ಬೆಂಗಳೂರು:ಇನ್ಶೂರೆನ್ಸ್​ ಪಾಲಿಸಿ ಮಾಡಿಸೋ ಮುನ್ನ ಹುಷಾರು. ದೊಡ್ಡ ಕಂಪನಿಯ ಹೆಸರು ಹೇಳಿಕೊಂಡು ಏಜೆಂಟ್ಸ್​ ಬಂದಿದ್ದರೂ ಒಮ್ಮೆ ಮುನ್ನೆಚ್ಚರಿಕೆ ವಹಿಸಿ, ಸರಿಯಾಗಿ ಯೋಚಿಸಿಯೇ ಇನ್ಶೂರೆನ್ಸ್ ಪಾಲಿಸಿ ಮಾಡಿಸಿಕೊಳ್ಳಿ. ಏಕೆಂದರೆ ದೊಡ್ಡ ದೊಡ್ಡ ಕಂಪನಿಗಳ ಹೆಸರಲ್ಲೇ ಮೋಸ ಮಾಡಿ ನಕಲಿ ಪಾಲಿಸಿ ಮಾಡಿಕೊಡುತ್ತಿರುವ ಜಾಲವೊಂದನ್ನು ಪೊಲೀಸರು ಭೇದಿಸಿದ್ದಾರೆ.
ರಿಲಯನ್ಸ್ ಜನರಲ್ ಇನ್ಶೂರೆನ್ಸ್, ಕೋಟಕ್ ಜನರಲ್ ಇನ್ಶೂರೆನ್ಸ್, ಎಚ್​ಡಿಎಫ್​ಸಿ ಇಆರ್​ಜಿಒ ಜನರಲ್ ಇನ್ಶೂರೆನ್ಸ್, ಐಎಫ್​ಎಫ್​ಸಿಒ-ಟಿಒಕೆಐಪಿ ಜನರಲ್ ಇನ್ಶೂರೆನ್ಸ್, ಚೋಳ ಎಂಎಸ್​ ಜನರಲ್ ಇನ್ಶೂರೆನ್ಸ್, ಫ್ಯೂಚರ್ ಜನರಲ್ ಇನ್ಶೂರೆನ್ಸ್​ ಎಂಬ ವಿಮಾ ಕಂಪನಿಗಳ ಹೆಸರು ಕೇಳುತ್ತಿದ್ದಂತೆ, ಒಳ್ಳೆಯ ಕಂಪನಿಗಳು, ಪಾಲಿಸಿ ಮಾಡಿಸಿಬಿಡೋಣ ಎಂದನಿಸುವುದು ಸಹಜ. ಆದರೆ ಈ ಕಿಡಿಗೇಡಿಗಳು ಇಂಥ ಹಲವು ಕಂಪನಿಗಳ ಹೆಸರನ್ನೇ ಬಳಸಿಕೊಂಡು ನಕಲಿ ಪಾಲಿಸಿ ಮಾಡಿ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ:7 ವರ್ಷದ ಮಗನಿಗೆ ನಿದ್ರೆ ಮಾತ್ರೆ ತಿನ್ನಿಸಿ ಸಾಯಿಸಿದ್ಲು; ಗಂಡ-ಅಪ್ಪ-ಅವಳೂ ಡಾಕ್ಟರ್; ಆದ್ರೂ ಮಾಡಿದ್ದು ಜೀವ ತೆಗೆಯೋ ಕೆಲಸ!
ಇಂಥದ್ದೊಂದು ಫೇಕ್ ಇನ್ಶೂರೆನ್ಸ್ ಪಾಲಿಸಿ ತಯಾರಿಸುವ ಜಾಲದ ಹನ್ನೊಂದು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಆ ಸಂಬಂಧ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ರಮೇಶ್, ಸಾಯಿರಾಮ್, ಗೋವರ್ಧನ್, ರಾಜು, ಪ್ರವೀಣ್, ಕೃಷ್ಣ ಸೇರಿ 11 ಜನರನ್ನು ಬಂಧಿಸಲಾಗಿದೆ. ಬಂಧಿತ ಕೃಷ್ಣನ ವಿರುದ್ಧ ಕರ್ನಾಟಕದಲ್ಲೂ ಕೆಲವು ಕೇಸ್​ಗಳು ದಾಖಲಾಗಿವೆ. ಈತನ ವಿರುದ್ಧ 2016ರಲ್ಲಿ ಬೀದರ್ ಜಿಲ್ಲೆಯ ಬಗ್ದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಇದೇ ಮಾದರಿಯ ಫೇಕ್ ಇನ್ಶೂರೆನ್ಸ್​ ಪ್ರಕರಣದಲ್ಲಿ ಭಾಗಿಯಾದ್ದರಿಂದ 2020ರಲ್ಲೂ ಕೇಸ್​ ದಾಖಲಾಗಿದ್ದು, 2020ರ ಡಿಸೆಂಬರ್ 10ರಂದು ಬೀದರ್ನ ಬಗ್ದಲ್ ಪೊಲೀಸರಿಂದ ಬಂಧಿತನಾಗಿದ್ದ. ಆದರೆ ಡಿಸೆಂಬರ್ 21ಕ್ಕೆ ಜಾಮೀನಿನ ಮೇಲೆ ಹೊರಬಂದು ಮತ್ತೆ ಅದೇ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಜಾಮೀನಿನ ಮೇಲೆ ಹೊರ ಬಂದ ಬಳಿಕ ಕರ್ನಾಟಕ ಬಿಟ್ಟು ಆಂಧ್ರಪ್ರದೇಶದಲ್ಲಿ ಕುಕೃತ್ಯ ಶುರುವಿಟ್ಟುಕೊಂಡಿದ್ದ.
