡದ ಭೀಕರತೆಯ ಬಗ್ಗೆ ತಿಳಿದಿಲ್ಲದ ಜನರು ಅದರ ಬಗ್ಗೆ ಓದುವಂತೆ ನಾನು ಒತ್ತಾಯಿಸುತ್ತೇನೆ” ಅವರು ಟ್ವಿಟರ್ ನಲ್ಲಿ ಬರೆದಿದ್ದಾರೆ.
I did not and will not watch the film Bawaal but from what I’ve read, there was a poor choice of terminology and symbolism.Trivialization of the Holocaust should disturb all.I urge those who don’t know enough about the horrors of the#Holocaustto educate themselves about it.— Naor Gilon🎗️ (@NaorGilon)July 28, 2023
I did not and will not watch the film Bawaal but from what I’ve read, there was a poor choice of terminology and symbolism.Trivialization of the Holocaust should disturb all.I urge those who don’t know enough about the horrors of the#Holocaustto educate themselves about it.
ಆಶ್ವಿಟ್ಜ್​ನಲ್ಲಿನ ಗ್ಯಾಸ್ ಚೇಂಬರ್ ಸೇರಿದಂತೆ 2ನೇ ವಿಶ್ವಯುದ್ಧದ ತಾಣಗಳಿಗೆ ಭೇಟಿ ನೀಡುವ ಈ ಚಲನಚಿತ್ರವು ಅದರ ಮುಖ್ಯ ಪಾತ್ರಗಳನ್ನು ಚಿತ್ರಿಸುತ್ತದೆ. ಇದು ಗ್ಯಾಸ್ ಚೇಂಬರ್ ಒಳಗಿನ ಪರಿಸ್ಥಿತಿಯನ್ನೂ ಚಿತ್ರಿಸಿದೆ. ಅಲ್ಲಿ ಅವರು ಉಸಿರಾಡಲು ಹೆಣಗಾಡುತ್ತಿರುವಂತೆ ಕಂಡುಬರುತ್ತದೆ. ಒಂದು ನಿದರ್ಶನದಲ್ಲಿ, ಜಾನ್ವಿಯ ಕಪೂರ್​ ಪಾತ್ರ ನಿಷಾ “ನಾವೆಲ್ಲರೂ ಹಿಟ್ಲರನಂತೆ ಇಲ್ಲವೇ?” ಎಂದು ಮಾನವನ ದುರಾಶೆಯ ಬಗ್ಗೆ ಹೇಳಿಕೆ ನೀಡುತ್ತಾರೆ. ಮತ್ತೊಂದು ದೃಶ್ಯದಲ್ಲಿ “ಪ್ರತಿ ಸಂಬಂಧವು ಉಸಿರುಗಟ್ಟಿಸುವ ‘ಆಶ್ವಿಟ್ಜ್’ ಪರಿಸ್ಥಿತಿಯ ಮೂಲಕ ಹಾದು ಹೋಗುತ್ತದೆ” ಎಂಬ ಡೈಲಾಗ್​ ಇದೆ. ಇದು ಎಲ್ಲಾ ಸಂಬಂಧಗಳು ತಮ್ಮದೇ ಆದ ಹೋರಾಟಗಳನ್ನು ಎದುರಿಸುತ್ತವೆ ಎಂದು ಸೂಚಿಸುತ್ತದೆ.
