ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ವೈದ್ಯಕೀಯ ವಿಭಾಗದ ಅಡಿ ಕೆಲವು ಆಯ್ದ ಆಸ್ಪತ್ರೆಗಳಿಗೆ 6 ಪ್ಯಾನಲ್ ಮಕ್ಕಳ ತಜ್ಞರುಗಳ ಹುದ್ದೆಗೆ ನೇರ ಸಂದರ್ಶನ ಕರೆಯಲಾಗಿದೆ.ಒಟ್ಟು 6 ಮಕ್ಕಳ ತಜ್ಞ ಹುದ್ದೆಗೆ ಈ ನೇರ ಸಂದರ್ಶನ ನಡೆಯಲಿದ್ದು, ಅಭ್ಯರ್ಥಿಗಳು ಎಂಡಿ (ಪೀಡಿಯಾಟ್ರಿಕ್ಸ್)/ ಡಿಸಿಎಚ್ ಪಾಸಾಗಿರಬೇಕು. 50 ವರ್ಷ ವಯೋಮಿತಿಯೊಳಗಿರಬೇಕು. ಕರ್ನಾಟಕ ಮೆಡಿಕಲ್ ಕೌನ್ಸಿಲ್​​ನಲ್ಲಿ ತಮ್ಮ ಶೈಕ್ಷಣಿಕ ವಿದ್ಯಾರ್ಹತೆಯನ್ನು ನೋಂದಣಿ ಮಾಡಿಸಿರಬೇಕು.
ಇದನ್ನೂ ಓದಿ:ಕಾಮೆಡ್​​-ಕೆ: ಪದವಿ ಪ್ರವೇಶ ಪರೀಕ್ಷೆ ಆಗಸ್ಟ್ 19 ಕ್ಕೆ ನಿಗದಿ
ವೇತನ 1,10,000 ರೂ. ಇರುತ್ತದೆ. ಗುತ್ತಿಗೆ ಅವಧಿ ಒಂದು ವರ್ಷ. ಜುಲೈ 29 ರಂದು ಬೆಳಗ್ಗೆ 10.30 ರಿಂದ ಸಂಜೆ 4.30 ರವರೆಗೆ ಸಭಾಂಗಣ, ದಾಸಪ್ಪ ಆಸ್ಪತ್ರೆ ಆವರಣ, 2ನೇ ಮಹಡಿ, ಎಸ್​ಜೆಪಿ ರಸ್ತೆ, ಬೆಂಗಳೂರು- ಇಲ್ಲಿ ನೇರ ಸಂದರ್ಶನ ನಡೆಯಲಿದೆ. ಆಸಕ್ತರು ತಮ್ಮ ಬಯೋಡೇಟಾ, ವಿದ್ಯಾರ್ಹತೆಯ ಎಲ್ಲ ವರ್ಷದ ಅಂಕಪಟ್ಟಿ, ಪದವಿ ಪ್ರಮಾಣಪತ್ರದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ 080- 22112019 ಸಂಪರ್ಕಿಸಬಹುದು.
ಬಿಎಸ್​ವೈ ಸರ್ಕಾರಕ್ಕೆ ವರ್ಷದ ಸಂಭ್ರಮ, ಸೋಮವಾರ ಮಹತ್ವದ ಸುದ್ದಿಗೋಷ್ಠಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 16 =
Remember me