ಮೋಸ ಹೇಗೆ?:ಹೈವೇ ಹಾಗೂ ಆರ್​ಟಿಒ ಕಚೇರಿಗಳ ಬಳಿ ಠಿಕಾಣಿ ಹೂಡುವ ಆರೋಪಿಗಳು ಅಲ್ಲಿ ವಾಹನಗಳ ಮಾಲಿನ್ಯ ಪರೀಕ್ಷೆ ಮಾಡುವ ಸೋಗಿನಲ್ಲಿ ತಮ್ಮ ಬಲೆ ಬೀಸುತ್ತಿದ್ದರು. ವಾಹನದ ಮಾಲಿನ್ಯ ಪರೀಕ್ಷೆ ಮಾಡುತ್ತ ವಾಹನಗಳ ಇನ್ಶೂರೆನ್ಸ್ ಬಗ್ಗೆ ವಿಚಾರಿಸುತ್ತಿದ್ದರು. ಆರ್​ಟಿಒ ಏಜೆಂಟರುಗಳಿಗೆ ಕಮಿಷನ್ ಆಸೆ ತೋರಿಸಿ ನಕಲಿ ಇನ್ಶೂರೆನ್ಸ್ ಮಾಡಿಸಿಕೊಡುತ್ತಿದ್ದರು ಎನ್ನಲಾಗಿದೆ.
SOT Shamshabad zone of#CyberabadPolicehas busted#FakeVehicle Insurance gang and apprehended 11 persons, who were involved in preparation of fake vehicle insurance policies and seized 1125 Fake Vehicle Insurance policies, (03) stamps, Computer systems and printers.pic.twitter.com/V7wcrHmwR5— Cyberabad Police (@cyberabadpolice)January 5, 2021
SOT Shamshabad zone of#CyberabadPolicehas busted#FakeVehicle Insurance gang and apprehended 11 persons, who were involved in preparation of fake vehicle insurance policies and seized 1125 Fake Vehicle Insurance policies, (03) stamps, Computer systems and printers.pic.twitter.com/V7wcrHmwR5
5ರಿಂದ 10 ಸಾವಿರ ರೂಪಾಯಿಗಳಲ್ಲಿ ವಾಹನಗಳ ಇನ್ಶೂರೆನ್ಸ್ ಮಾಡಿಸಿಕೊಡುತ್ತಿದ್ದರು. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ 1,125 ನಕಲಿ ಪಾಲಿಸಿ ದಾಖಲೆಗಳು, ಕಂಪ್ಯೂಟರ್​ಗಳು, ಲ್ಯಾಪ್​ಟಾಪ್​ಗಳು, ಸ್ಟ್ಯಾಂಪ್​, ಸ್ಕ್ಯಾನರ್​ಗಳನ್ನು ಸೈಬರಾಬಾದ್​ ಪೊಲೀಸರು ವಶಪಡಿಸಿಕೊಂಡಿರುವ ಬಗ್ಗೆ ಅಲ್ಲಿನ ಕಮಿಷನರ್ ವಿ.ಸಿ. ಸಜ್ಜನರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ವಿಧವೆ ಮನೆಗೆ ನುಗ್ಗಿ ಇಬ್ಬರು ಅಪ್ರಾಪ್ತ ಬಾಲಕರಿಂದ ಅಪ್ರಾಪ್ತ ಸಹೋದರಿಯರ ಮೇಲೆ ಅಟ್ಟಹಾಸ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 11 =
Remember me