The Israeli embassy is disturbed by the trivialization of the significance of the Holocaust in the recent movie 'Bawaal'.There was a poor choice in the utilization of some terminology in the movie, and though we assume no malice was intended, we urge everyone who may not be…— Israel in India (@IsraelinIndia)July 28, 2023
The Israeli embassy is disturbed by the trivialization of the significance of the Holocaust in the recent movie 'Bawaal'.There was a poor choice in the utilization of some terminology in the movie, and though we assume no malice was intended, we urge everyone who may not be…
ಇದು, 60 ಲಕ್ಷ ಯಹೂದಿಗಳ ಸಾವನ್ನು ಇಬ್ಬರ ನಡುವಿನ ಪ್ರೀತಿ ಪ್ರೇಮದಂತಹ ವಿಚಾರಕ್ಕೆ ಹೋಲಿಕೆ ಮಾಡಿರುವುದು ಇಸ್ರೇಲ್​ಗೆ ತೊಂದರೆ ಉಂಟು ಮಾಡಿದೆ. ಆದರೆ ಇಸ್ರೇಲ್​ನ ರಾಯಭಾರಿ ತಮ್ಮ ಟ್ವೀಟ್​ನಲ್ಲಿ “ಇತ್ತೀಚಿನ ಚಲನಚಿತ್ರ ಬವಾಲ್​ನಲ್ಲಿ ಹತ್ಯಾಕಾಂಡದವನ್ನು ಸರಳೀಕರಿಸಿ ತೋರಿಸಿದ್​ದರಿಂದ ಇಸ್ರೇಲಿಗರಿಗೆ ದುಃಖವಾಗಿದೆ. ಚಲನಚಿತ್ರದಲ್ಲಿ ಕೆಲವು ಪರಿಭಾಷೆಗಳ ಬಳಕೆ ಕಳಪೆಯಾಗಿದ್ದು, ಇದು ಯಾವುದೇ ರೀತಿಯ ದುರುದ್ದೇಶವನ್ನು ಉದ್ದೇಶಿಸಿಲ್ಲ ಎಂದು ನಾವು ಭಾವಿಸಿದ್ದೇವೆ. ಆದರೂ ಹತ್ಯಾಕಾಂಡದ ಭೀಕರತೆಯ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲದ ಪ್ರತಿಯೊಬ್ಬರನ್ನು ಅದರ ಬಗ್ಗೆ ತಿಳಿದುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ, ” ಎಂದು ಬರೆದುಕೊಂಡಿದ್ದಾರೆ.
ಸೈಮನ್ ವೈಸೆಂಥಾಲ್ ಸೆಂಟರ್ (SWC) ನಂತಹ ಹಲವಾರು ಮಾನವ ಹಕ್ಕುಗಳ ಗುಂಪುಗಳು ಅಮೆಜಾನ್ ಪ್ರೈಮ್​ನೊಂದಿಗಿನ ಈ ಸಮಸ್ಯೆಯನ್ನು ಹಂಚಿಕೊಂಡಿದ್ದು, ಚಲನಚಿತ್ರವನ್ನು ತಮ್ಮ ವೇದಿಕೆಯಿಂದ ತೆಗೆದುಹಾಕುವಂತೆ ಕೇಳಿಕೊಂಡಿವೆ. ಎಸ್​ಡಬ್ಲ್ಯೂಸಿ ಅಸೋಸಿಯೇಟ್ ಡೀನ್ ಮತ್ತು ಗ್ಲೋಬಲ್ ಸೋಶಿಯಲ್ ಆಕ್ಷನ್ ನಿರ್ದೇಶಕ ರಬ್ಬಿ ಅಬ್ರಹಾಂ ಕೂಪರ್ ಅಮೆಜಾನ್ ಅವರನ್ನು “ಬವಾಲ್​ ಸಿನಿಮಾದಿಂದ ಹಣ ಗಳಿಸುವುದನ್ನು ನಿಲ್ಲಿಸಿ” ಎಂದು ಕೇಳಿಕೊಂಡಿದ್ದಾರೆ.
ಇಷ್ಟೆಲ್ಲಾ ನಡೆದರೂ ನಿರ್ದೇಶಕ ನಿತೇಶ್ ತಿವಾರಿ ಮತ್ತು ಚಿತ್ರದ ಪ್ರಮುಖ ನಟರಾದ ವರುಣ್ ಧವನ್ ಮತ್ತು ಜಾನ್ವಿ ಕಪೂರ್, ಚಲನಚಿತ್ರವನ್ನು ಸಮರ್ಥಿಸಿಕೊಂಡಿದ್ದಾರೆ. ಪಿಂಕ್ವಿಲ್ಲಾ ಸಂಸ್ಥೆಯ ಜತೆಗಿನ ಸಂದರ್ಶನದಲ್ಲಿ, ಚಲನಚಿತ್ರ ನಿರ್ಮಾಪಕ ತನ್ನ ಟೀಕೆಗಳನ್ನು ಕೇಳಿಸಿಕೊಳ್ಳುವಾಗ, ಟೀಕೆ “ ರಚನಾತ್ಮಕವಾಗಿ ಇಲ್ಲದಿದ್ದಾಗ ಅವರಿಗೆ ದುಃಖವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − ten =
Remember me
