ನವದೆಹಲಿ:ಗೌತಮ್​​ ಗಂಭೀರ್ ಅವರ ಮಾರ್ಗದರ್ಶನದ ಅಡಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಖುಷಿಯಲ್ಲಿ ಗಂಭೀರ್​ ಹಾಗೂ ತಂಡದ ಮಾಲೀಕರಾದ ಶಾರುಖ್​ ಖಾನ್​ ಅವರು ಇದ್ದಾರೆ. ಈ ಸುದ್ದಿ ಬೆನ್ನಲ್ಲೇ ಇದೀಗ ಮತ್ತೊಂದು ಸುದ್ದಿಯೊಂದು ವೈರಲ್​​ ಆಗಿದೆ.
ಚಾಂಪಿಯನ್ ಪಟ್ಟದ ಬೆನ್ನಲ್ಲೇ ಗೌತಮ್ ಗಂಭೀರ್ ಕೆಕೆಆರ್ ತಂಡವನ್ನು ತೊರೆಯುವ ಸುದ್ದಿಗಳು ಹರಿದಾಡುತ್ತಿದೆ. ಇದಕ್ಕೆ ಕಾರಣ ಬಿಸಿಸಿಐ ಕಡೆಯಿಂದ ಗೌತಮ್​​ ಗಂಬೀರ್​ ಅವರಿಗೆ ಬಿಗ್ ಆಫರ್ ಸಿಕ್ಕಿರುವುದು. ಅಂದರೆ ಟೀಮ್ ಇಂಡಿಯಾದ ಕೋಚ್ ಆಗುವಂತೆ ಬಿಸಿಸಿಐ ಗೌತಮ್ ಗಂಭೀರ್ ಅವರನ್ನು ಸಂಪರ್ಕಿಸಿದೆ ಎನ್ನುವ ಸುದ್ದಿಯೊಂದು ಹಲವರು ದಿನಗಳಿಂದ ಹರಿದಾಡುತ್ತಿದೆ.
ಈ ಸುದ್ದಿ ಬೆನ್ನಲ್ಲೇ ಅತ್ತ ಶಾರುಖ್ ಖಾನ್ ಕೂಡ ಅಲರ್ಟ್ ಆಗಿದ್ದಾರೆ. ಗೌತಮ್ ಗಂಭೀರ್ ಅವರನ್ನು ಬಿಟ್ಟು ಕೊಡಲು ಕಿಂಗ್ ಖಾನ್ ಕೂಡ ಸಿದ್ಧರಿಲ್ಲ. ಹೀಗಾಗಿಯೇ ಕೆಕೆಆರ್ ಮೆಂಟರ್​ಗೆ ಶಾರುಖ್ ಖಾನ್ ಖಾಲಿ ಚೆಕ್​ನ ಆಫರ್ ನೀಡಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ಹತ್ತು ವರ್ಷಗಳವರೆಗೆ ಗೌತಮ್ ಗಂಭೀರ್ ಕೆಕೆಆರ್ ತಂಡದ ಮುಖ್ಯ ಹುದ್ದೆಯಲ್ಲಿರಬೇಕೆಂದು ಶಾರುಖ್ ಖಾನ್ ಬಯಸಿದ್ದಾರೆ. ಇದಕ್ಕಾಗಿ ಗಂಭೀರ್​ಗೆ ಎಷ್ಟು ಹಣ ಬೇಕು ಅದನ್ನು ಖಾಲಿ ಚೆಕ್​ನಲ್ಲಿ ಬರೆದು ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಈ ಮೂಲಕ ಕೆಕೆಆರ್ ತಂಡಕ್ಕೆ ನಿಮ್ಮ ಸೇವೆಯ ಅತ್ಯಗತ್ಯವಿದೆ ಎಂಬುದನ್ನು ಶಾರುಖ್ ಖಾನ್ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕೆಕೆಆರ್​ ಹಾಗೂ ಬಿಸಿಸಿಐ ಬೇಡಿಕೆಯಿಂದ ಗೌತಮ್​ ಗಂಭೀರ್​ ಅವರ ಬೇಡಿಕೆ ಹೆಚ್ಚಾಗಿದೆ. ಬಿಗ್​ ಆಫರ್​ಗಳು ಕಣ್ಮುಂದೆ ಇರುವಾಗ ಗೌತಮ್​ ಗಂಭೀರ್​ ಅವರು ಯಾರ ಕೈ ಹಿಡಿಯಲಿದ್ದಾರೆ ಎನ್ನುವ ನಿರ್ಧಾರ ಅವರಿಗೆ ಬಿಟ್ಟಿದ್ದು, ಆದರೆ ಕ್ರಿಕೆಟ್​​ ಅಭಿಮಾನಿಗಳು ಗೌತಮ್​ ಅವರ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.
ಭಾರತ ತಂಡದ ಕೋಚ್ ಹುದ್ದೆಯಲ್ಲಿರುವವರು ಯಾವುದೇ ಫ್ರಾಂಚೈಸಿ ಲೀಗ್​ನಲ್ಲಿ ತಂಡದ ತರಬೇತುದಾರ ಅಥವಾ ಇನ್ನಿತರ ಹುದ್ದೆಗಳಲ್ಲಿರಬಾರದು ಎಂಬ ನಿಯಮವಿದೆ. ಹೀಗಾಗಿ ಗೌತಮ್ ಗಂಭೀರ್ ಅವರ ಮುಂದಿನ ನಡೆಯೇನು ಎಂಬುದೇ ಕುತೂಹಲ ಇದೆ.
ಕೆಕೆಆರ್ ಗೆಲುವಿನಿಂದ ಭಾವುಕರಾದ ಶಾರುಖ್ ಕುಟುಂಬ; ಖುಷಿಯಿಂದ ಅಳುತ್ತಲೇ ತಂದೆಯನ್ನು ಅಪ್ಪಿಕೊಂಡ ಸುಹಾನಾ ಖಾನ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + seventeen =
Remember me
