ನವದೆಹಲಿ:ಇತ್ತೀಚೆಗೆ ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸುಲಭವಾಗಿ ಹಣ ಸಂಪಾದಿಸುವ ಚಟಕ್ಕೆ ಬಿದ್ದ ಕೆಲ ಕಿಡಿಗೇಡಿಗಳು ಆನ್​ಲೈನ್​ ಮೂಲಕ ಸುಲಿಗೆ, ವಂಚನೆ ಸೇರಿದಂತೆ ಅನೇಕ ಸೈಬರ್ ಅಪರಾಧಗಳನ್ನು ಎಸಗುತ್ತಿದ್ದಾರೆ. ಇದರಲ್ಲಿ ಹೆಚ್ಚಾಗಿ ಲೋನ್ ಆ್ಯಪ್​ಗಳ ಹೆಸರಿನಲ್ಲಿ ಸುಲಭವಾಗಿ ಹಾಗೂ ದೊಡ್ಡ ಮೊತ್ತದ ಸಾಲ ನೀಡುವುದಾಗಿ ಹೇಳಿ ಅಮಾಯಕರಿಂದ ಲಕ್ಷ ಲಕ್ಷ ರೂಪಾಯಿ ದೋಚುತ್ತಿದ್ದಾರೆ.
ಸಾಲ ನೀಡುವುದಲ್ಲದೆ, ಹೆಚ್ಚಿನ ಬಡ್ಡಿಗೆ ಒತ್ತಾಯಿಸಿ ಸಾಲ ಪಡೆದುಕೊಂಡವರಿಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ. ಆದರೆ, ಈ ಅಸುರಕ್ಷಿತ ಸಾಲದ ಆ್ಯಪ್ ಗಳಿಗೆ ಮೋಸ ಹೋಗಬೇಡಿ ಎಂದು ಕೇಂದ್ರ ಸರ್ಕಾರ ಹಲವು ಬಾರಿ ಎಚ್ಚರಿಕೆ ನೀಡಿರುವುದು ನಿಮಗೆಲ್ಲ ಗೊತ್ತೇ ಇದೆ. ಆದರೂ ಪ್ಲೇಸ್ಟೋರ್‌ನಲ್ಲಿ ನಕಲಿ ಅಪ್ಲಿಕೇಶನ್‌ಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಬಳಕೆದಾರರು ಈ ಬಗ್ಗೆ ತುಂಬಾ ಎಚ್ಚರವಹಿಸಿ, ಅಂತಹ ಆ್ಯಪ್​ಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಸರ್ಕಾರ ಇತ್ತೀಚೆಗೆ ಸೂಚಿಸಿದೆ.
ಸುಲಭವಾಗಿ ಸಾಲವನ್ನು ಕೊಡುವುದಾಗಿ ಹೇಳಿಕೊಳ್ಳುವ ಅನೇಕ ಅಪ್ಲಿಕೇಶನ್‌ಗಳು ಇನ್ನೂ ಪ್ಲೇಸ್ಟೋರ್‌ನಲ್ಲಿ ಲಭ್ಯವಿವೆ. ಇವುಗಳನ್ನು ನಂಬಿ ಜನರು ಮೋಸ ಹೋಗುತ್ತಿದ್ದಾರೆ ಎಂದು ಸರ್ಕಾರ ಹಲವು ಬಾರಿ ಎಚ್ಚರಿಕೆ ನೀಡಿರುವುದು ಗೊತ್ತಾಗಿದೆ. CashExpand-U ಅಂತಹ ಮೋಸದ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಆನ್‌ಲೈನ್‌ನಲ್ಲಿ ಸಾಲವನ್ನು ಒದಗಿಸುವ ಈ ಅಪ್ಲಿಕೇಶನ್ ನಕಲಿ ಎಂದು ಸರ್ಕಾರ ಇತ್ತೀಚೆಗೆ ಸೂಚಿಸಿದೆ ಮತ್ತು ಬಳಕೆದಾರರು ಇದನ್ನು ತಕ್ಷಣ ಡಿಲೀಟ್​ ಮಾಡಬೇಕೆಂದು ಸೂಚನೆ ನೀಡಿದೆ.
ಕ್ಯಾಶ್ ಎಕ್ಸ್‌ಪಾಂಡ್-ಯು ಎಂಬ ಆನ್‌ಲೈನ್ ಸಾಲದ ಅಪ್ಲಿಕೇಶನ್ ನಕಲಿ ಮಾತ್ರವಲ್ಲ, ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿವೆ ಮತ್ತು ವಂಚನೆಗಳಿಂದ ತುಂಬಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಈ ಅಪ್ಲಿಕೇಶನ್‌ನ ಮೂಲವು ಬೇರೆ ದೇಶದ್ದಾಗಿರುವ ಕಾರಣ, ಇದರಿಂದ ಪ್ರಮುಖ ಮಾಹಿತಿ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಎಚ್ಚರಿಸಿದ್ದು, ಕೂಡಲೇ ಡಿಲೀಟ್ ಮಾಡಲು ಸೂಚನೆ ನೀಡಿದೆ.(ಏಜೆನ್ಸೀಸ್​)
ಸೀರೆಯುಟ್ಟು ಜಿಮ್​ನಲ್ಲಿ ಸಖತ್​ ವರ್ಕೌಟ್​! ಯುವತಿಯ ಮಾದಕತೆಗೆ ಫಿದಾ ಆದ ನೆಟ್ಟಿಗರು, ವಿಡಿಯೋ ವೈರಲ್​

ಫಸ್ಟ್​ ನೈಟ್​ ರೂಮ್​ನಲ್ಲಿ ವಿಡಿಯೋ ಮಾಡಿ ಇದು ಹೇಗಿದೆ ಎಂದು ಪ್ರಶ್ನಿಸಿದ ನವದಂಪತಿಗೆ ನೆಟ್ಟಿಗರ ತರಾಟೆ!

ದೋಸೆ ಹೆಸರು ಬಂದಿದ್ದು ಹೇಗೆ? ಆ ಒಂದು ತಪ್ಪಿನಿಂದಾಗಿ ದೋಸೆಯಾಯ್ತು! ಇಲ್ಲಿದೆ ಅಚ್ಚರಿಯ ಮಾಹಿತಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 + 13 =
Remember me
